೧. ಪರಿಚಯ
೧. ವೇದದ ಕಾಲ
೨. 'ವೇದ' ಶಬ್ದ
೩. ವೇದಕಾಲದ ಸಮಾಜ
೨. ವೇದ ವಿಭಾಗಗಳು
೧. ಸಂಹಿತೆ
೨. ಬ್ರಾಹ್ಮಣ
೩. ಅರಣ್ಯಕ
೪. ಉಪನಿಷತ್ತು
೩. ಚತುರ್ವೇದಗಳು
೧. ಋಗ್ವೇದ
೨. ಯಜುರ್ವೇದ
೧. ಕೃಷ್ಣ
೨. ಶುಕ್ಲ
೩. ಸಾಮವೇದ
೪. ಅಥರ್ವವೇದ
೬. ವೇದ ಶಾಖೆಗಳು
೬. ವೇದ ಶಾಖೆಗಳು
೪. ವೇದಾಂಗಗಳು
೧. ಶೀಕ್ಷಾ
೧. ವರ್ಣ
೨. ಸ್ವರ
೩. ಮಾತ್ರೆ
೪. ಬಲ
೫. ಸಾಮ
೬. ಸಂತಾನ
೨. ವ್ಯಾಕರಣ
೩. ಛಂದಸ್ಸು
೪. ನಿರುಕ್ತ
೧. ಯಾಸ್ಕರು
೫. ಜ್ಯೋತಿಷ
೬. ಕಲ್ಪ
೧. ನಾಲ್ಕು ಸೂತ್ರ ವಿಭಾಗಗಳು.
೨. ಸೂತ್ರಗಳು: ಪರಿಚಯ
೧. ಆಶ್ವೀಲಾಯನ
೨. ಆಪಸ್ಥಂಬ
೩. ಬೋಧಾಯನ
೫. ವೇದಾಭ್ಯಾಸ ಕ್ರಮ
೧. ಸಂಹಿತ ಪಾಠ
೨. ಪದ ಪಾಠ
೩. ಜಟಾ ಪಾಠ
೪. ಘನ ಪಾಠ
೫. ಇತರ ವಿಕೃತಿಗಳು
೭. ವೇದಾರ್ಥ ಯತ್ನ
೧. ಪ್ರಾಚೀನ ಯತ್ನಗಳು
೨. ಆಧುನಿಕ ಯತ್ನಗಳು
೮. ಷಡ್ದರ್ಶನಗಳು - ಪರಿಚಯ
೧. ಸೂತ್ರ-ಭಾಷ್ಯ-ವಾರ್ತಿಕ-ವ್ಯಾಖ್ಯಾನ ವಿವರಣೆಗಳು
೨. ಸಾಂಖ್ಯ
೩. ಯೋಗ
೧. ಯೋಗ ಸೂತ್ರ: ಪತಂಜಲಿ
೩. ವೈಶೇಷಿಕ
೪. ನ್ಯಾಯ
೫. ಮೀಮಾಂಸ
೧. ಜೈಮಿನಿ ಸೂತ್ರಗಳು
೨. ಪ್ರಭಾಕರ
೩. ಕುಮಾರಿಲ ಭಟ್ಟ
೬. ವೇದಾಂತ
೧. ಬ್ರಹ್ಮ ಸೂತ್ರಗಳು
೨. ಶಂಕರ
೩. ರಾಮಾನುಜ
೪. ಪೂರ್ಣಪ್ರಜ್ಞ
೯. ಸ್ಮೃತಿ: ಮುಖ್ಯ ಧರ್ಮ ಸೂತ್ರಗಳು
೧. ಮನು
೨. ಯಾಜ್ಞವಲ್ಕ್ಯ
೧೦. ಪುರಾಣಗಳು: ಪರಿಚಯ
೧೧. ಉಪವೇದಗಳು: ಪರಿಚಯ
೧. ಧನುರ್ವೇದ
೨. ಆಯುರ್ವೇದ
೩. ಸ್ಥಪತ್ಯವೇದ
೪. ಗಾಂಧರ್ವವೇದ
೧೨. ರಾಮಾಯಣ: ಪರಿಚಯ
೧೩. ಮಹಾಭಾರತ: ಪರಿಚಯ
೧೪. ಉಪಸಂಹಾರ
-------------------------------------------------------------------------------------------------------------------
೧. ಪರಿಚಯ
ವೇದವೆಂದರೆ ಜ್ಞಾನ - ಇದು ನಮ್ಮೆಲ್ಲರಿಗೂ ತಿಳಿದ ಸಂಗತಿ. ಈ ಅರ್ಥಕ್ಕಿಂತ ಹೆಚ್ಚಿನದು ನಮ್ಮಲ್ಲಿ ಅನೇಕರಿಗೆ ತಿಳಿಯದು. ತಿಳಿದಿದ್ದರೂ ವೇದದ ಅನೇಕ ವಿಷಯಗಳು ಅಸ್ಪಷ್ಟ. ಉದಾಹರಣೆಗೆ ವೇದದಲ್ಲೇ ಅತಿ ಮುಖ್ಯವೆಂದು ಪರಿಗಣಿಸಿರುವ ಗಾಯತ್ರಿ ಮಂತ್ರವನ್ನು ಎಲ್ಲರೂ ತಿಳಿದಿದ್ದರೂ ಅದರ ಮಂತ್ರವು ಯಾವ ವೇದದಲ್ಲಿ ಬರುತ್ತದೆ? ಅದರ ದ್ರಷ್ಟಾರರು ಯಾರು? ಅದರ ಸ್ವರ ಮಾತ್ರೆಗಳ ವಿನ್ಯಾಸವೇನು? ಮಂತ್ರದ ಪಾಠವೇನು? ಮುಂತಾದ ವಿಷಯಗಳ ಬಗ್ಗೆ ತಿಳಿದಿರುವುದಿಲ್ಲ. ಇವುಗಳ ವಿಷಯವಾಗಿ ತಿಳಿಸುವುದೇ ಈ ಲೇಖನ ಮಾಲೆಯ ಉದ್ದೇಶ.
ದೇವುಡು ಸರಸಿಂಹಶಾಸ್ತ್ರಿಗಳು ಹೇಳುವಂತೆ ನಮ್ಮ ಭಾರತೀಯ ಸಂಸ್ಕೃತಿ ವೇದ ಸಂಸ್ಕೃತಿಯ ಪ್ರತಿಬಿಂಬ. ನಮ್ಮ ನಿತ್ಯ ಜೀವನದ ವ್ಯವಹಾರದಿಂದ ಹಿಡಿದು ನಮ್ಮ ತತ್ವ ಜಿಜ್ಞಾಸೆಯವರೆಗೂ ವೇದವೇ ಆಧಾರ. ನಾವು ನಿತ್ಯ ಹಾಡುವ ಭಕ್ತಿಗೀತೆಗಳ ಭಾವ, ಪೂಜಾ ವಿಧಾನಗಳು, ವೇದಾಂತ ಜಿಜ್ಞಾಸೆ, ನಮ್ಮ ಪೂರ್ವಿಜರ ದೇವರ ಶ್ಲೋಕಗಳು, ಜಾನಪದ, ಸೂಕ್ತಿ-ಸುಭಾಷಿತಗಳು, ಮದುವೆ, ಉಪನಯನ, ತಂದೆ - ತಾಯಿ - ಮಕ್ಕಳು - ಸಹೋದರ - ಸಹೋದರಿಯರು -ಪತಿಪತ್ನಿಯರ ಸಂಬಂಧಗಳು, ಒಂದು ಮಟ್ಟಕ್ಕೆ ನಮ್ಮ ಶಿಲ್ಪಿಕಲೆ, ಇವೆಲ್ಲವುಗಳಿಗೂ ವೇದವೇ ಸ್ಫೂರ್ತಿ. ಯಜ್ಞದಲ್ಲಿ ನೆಡುವ ಯೂಪಕ್ಕೆ ಮಾಡುವ ಸ್ತೋತ್ರದಿಂದ ಹಿಡಿದು ತತ್ರ ಕೋ ಮೋಹಃ ಕೋ ಶೋಕಃ ಏಕತ್ವಮನುಪಶ್ಯತ (ಎಲ್ಲವೂ ಒಂದೇ ಎಂಬ ಭಾವವಿರುವಲ್ಲಿ ಶೋಕ-ಮೋಹಗಳೆಲ್ಲಿ? - ಈಶೋಪನಿಷತ್ತು) ಎನ್ನುವ ಶುದ್ದ ವೇದಾಂತದವರೆಗೆ ಎಲ್ಲವೂ ವೇದಗಳಲ್ಲಿದೆ.
ವೇದ ಮಂತ್ರಗಳು ನಮಗೆ ಧಾರ್ಮಿಕ ದೃಷ್ಟಿಯಿಂದ - ಅಂದರೆ ನಿತ್ಯ (ನಿತ್ಯ ದೇವರಪೂಜೆ, ಸಂಧ್ಯಾವಂದನೆ ಮುಂತಾದವುಗಳು), ನೈಮಿತ್ತಿಕ (ಮದುವೆ, ಉಪನಯನ, ಶ್ರಾದ್ಧ ಮುಂತಾದವುಗಳು) ಮತ್ತು ಕಾಮ್ಯಕ (ವ್ರತ ಪೂಜೆ ಇತ್ಯಾದಿ) ಕರ್ಮಗಳಲ್ಲಿ ಉಪಯೋಗಿಸಿ - ಪರಿಚಯ. ಆದರೆ ವೇದಗಳ ರಚನಾ ವಿಧಾನ, ಅದರ ವಿಷಯಗಳು ಮತ್ತು ತತ್ವದ ಬಗ್ಗೆ ಹೆಚ್ಚಾಗಿ ತಿಳಿದಿರುವುದಿಲ್ಲ. ವೇದದ ತತ್ವದ ವಿಷಯ ಗಹನ ಮತ್ತು ಅದನ್ನು ತಿಳಿಯುವುದು ಕಠಿಣ. ವೇದಗಳ ಕುರಿತಾಗಿ ಸಂಪೂರ್ಣವಾಗಿ ತಿಳಿಯುವುದು ಎಲ್ಲರಿಗೂ ಸಾಧ್ಯವಿಲ್ಲವಾದರೂ, ವೇದದ ಪರಿಚಯ ಎಲ್ಲರಿಗೂ - ಕನಿಷ್ಠಪಕ್ಷ ಆಸ್ತಿಕರಿಗಾದರೂ - ತಿಳಿದಿರಬೇಕು ಎಂಬುದು ನನ್ನ ಅಭಿಪ್ರಾಯ. ಆಗಲೇ ವೇದದ ನಿಜವಾದ ಪ್ರಶಂಸೆ ಮತ್ತು ಅಧ್ಯಯನ ಸಾಧ್ಯವಾಗುತ್ತದೆ.
೧.೧. ವೇದದ ಕಾಲ
ವೇದಗಳು ಅಪೌರುಷೇಯವೆಂದು ನಮ್ಮ ನಂಬಿಕೆ. ಅಂದರೆ ವೇದಗಳು ಮನುಷ್ಯರಿಂದ ರಚಿಸಲ್ಪಟ್ಟವಲ್ಲ. ವೇದ ಋಷಿಗಳು ಮಂತ್ರ ದ್ರಷ್ಟಾರರು - ಅಂದರೆ ವೇದಗಳು ಋಷಿಗಳಿಗೆ ಮೊದಲು ಗೋಚರಿಸಿದವು - ಎಂದೇ ನಮ್ಮ ಸನಾತನ ನಂಬಿಕೆ. ಈ ದೃಷ್ಟಿಯಿಂದ ವೇದದ ಕಾಲವೆಂದರೆ ವೇದಗಳು ಋಷಿಗಳಿಗೆ ಗೋಚರಿಸಿದ ಕಾಲ.
ವೇದದ ಕಾಲದ ಬಗ್ಗೆ ಅನೇಕ ಅಭಿಪ್ರಾಯಗಳಿವೆ. ವಿವಿಧ ವಿದ್ವಾಂಸರು ವಿವಿಧ ಕಾಲಗಳನ್ನು ನಿಷ್ಕರ್ಷೆ ಮಾಡಿದ್ದಾರೆ. ಅವರು ಉಪಯೋಗಿಸಿರುವ ಮಾರ್ಗಗಳೂ ಬೇರೆಯಾಗಿವೆ. ಈ ನಿಟ್ಟಿನಲ್ಲಿ ಕೆಲವು ಪ್ರಯತ್ನಗಳು ಇಂತಿವೆ:
- ಬೌದ್ಧ ಮತ್ತು ಜೈನ ಮತಗಳ ಉದಯ: ಬೌದ್ಧ ಮತ್ತು ಜೈನ ಮತಗಳು ಸುಮಾರು ಕ್ರಿ.ಪೂ. ೬೦೦-೪೦೦ರ ನಡುವೆ ತಲೆ ಎತ್ತಿದವು. ಇವುಗಳ ಮುಖ್ಯೋದ್ದೇಶ ವೈದಿಕ ಮತದ ದೋಷಗಳನ್ನು ಖಂಡಿಸುವುದು. ಬೌದ್ಧ ಮತ್ತು ಜೈನ ಮತಗಳ ಉಗಮ ಇಂದಿನ ನೇಪಾಳ ಮತ್ತು ಬಿಹಾರದ ಪ್ರಾಂತ್ಯಗಳು. ನಮಗೆ ತಿಳಿದಂತೆ ವೇದಗಳ ಉಗಮ ಇಂದಿನ ಪಂಜಾಬ್ ಪ್ರಾಂತ್ಯದಲ್ಲಾಯಿತು. ಅಂದರೆ ಈ ಹೊತ್ತಿಗೆ ವೈದಿಕ ಮತ ಸಂಪೂರ್ಣವಾಗಿ ನೆಲೆಗೊಂಡಿರಬೇಕು ಮತ್ತು ಭಾರತದ ಮುಖ್ಯ ಪ್ರದೇಶಗಳಿಗೆ ಹರಡಿರಬೇಕು. ಅಲ್ಲದೆ ಧರ್ಮಸೂತ್ರಗಳ ರಚನೆಯೂ ಮುಗಿದಿರಬೇಕು. ಈ ಹಿನ್ನಲೆಯಲ್ಲಿ ವಿವಿಧ ವೇದ ಭಾಗಗಳನ್ನು ರಚಿಸಲು ಬೇಕಾಗುವ ಕಾಲವನ್ನು ಊಹಿಸಿ ಪಾಶ್ಚಾತ್ಯ ವಿದ್ವಾಂಸರಾದ ಮ್ಯಾಕ್ಸ್ ಮುಲ್ಲರ್ ರವರು ವೇದ ಕಾಲವನ್ನು ಸುಮಾರು ಕ್ರಿ.ಪೂ. ೧೨೦೦ ಎಂದು ಅಂದಾಜಿಸಿದ್ದಾರೆ. ಆದರೆ ವೇದದ ಗ್ರಂಥರಾಶಿಯನ್ನು ನೋಡಿದಾಗ ಕೇವಲ ೬೦೦ ವರ್ಷಗಳಲ್ಲಿ ಅಷ್ಟೆಲ್ಲವನ್ನೂ ರಚಿಸಿ - ಪ್ರಚಾರಪಡಿಸಲು ಸಾಧ್ಯವೇ ಎಂಬ ಪ್ರಶ್ನೆ ಹುಟ್ಟುತ್ತದೆ. ಆದ್ದರಿಂದ ಈ ನಿರ್ಣಯವನ್ನು ಒಪ್ಪುವುದು ಕಷ್ಟ.
- ಜ್ಯೋತಿಷ: ಇದು ವೇದ ಸಾಹಿತ್ಯದಲ್ಲಿ ಬರುವ ಜ್ಯೋತಿಷ ಅಂಶಗಳನ್ನು ಗುರುತಿಸಿ ಮಾಡಿರುವ ಕಾಲ ನಿರ್ಣಯ. ಶತಪಥಬ್ರಾಹ್ಮಣದಲ್ಲಿ ಮೇಷ ಸಂಕ್ರಮಣವು ಕೃತಿಕಾ ನಕ್ಷತ್ರದಲ್ಲಿ ಪ್ರಾರಂಭವಾಯಿತು ಎಂಬ ಸೂಚನೆಯಿದೆ. ಈ ಘಟನೆ ನಡೆದುದು ಸುಮಾರು ಕ್ರಿ.ಪೂ. ೨೫೦೦ರಲ್ಲಿ. ಇಂತಹ ಜ್ಯೋತಿಷದ ಎಳೆಗಳನ್ನು ಹಿಡಿದು ಮತ್ತೊಬ್ಬ ಪಾಶ್ಚಾತ್ಯ ವಿದ್ವಾಂಸರಾದ ಜೆಕೋಬಿಯವರು ವೇದದ ಕಾಲವನ್ನು ಸುಮಾರು ಕ್ರಿ.ಪೂ. ೪೦೦೦ದಿಂದ ಕ್ರಿ.ಪೂ. ೨೫೦೦ ಎಂದು ಹೇಳಿದ್ದಾರೆ. ಲೋಕಮಾನ್ಯ ತಿಲಕರು ಇದೇ ಮಾರ್ಗವನ್ನನುಸರಿಸಿ ಕ್ರಿ.ಪೂ.೬೦೦೦ ಎಂದು ಹೇಳಿದ್ದಾರೆ. ಆದರೆ ಇದರಲ್ಲೂ ಕೆಲವು ದೋಷಗಳಿವೆ. ವಿದ್ವಾಂಸರ ಪ್ರಕಾರ ವೇದಗಳಲ್ಲಿ ಸಂಕ್ರಮಣದ ವಿಷಯವೇ ಬಂದಿಲ್ಲ. ಜೆಕೋಬಿ ಮತ್ತು ತಿಲಕರು ಈ ವೇದಭಾಗದ ಅರ್ಥವನ್ನು ತಪ್ಪಾಗಿ ಅರ್ಥೈಸಿದ್ದಾರೆ ಎಂಬುದು ಅವರ ಅಭಿಪ್ರಾಯ.
- ವೇದ ಪ್ರಚಾರ: ವೇದಗಳು ಕ್ರಿ.ಪೂ. ೩೦೦ರಲ್ಲಿ ದಕ್ಷಿಣ ಭಾರತದಲ್ಲಿ ಪ್ರಚಲಿತದಲ್ಲಿದ್ದವು ಎಂದು ತಿಳಿದು ಬರುತ್ತದೆ. ಉತ್ತರದಲ್ಲಿ ಜನಿಸಿದ ವೇದಗಳು ಅಂದಿನ ಪರಿಸ್ಥಿತಿಗಳಲ್ಲಿ ದಕ್ಷಿಣದಲ್ಲಿ ಹರಡಲು ಬೇಕಾಗುವ ಕಾಲವನ್ನು ಊಹಿಸಿ ಕೆಲವರು ವೇದಗಳು ಸುಮಾರು ಕ್ರಿ.ಪೂ.೧೨೦೦ರಲ್ಲಿ ರಚಿಸಿದವು ಎಂದು ಅಭಿಪ್ರಾಯ ಪಡುತ್ತಾರೆ. ಆದರೆ ಈ ಮಾರ್ಗದಲ್ಲಿ ಅನೇಕ ಊಹೆಗಳಿರುವ ಕಾರಣ ಇದು ಮಾನ್ಯವಾಗಿಲ್ಲ.
- ಕೆಲವರು ವೇದ ಭಾಷೆ ಮತ್ತು ಇರಾನಿನ ಜೋರಾಷ್ಟ್ರಿಯನ್ ಭಾಷೆಗೂ ಇರುವ ಕೆಲವು ಸಾಮ್ಯತೆಗಳನ್ನು ಗುರುತಿಸಿ ವೇದ ಕಾಲವನ್ನು ಸುಮಾರು ಕ್ರಿ.ಪೂ. ೩೦೦೦ ಎಂದು ಹೇಳಿದ್ದಾರೆ. ಆದರೆ ಭಾಷಾಸಾಮ್ಯದಿಂದ ಕಾಲವನ್ನು ಗುರುತಿಸಿವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯವೂ ಇದೆ.
- ಭಾರತೀಯ ಧರ್ಮಸೂತ್ರಗಳ ಇತಿಹಾಸವನ್ನು ಸಮಗ್ರವಾಗಿ ಅಧ್ಯಯನ ಮಾಡಿರುವ ವಿದ್ವಾನ್ ಪಾಂಡುರಂಗ ವಾಮನ ಕಾಣೆಯವರು ತಮ್ಮ 'History of Dharmashastras' ಎಂಬ ಗ್ರಂಥದಲ್ಲಿ ವೇದಗಳ ಕಾಲವನ್ನು ಸುಮಾರು ಕ್ರಿ.ಪೂ. ೧೦೦೦೦ - ಕ್ರಿ.ಪೂ. ೪೦೦೦ ಎಂದು ಅಂದಾಜಿಸಿದ್ದಾರೆ.
ಒಟ್ಟಿನಲ್ಲಿ ವೇದಕಾಲವನ್ನು ಗುರುತಿಸಲು ಮಾಡಿದ ಯಾವ ಪ್ರಯತ್ನಗಳೂ ಎಲ್ಲರೂ ಒಪ್ಪುವಂತೆ ಸಂಪೂರ್ಣವಾಗಿ ಸಫಲವಾಗಿಲ್ಲ. ನಮ್ಮ ದೇಶದ ಒಟ್ಟು ಸಾಹಿತ್ಯವನ್ನೂ, ವೇದ ಸಾಹಿತ್ಯದ ಪರಿಮಾಣವನ್ನೂ ಪರಿಶೀಲಿಸಿ, ಬೌದ್ಧ-ಜೈನ ಮತಗಳ ಉಗಮ-ಪ್ರಚಾರಗಳನ್ನು ಗಣನೆಗೆ ತೆಗೆದುಕೊಂಡು ವೇದಕಾಲವನ್ನು ಕ್ರಿ.ಪೂ.೪೫೦೦-೧೨೦೦ ಎಂದು ಪರಿಗಣಿಸಬಹುದು.
೧.೨. ವೇದ ಶಬ್ದದ ಉತ್ಪತ್ತಿ
'ವೇದ' ಸಂಸ್ಕೃತ ಪದ. ವೇದ ಪದದ ಮೂಲ 'ವಿದ್' ಎಂಬ ಧಾತು. ವಿದ್ ಧಾತುವಿಗೆ ಇರುವುದು, ತಿಳಿಯುವುದು, ವಿಚಾರಮಾಡುವುದು ಎಂಬ ಅರ್ಥಗಳಿವೆ. ಅಂತೆಯೇ ವೇದವೆಂದರೆ ತಿಳಿಯುವುದು, ಜ್ಞಾನ ಎಂದರ್ಥ.
ಹಾಗಾದರೆ ಯಾವುದೆಲ್ಲ ವೇದ? ಈ ಪ್ರಶ್ನೆಗೆ ಉತ್ತರವನ್ನು ವೇದದಿಂದಲೇ ತಿಳಿಯಬಹುದು. ಕೃಷ್ಣ ಯಜುರ್ವೇದ ಹೇಳುತ್ತದೆ:
ವೇದೇನ ವೈ ದೇವಾ ಅಸುರಾಣಾಮ್ ವಿತ್ತಂ ವೇದ್ಯಮವಿಂದಂತ ತದ್ವೇದಸ್ಯ ವೇದತ್ವಮ್
ದೇವತೆಗಳು ಅಸುರರ ಸ್ಥಿತಿಗಳನ್ನು ವೇದಗಳಿಂದ ತಿಳಿದರು. ಆದ್ದರಿಂದ ಇದು ವೇದ.
ಚತುರ್ವೇದಗಳಿಗೂ ಭಾಷ್ಯವನ್ನು ಬರೆದ ಸಾಯಣಾಚಾರ್ಯರು ವೇದದ ಲಕ್ಷಣವನ್ನು ಸ್ಪಷ್ಟವಾಗಿ ತಿಳಿಯುವುದು ಕಷ್ಟವೆಂದು ಅಭಿಪ್ರಾಯ ಪಡುತ್ತಾರೆ. ಅವರ ಪ್ರಕಾರ ವೇದವೆಂದರೆ ಮಂತ್ರ ಮತ್ತು ಬ್ರಾಹ್ಮಣಗಳ ಸಮುಚ್ಚಯ.
ತಚ್ಚೊದಕೇಷು ಮಂತ್ರಾಖ್ಯಾ। ಶೇಷೇ ಬ್ರಾಹ್ಮಣ ಶಬ್ದಃ।
ಯಜ್ಞಗಳಲ್ಲಿ ಉಪಯೋಗಿಸುವ ದೇವತಾ ಸ್ತೋತ್ರ ರೂಪಕವಾದ ವಾಕ್ಯಗಳು ಮಂತ್ರಗಳು. ಮಿಕ್ಕವೆಲ್ಲ ಬ್ರಾಹ್ಮಣಗಳು.
ದಯಾನಂದ ಸರಸ್ವತಿಗಳು ಮನುಷ್ಯರು ಯಾವುದರಿಂದ ಎಲ್ಲ ವಿದ್ಯೆಗಳನ್ನು ತಿಳಿದುಕೊಳ್ಳುತ್ತಾರೋ ಅದನ್ನು ವೇದವೆಂದು ಕರೆಯಬಹುದು ಎಂದು ಹೇಳುತ್ತಾರೆ.
ಒಟ್ಟಿನಲ್ಲಿ ಸಂಪ್ರದಾಯವಾಗಿ ನಮ್ಮ ಪರಂಪರೆಯಿಂದ ಬಂದ ಋಗ್, ಯಜಸ್ಸು, ಸಾಮ ಮತ್ತು ಅಥರ್ವಗಳ ಸಂಹಿತೆ, ಬ್ರಾಹ್ಮಣ, ಅರಣ್ಯಕ ಮತ್ತು ಉಪನಿಷತ್ತಿನ ಗ್ರಂಥ ರಾಶಿಯನ್ನು ವೇದಗಳೆಂದು ಪರಿಗಣಿಸಲಾಗುತ್ತದೆ.
೧. ೩. ವೇದ ಕಾಲದ ಸಾಮಾಜಿಕ ಜೀವನ
ವೇದ ಕಾಲದ ಸಾಮಾಜಿಕ ಜೀವನವನ್ನು ವೇದಗಳಿಂದಲೇ ತಿಳಿಯಬಹುದು. ಕೆಲವರು ವೇದಗಳನ್ನು ಐತಿಹಾಸಿಕ ಗ್ರಂಥಗಳೆಂದೂ ತಿಳಿಯುತ್ತಾರೆ. ವೇದಗಳೇ ತಿಳಿಸುವಂತೆ ಆ ಕಾಲದ ಸಾಮಾಜಿಕ ಜೀವನದ ಮುಖ್ಯಾಂಶಗಳು ಇಂತಿವೆ:
- ಋಗ್ವೇದ ಕಾಲದ ವೈದಿಕರು ಸಿಂಧೂ ಮತ್ತು ಅದರ ಉಪನದಿಗಳ ತೀರದಲ್ಲಿ ವಾಸಿಸುತ್ತಿದ್ದು ಕ್ರಮೇಣ ಗಂಗಾ ನದಿಯ ಕಡೆ ಹರಡಿದರು. ಗಂಗಾ ನದಿಯ ಹೆಸರು ಋಗ್ವೇದದ ಕೊನೆಯ ಮಂಡಲದಲ್ಲಿ ಒಂದು ಬಾರಿ ಮಾತ್ರ ಬಂದಿದೆ. ಸಿಂಧೂ ಮತ್ತು ಅದರ ಉಪನದಿಗಳ ಹೆಸರುಗಳು ಅನೇಕ ಬಾರಿ ಬಂದಿದೆ. ಅಂದರೆ ವೈದಿಕರು ಮೊದಲಿಗೆ ಇಂದಿನ ಪಂಜಾಬು ಮತ್ತು ಆಫ್ಗಾನಿಸ್ತಾನ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದರು ಮತ್ತು ಕ್ರಮೇಣ ಗಂಗಾ ನದಿಯ ಕಡೆ ಹರಡಿದರು.
- ಮಂತ್ರಗಳಲ್ಲಿ ಕೋಟೆ, ಹಳ್ಳಿ, ಪಟ್ಟಣ, ಶತ್ರುಗಳಿಂದ ರಕ್ಷಣೆ ಮುಂತಾದ ವಿಷಯಗಳಿವೆ. ಶತೃವಿನಿಂದ ರಕ್ಷಿಸು ಎಂಬ ಮಂತ್ರಗಳು ಸಾಕಷ್ಟಿವೆ. ಇದರಿಂದ ಯುದ್ಧಗಳು ಸಾಮಾನ್ಯವಾಗಿದ್ದವೆಂದು ತೋರುತ್ತದೆ.
- ವೇದ ಜೀವನ ಯಜ್ಞ ಜೀವನ. ಜನರು ಯಾಜ್ಞಿಕವಾದ ಕರ್ಮಗಳನ್ನು ನಿತ್ಯ ಮಾಡುತ್ತಿದ್ದರು. ಯಜ್ಞದ ಪ್ರತಿಯೊಂದು ಕರ್ಮಗಳಿಗೂ ಪ್ರತ್ಯೇಕ ಮಂತ್ರಗಳಿವೆ.
- ಜನರ ಮುಖ್ಯ ಉದ್ಯೋಗಗಳು ಕೃಷಿ ಮತ್ತು ಪಶುಸಂಗೋಪನೆ. ಅನೇಕ ಮಂತ್ರಗಳಲ್ಲಿ ಗೋವು, ಕುರಿ, ಮೇಕೆ, ಕುದುರೆಗಳನ್ನು ಬೇಡುವ ಮಂತ್ರಗಳಿವೆ. ಅದರಲ್ಲಿಯೂ ಗೋವಿಗೆ ವಿಶೇಷ ಸ್ಥಾನವಿದೆ.
- ಯವ, ಹುರಿದ ಧಾನ್ಯಗಳು, ಮೊಸರು, ಹಾಲು, ಮೊಸರು ಅಥವಾ ತುಪ್ಪದೊಡನೆ ಬೆರಸಿದ ಹಿಟ್ಟು ಇವುಗಳ ಪ್ರಸ್ತಾಪ ತುಂಬಾ ಬಂದಿದೆ. ಬಹುಶಃ ಹೋಮಾದಿಗಳಲ್ಲಿ ಪಶು ಖಂಡನವಿದ್ದಿರಬಹುದು. ಮಾಂಸಾಹಾರ ಮತ್ತು ಸೋಮಪಾನಗಳು ರೂಢಿಯಲ್ಲಿದ್ದವು. ಸುರಾ ಪಾನದ ಬಗ್ಗೆಯೂ ಒಂದೆರೆಡು ಕಡೆ ಉಲ್ಲೇಖವಿದೆ.
- ವೇದಕಾಲದ ಜನರಿಗೆ ನೌಕಾಯಾನದ ಬಗ್ಗೆ ತಿಳಿದಿತ್ತು. ರಥಗಳ ತಯಾರಿ, ಬಟ್ಟೆ ನೇಯುವುದು, ಹಗ್ಗ ಹೊಸೆಯುವುದು, ಚರ್ಮದ ಪದಾರ್ಥಗಳನ್ನು ತಯಾರಿಸುವುದು ಇವು ಇತರ ಕಸುಬುಗಳು. ಅಶ್ವಾರೋಹಣ ಸರ್ವೇ ಸಾಮಾನ್ಯವಾಗಿದ್ದಿತು. ಕಳ್ಳರ ಕಾಟಗಳ ಬಗ್ಗೆಯೂ ಕೆಲವೆಡೆ ಹೇಳಿದೆ.
- ಮನೆಗೆ ತಂದೆಯೇ ಯಜಮಾನ. ವಿವಾಹವು ಬಹಳ ಪವಿತ್ರವೆಂಬ ಭಾವನೆಯಿತ್ತು. ಹೆಂಡತಿಗೆ ಮನೆಯಲ್ಲಿ ವಿಶೇಷ ಸ್ಥಾನವಿತ್ತು. ಮನೆಯವರ ಯೋಗಕ್ಷೇಮಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಪತ್ನಿಯದು. ಹೋಮ ಹವನಗಳಲ್ಲಿ ಪತ್ನಿಗೆ ಪತಿಗೆ ಸಮನಾದ ಸ್ಥಾನವಿತ್ತು. ಪತಿ ಮನೆಯಲ್ಲಿಲ್ಲದಾಗ ಪತ್ನಿಯೊಬ್ಬಳೇ ಹೋಮ ಮಾಡಬಹುದಾಗಿತ್ತು. ಏಕಪತ್ನೀತ್ವವೇ ರೂಢಿಯಲ್ಲಿತ್ತು. ಕ್ಷತ್ರಿಯರಲ್ಲಿ ಬಹುಪತ್ನಿ ಪದ್ಧತಿಯಿತ್ತೆಂದು ತೋರುತ್ತದೆ. ಔರಸ ಪುತ್ರನಿಗೆ ಹೆಚ್ಚಿನ ಸ್ಥಾನವಿತ್ತು.
- ವಿವಾಹವು ಪವಿತ್ರವೆಂಬ ಭಾವನೆಯಿದ್ದಿದ್ದರಿಂದ ಪುನರ್ವಿವಿವಾಹವು ರೂಡಿಯಲ್ಲಿರಲಿಲ್ಲ. ಆದರೆ ವಿಧವೆಯು ತನ್ನ ಮೈದುನನನ್ನು ಗಂಡುಮಗುವಿಗಾಗಿ ವಿವಾಹವಾಗಬಹುದಾಗಿತ್ತು. ಅಥರ್ವವೇದದಲ್ಲಿ ಮಾತ್ರ ಸಹಗಮನವು ಬಹಳ ಹಿಂದೆ ರೂಢಿಯಲ್ಲಿತ್ತು ಎಂದು ಹೇಳಿದೆ. ಬೇರೆ ಕಡೆಯಲ್ಲೆಲ್ಲೂ ಸಹಗಮನದ ಪ್ರಸ್ತಾಪವಿಲ್ಲ. ಇದರಿಂದ ಸಹಗಮನವು ಕಡ್ಡಾಯವಾಗಿರಲಿಲ್ಲವೆಂದು ಊಹಿಸಬಹುದು. ವಿಧವೆಯರಿಗೆ ಆಸ್ತಿಯಲ್ಲಿ ಪಾಲಿತ್ತು.
- ರಾಜರು ತಮ್ಮಲ್ಲಿ ಒಬ್ಬ ಪುರೋಹಿತರನ್ನು ಇಟ್ಟುಕೊಂಡಿರುತ್ತಿದ್ದರು. ಮನೆಯಲ್ಲಿ ನಡೆಯುವ ಎಲ್ಲ ಕರ್ಮಗಳೂ ಪುರೋಹಿತರ ಮೂಲಕವೇ ಮಾಡುತ್ತಿದ್ದರು. ಅವರಿಗೆ ಯಥೇಚ್ಛವಾಗಿ ದಾನಗಳನ್ನೂ ಮಾಡುತ್ತಿದ್ದರು.
- ವೇದಕಾಲದಲ್ಲಿ ವಿಗ್ರಹಗಳ ಪ್ರಸ್ತಾಪವೇ ಇಲ್ಲ. ವೇದಕಾಲದ ಜನರ ಪೂಜಾ ರೀತಿ ಯಜ್ಞರೂಪದ್ದು. ಇಂದ್ರ, ಮರುತ್ತುಗಳು, ಅಗ್ನಿ, ವಿಷ್ಣು, ರುದ್ರ, ಅಶ್ವಿನಿ ದೇವತೆಗಳು, ವೃಕ್ಷಗಳು, ಆದಿತ್ಯ, ಉಷೆ ಮುಂತಾದ ದೇವತೆಗಳ ಸ್ತೋತ್ರಗಳು ಬಹಳ ಇವೆ. ಆದರೆ ಇವರೆಲ್ಲರಿಗೂ ಅಗ್ನಿಯೇ ಹವಿರ್ದಾತ. ಮುಖ್ಯವಾಗಿ ವೇದ ಕಾಲದ ಪೂಜೆ ಯಜ್ಞ.
- ವೇದಗಳಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಅಷ್ಟಾಗಿ ಆಧಾರ ಸಿಕ್ಕುವುದಿಲ್ಲ. ಋಗ್ವೇದದ ೧೦ನೆಯ ಮಂಡಲದ ಪುರುಷ ಸೂಕ್ತದ, 'ಬ್ರಾಹ್ಮಣೋಸ್ಯ ಮುಖಮಾಸೀತ್ ಬಾಹೂ ರಾಜನ್ಯ ಕೃತಃ ಊರೂ ತದಸ್ಯ ಯದ್ವೈಷ್ಯ ಪದ್ಭ್ಯಾಮ್ ಶೂದ್ರೋ ಅಜಾಯಥಾ'(ವಿರಾಟ್ ಪುರುಷನ ಮುಖದಿಂದ ಬ್ರಾಹ್ಮಣನೂ, ಬಾಹುಗಳಿಂದ ಕ್ಷತ್ರಿಯನೂ, ಉದರದಿಂದ ವೈಶ್ಯನೂ, ಕಾಲುಗಳಿಂದ ಶೂದ್ರನೂ ಜನಿಸಿದನು.)ಎಂಬ ಮಂತ್ರದಲ್ಲಿ ಮಾತ್ರ ಜಾತಿಯ ಹೆಸರುಗಳು ಬಂದಿದೆ. ಇದರಲ್ಲಿ ಕೆಲವು ತಕರಾರುಗಳಿವೆ. ಕೆಲವರು ಇದು ಋಗ್ವೇದದಲ್ಲಿ ಮೊದಲಿರಲಿಲ್ಲ. ನಂತರದಲ್ಲಿ ಈ ಮಂತ್ರವನ್ನು ಸೇರಿಸಿದರು ಎನ್ನುತ್ತಾರೆ. ಇನ್ನು ಕೆಲವರು ಆಯಾ ಗುಂಪಿನವರು ಆಯಾ ಅಂಗಗಳನ್ನು ಉಪಯೋಗಿಸಿ ಕೆಲಸ ಮಾಡುವವರು ಎಂದಿದ್ದಾರೆ. ಎಂದರೆ ವಿದ್ಯೆಯಿರುವವನು ಬ್ರಾಹ್ಮಣನಾದನು, ಬಾಹುಬಲದವನು ಕ್ಷತ್ರಿಯ, ಕೃಷಿಕ ವೈಶ್ಯ, ದೇಹಶ್ರಮದಿಂದ ಕೆಲಸಮಾಡುವವನು ಶೂದ್ರ ಎಂಬ ಅಭಿಪ್ರಾಯವಾಗುತ್ತದೆ. ಜಾತಿ ಸಂಬಂಧಿತವಾದ ಮಂತ್ರಗಳನ್ನು ಸೇರಿಸಬೇಕೆಂದಿದ್ದರೆ ಕೇವಲ ಒಂದೇ ಒಂದು ಮಂತ್ರವನ್ನು ಸೇರಿಸುತ್ತಿರಲಿಲ್ಲ. ಅಥರ್ವವೇದ ಮತ್ತು ಕೃಷ್ಣಯಜುರ್ವೇದಗಳಲ್ಲಿ ಕೆಲವೆಡೆ ಚಾತುರ್ವರ್ಣ್ಯಗಳ ಹೆಸರುಗಳು ಬಂದಿದೆ. ಆದರೆ ವೇದೋತ್ತರ ಕಾಲದಲ್ಲಿ ಪ್ರಚಾರದಲ್ಲಿದ್ದಂತೆ ಹುಟ್ಟಿನಿಂದ ಜಾತಿ ಎಂದು ವೇದದಲ್ಲೆಲ್ಲೂ ಹೇಳಿಲ್ಲ. ಆದ್ದರಿಂದ ಈ ವಾದಗಳಲ್ಲಿ ಎರಡನೆಯ ವಾದವನ್ನು ಒಪ್ಪಬಹುದು.
- ವೇದ ಕಾಲದ ಜನರು ಕವಿಗಳೂ, ವಾಗ್ಮಿಗಳೂ, ತತ್ವಶಾಸ್ತ್ರಜ್ಞರೂ, ಗಾಯಕರೂ ಆಗಿದ್ದರೆಂಬುದು ನಿರ್ವಿವಾದ.
೨. ವೇದ ವಿಭಾಗಳು
ನಮ್ಮ ಪ್ರಾಚೀನ ಸಂಸ್ಕೃತ ಸಾಹಿತ್ಯವನ್ನು ಶ್ರುತಿ, ಸ್ಮೃತಿ, ಪುರಾಣಗಳೆಂಬ ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ. ಕೇಳಿಸಿಕೊಳ್ಳುವುವು ಶ್ರುತಿಗಳು. ನೆನಪಿನಲ್ಲಿಟ್ಟುಕೊಳ್ಳುವುವು ಸ್ಮೃತಿಗಳು. ದೇವ ದೇವತೆಗಳ ಕಥೆಗಳು ಪುರಾಣಗಳು. ವೇದಗಳು ಶ್ರುತಿ ಭಾಗಕ್ಕೆ ಸೇರುತ್ತವೆ.
ಶ್ರುತಿಗಳಾದ ವೇದಗಳು ನಾಲ್ಕು: ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ. ಪ್ರತಿಯೊಂದು ವೇದದಲ್ಲಿಯೂ ಸಂಹಿತಾ ಭಾಗ, ಬ್ರಾಹ್ಮಣ, ಅರಣ್ಯಕಗಳೆಂಬ ಉಪವಿಭಾಗಗಳಿವೆ. ಒಂದು ವೇದಕ್ಕೆ ಒಂದೇ ಸಂಹಿತೆಯಿರುತ್ತದೆ. ಆದರೆ ಬ್ರಾಹ್ಮಣ, ಅರಣ್ಯಕಗಳು ಒಂದಕ್ಕಿಂತ ಹೆಚ್ಚಾಗಿರಬಹುದು. ಋಗ್ವೇದ ಸಂಹಿತೆಯನ್ನು ಋಗ್ಸಂಹಿತೆಯೆಂದೂ, ಯಜುರ್ವೇದ ಸಂಹಿತೆಯನ್ನು ಯಜುಸ್ಸಂಹಿತೆಯೆಂದೂ, ಸಾಮವೇದದ್ದನ್ನು ಸಾಮಸಂಹಿತೆಯೆಂದೂ, ಅಥರ್ವವೇದದ್ದನ್ನು ಅಥರ್ವಸಂಹಿತೆಯೆಂದೂ ಕರೆಯುತ್ತಾರೆ.

೨.೧. ಸಂಹಿತೆಗಳು
ಸಂಹಿತೆಗಳು ವೇದಗಳ ಮುಖ್ಯಭಾಗಳು. ಸ್ಥೂಲವಾಗಿ ಸಂಹಿತೆಗಳನ್ನೇ ವೇದಗಳೆನ್ನಬಹುದು. ಬ್ರಾಹ್ಮಣಗಳು ಸಂಹಿತೆಗಳ ಪರಿಶಿಷ್ಟಗಳು(appendix). ಸಂಹಿತೆಯೆಂದರೆ ಬೇರೆಬೇರೆ ಋಷಿಗಳಿಗೆ ದ್ರಷ್ಟವಾದ ಮಂತ್ರಗಳನ್ನು ಒಂದು ಕ್ರಮದಲ್ಲಿ ಸೇರಿಸಿ ಒಂದು ಕಡೆ ಒಟ್ಟುಗೂಡಿಸಿರುವುದು ಎಂದರ್ಥ.
ಹಿಂದೆಯೇ ಹೇಳಿದಂತೆ ಸಂಹಿತೆಗಳು ನಾಲ್ಕು. ಇವು ವೇದದ ಮುಖ್ಯ ಆಶಯಗಳನ್ನು ತೋರಿಸಿಕೊಡುತ್ತವೆ. ಯಜ್ಞಗಳಲ್ಲಿ ಉಪಯೋಗಿಸುವ ಮಂತ್ರಗಳು ಸಂಹಿತಾಭಾಗದ ಮಂತ್ರಗಳು. ಇವು ಮುಖ್ಯವಾಗಿ ದೇವತಾರೂಪವಾಗಿರುತ್ತವೆ. ಪ್ರತಿಯೊಂದು ಮಂತ್ರಕ್ಕೂ ಋಷಿ ಮತ್ತು ದೇವತೆಗಳಿರುತ್ತಾರೆ. ಸಂಹಿತಾ ಮಂತ್ರಗಳನ್ನು ಆಯಾ ದೇವತೆಗಳ ಸ್ತೋತ್ರಗಳಿಗೆ ತಕ್ಕಂತೆ ಒಟ್ಟಾಗಿ ಸೇರಿಸಿದ್ದಾರೆ ಮತ್ತು ಅಧ್ಯಯನದ ಅನುಕೂಲಕ್ಕಾಗಿ ಕ್ರಮವಾಗಿ ವಿಂಗಡಿಸಿದ್ದಾರೆ.
ವೇದ ಕಾಲದ ಧಾರ್ಮಿಕತೆ ಯಾಜ್ಞಿಕವಾದದ್ದು. ಸಂಹಿತೆಗಳ ಮಂತ್ರಗಳನ್ನು ಮುಖ್ಯವಾಗಿ ಈ ಯಜ್ಞಗಳಲ್ಲಿ ಉಪಯೋಗಿಸಲಾಗುತ್ತದೆ. ಯಾವ ಮಂತ್ರವನ್ನು ಯಾವ ಯಜ್ಞದಲ್ಲಿ ಉಪಯೋಗಿಸಬೇಕು ಎಂಬುದನ್ನು ಬ್ರಾಹ್ಮಣಗಳಿಂದ ಮತ್ತು ಸೂತ್ರ ಗ್ರಂಥಗಳಿಂದ ತಿಳಿಯಬೇಕು (ಸೂತ್ರಗ್ರಂಥಗಳು ಸ್ಮೃತಿಗಳು). ಪ್ರತಿಯೊಂದು ಯಜ್ಞದಲ್ಲಿಯೂ ಹೋತೃ, ಉದ್ಗಾತೃ, ಅಧ್ವರ್ಯು ಮತ್ತು ಬ್ರಹ್ಮರೆಂಬ ನಾಲ್ಕು ಜನ ಮುಖ್ಯ ಋತ್ವಿಕ್ಕುಗಳಿರುತ್ತಾರೆ. ಋಗ್ವೇದದ ಋತ್ವಿಕ್ಕನ್ನು ಹೋತೃವೆಂದೂ, ಸಾಮವೇದದ ಋತ್ವಿಕ್ಕನ್ನು ಉದ್ಗಾತೃವೆಂದೂ, ಯಜುರ್ವೇದದ ಋತ್ವಿಕ್ಕನ್ನು ಅಧ್ವರ್ಯುವೆಂದೂ ಮತ್ತು ನಾಲ್ಕೂ ವೇದಗಳನ್ನು ತಿಳಿದ ಋತ್ವಿಕ್ಕನ್ನು ಬ್ರಹ್ಮನೆಂದೂ ಕರೆಯುತ್ತಾರೆ. ಹೋತೃ ಋಗ್ವೇದ ಸಂಹಿತಾ ಮಂತ್ರಗಳಿಂದ ದೇವತೆಗಳನ್ನು ಆಹ್ವಾನಿಸುತ್ತಾನೆ. ಆವಾಹನ ಮಾಡುವ ಮಂತ್ರಗಳಿಗೆ ಪುರೋನುವಾಕ್ಯ ಎಂದು ಹೆಸರು. ಆವಾಹನೆಯ ನಂತರ ಯಜ್ಞದಲ್ಲಿ ಹೋಮ ಮಾಡಲು ಋಗ್ವೇದ ಸಂಹಿತೆಯವೇ ಆದ ಮಂತ್ರಗಳನ್ನು ಪಠಿಸುತ್ತಾನೆ. ಇವಕ್ಕೆ ಯಜ್ಯಾ ಮಂತ್ರಗಳೆಂದು ಹೆಸರು. ಹೋತೃವು ದೇವತಾ ಮಂತ್ರಗಳನ್ನು ಮಾತ್ರ ಪಠಿಸುತ್ತಾನೆ. ತಾನೇ ಹೋಗಿ ಯಜ್ಞ ಮಾಡುವುದಿಲ್ಲ. ಉದ್ಗಾತೃ ದೇವತೆಗಳ ತೃಪ್ತಿಗಾಗಿ ಸಾಮಗಾನವನ್ನು ಮಾಡುತ್ತಾನೆ. ಇವು ಸಾಮ ಸಂಹಿತೆಯ ಮಂತ್ರಗಳು. ಅಧ್ವರ್ಯುವು ಯಜುಸ್ಸಂಹಿತೆಯ ಮಂತ್ರಗಳಿಂದ ಹೋಮ ಮಾಡುತ್ತಾನೆ. ಬ್ರಹ್ಮ ಯಜ್ಞದ ಒಟ್ಟಾರೆ ಮೇಲ್ವಿಚಾರಕನಾಗಿರುತ್ತಾನೆ. ಬ್ರಹ್ಮನಾದ ಋತ್ವಿಜನಿಗೆ ನಾಲ್ಕೂ ವೇದಗಳ ಮಂತ್ರಗಳೂ ತಿಳಿದಿರಬೇಕು. ಹೀಗೆ ಸಂಹಿತಾ ಮಂತ್ರಗಳ ವಿನಿಯೋಗ.
ಬ್ರಾಹ್ಮಣಗಳು ಸಂಹಿತಾಭಾಗದ ಪರಿಶಿಷ್ಟಗಳು. ಸಂಹಿತಾ ಮಂತ್ರಗಳನ್ನು ಅರ್ಥಮಾಡಿಕೊಳ್ಳಲು ಕೆಲವು ಬಾರಿ ಕಷ್ಟವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಬ್ರಾಹ್ಮಣಗಳು ಸಹಾಯವಾಗುತ್ತವೆ. ಇದೇ ಅಲ್ಲದೆ, ಬ್ರಾಹ್ಮಣಗಳಲ್ಲಿ ಸಂಹಿತಾ ಭಾಗದಲ್ಲಿರುವ ಕೆಲವು ಮಂತ್ರಗಳಿಗೆ ವಿನಿಯೋಗಗಳೂ, ಸಂಹಿತಾ ಭಾಗದಲ್ಲಿ ಹೇಳಲ್ಪಟ್ಟಿರುವ ಯಜ್ಞಗಳ ವಿಧಾನವೂ, ಸಂಹಿತಾ ಭಾಗದ ದೇವತೆಗಳ ಕೆಲವು ಉಪಕಥೆಗಳೂ ಇರುತ್ತವೆ. ಯಜ್ಞ ಕರ್ಮಗಳನ್ನು ತಿಳಿಸುವ ಗ್ರಂಥಗಳನ್ನು ಬ್ರಾಹ್ಮಣಗಳು ಎನ್ನಬಹುದು. ಬ್ರಾಹ್ಮಣಗಳು ಸಂಹಿತಾ ಭಾಗಗಳ ನಂತರ ರಚಿಸಲ್ಪಟ್ಟುವು. ಆದ್ದರಿಂದ ಇವುಗಳ ಭಾಷೆ ಸಂಹಿತಾ ಭಾಷೆಗಿಂತ ಸ್ವಲ್ಪ ಭಿನ್ನ.ಹಿಂದೆಯೇ ಹೇಳಿದಂತೆ ಸಂಹಿತೆಗಳು ನಾಲ್ಕು. ಇವು ವೇದದ ಮುಖ್ಯ ಆಶಯಗಳನ್ನು ತೋರಿಸಿಕೊಡುತ್ತವೆ. ಯಜ್ಞಗಳಲ್ಲಿ ಉಪಯೋಗಿಸುವ ಮಂತ್ರಗಳು ಸಂಹಿತಾಭಾಗದ ಮಂತ್ರಗಳು. ಇವು ಮುಖ್ಯವಾಗಿ ದೇವತಾರೂಪವಾಗಿರುತ್ತವೆ. ಪ್ರತಿಯೊಂದು ಮಂತ್ರಕ್ಕೂ ಋಷಿ ಮತ್ತು ದೇವತೆಗಳಿರುತ್ತಾರೆ. ಸಂಹಿತಾ ಮಂತ್ರಗಳನ್ನು ಆಯಾ ದೇವತೆಗಳ ಸ್ತೋತ್ರಗಳಿಗೆ ತಕ್ಕಂತೆ ಒಟ್ಟಾಗಿ ಸೇರಿಸಿದ್ದಾರೆ ಮತ್ತು ಅಧ್ಯಯನದ ಅನುಕೂಲಕ್ಕಾಗಿ ಕ್ರಮವಾಗಿ ವಿಂಗಡಿಸಿದ್ದಾರೆ.
ವೇದ ಕಾಲದ ಧಾರ್ಮಿಕತೆ ಯಾಜ್ಞಿಕವಾದದ್ದು. ಸಂಹಿತೆಗಳ ಮಂತ್ರಗಳನ್ನು ಮುಖ್ಯವಾಗಿ ಈ ಯಜ್ಞಗಳಲ್ಲಿ ಉಪಯೋಗಿಸಲಾಗುತ್ತದೆ. ಯಾವ ಮಂತ್ರವನ್ನು ಯಾವ ಯಜ್ಞದಲ್ಲಿ ಉಪಯೋಗಿಸಬೇಕು ಎಂಬುದನ್ನು ಬ್ರಾಹ್ಮಣಗಳಿಂದ ಮತ್ತು ಸೂತ್ರ ಗ್ರಂಥಗಳಿಂದ ತಿಳಿಯಬೇಕು (ಸೂತ್ರಗ್ರಂಥಗಳು ಸ್ಮೃತಿಗಳು). ಪ್ರತಿಯೊಂದು ಯಜ್ಞದಲ್ಲಿಯೂ ಹೋತೃ, ಉದ್ಗಾತೃ, ಅಧ್ವರ್ಯು ಮತ್ತು ಬ್ರಹ್ಮರೆಂಬ ನಾಲ್ಕು ಜನ ಮುಖ್ಯ ಋತ್ವಿಕ್ಕುಗಳಿರುತ್ತಾರೆ. ಋಗ್ವೇದದ ಋತ್ವಿಕ್ಕನ್ನು ಹೋತೃವೆಂದೂ, ಸಾಮವೇದದ ಋತ್ವಿಕ್ಕನ್ನು ಉದ್ಗಾತೃವೆಂದೂ, ಯಜುರ್ವೇದದ ಋತ್ವಿಕ್ಕನ್ನು ಅಧ್ವರ್ಯುವೆಂದೂ ಮತ್ತು ನಾಲ್ಕೂ ವೇದಗಳನ್ನು ತಿಳಿದ ಋತ್ವಿಕ್ಕನ್ನು ಬ್ರಹ್ಮನೆಂದೂ ಕರೆಯುತ್ತಾರೆ. ಹೋತೃ ಋಗ್ವೇದ ಸಂಹಿತಾ ಮಂತ್ರಗಳಿಂದ ದೇವತೆಗಳನ್ನು ಆಹ್ವಾನಿಸುತ್ತಾನೆ. ಆವಾಹನ ಮಾಡುವ ಮಂತ್ರಗಳಿಗೆ ಪುರೋನುವಾಕ್ಯ ಎಂದು ಹೆಸರು. ಆವಾಹನೆಯ ನಂತರ ಯಜ್ಞದಲ್ಲಿ ಹೋಮ ಮಾಡಲು ಋಗ್ವೇದ ಸಂಹಿತೆಯವೇ ಆದ ಮಂತ್ರಗಳನ್ನು ಪಠಿಸುತ್ತಾನೆ. ಇವಕ್ಕೆ ಯಜ್ಯಾ ಮಂತ್ರಗಳೆಂದು ಹೆಸರು. ಹೋತೃವು ದೇವತಾ ಮಂತ್ರಗಳನ್ನು ಮಾತ್ರ ಪಠಿಸುತ್ತಾನೆ. ತಾನೇ ಹೋಗಿ ಯಜ್ಞ ಮಾಡುವುದಿಲ್ಲ. ಉದ್ಗಾತೃ ದೇವತೆಗಳ ತೃಪ್ತಿಗಾಗಿ ಸಾಮಗಾನವನ್ನು ಮಾಡುತ್ತಾನೆ. ಇವು ಸಾಮ ಸಂಹಿತೆಯ ಮಂತ್ರಗಳು. ಅಧ್ವರ್ಯುವು ಯಜುಸ್ಸಂಹಿತೆಯ ಮಂತ್ರಗಳಿಂದ ಹೋಮ ಮಾಡುತ್ತಾನೆ. ಬ್ರಹ್ಮ ಯಜ್ಞದ ಒಟ್ಟಾರೆ ಮೇಲ್ವಿಚಾರಕನಾಗಿರುತ್ತಾನೆ. ಬ್ರಹ್ಮನಾದ ಋತ್ವಿಜನಿಗೆ ನಾಲ್ಕೂ ವೇದಗಳ ಮಂತ್ರಗಳೂ ತಿಳಿದಿರಬೇಕು. ಹೀಗೆ ಸಂಹಿತಾ ಮಂತ್ರಗಳ ವಿನಿಯೋಗ.
೨.೨. ಬ್ರಾಹ್ಮಣಗಳು
ಒಂದು ಸಂಹಿತೆಗೆ ಒಂದಕ್ಕಿಂತ ಹೆಚ್ಚಾಗಿ ಬ್ರಾಹ್ಮಣಗಳಿರಬಹುದು. ವೇದಗಳು ಗುರುಮುಖೇನ ಕಲಿಯಬೇಕಾದ್ದರಿಂದ, ಮುಖ್ಯ ಗುರುಗಳ ಪಾಠಗಳು ಶಾಖೆಗಳಾಗಿ ಪ್ರಸಿದ್ಧವಾದವು. ಸಂಹಿತೆಯ ಕೆಲವು ಕ್ಲಿಷ್ಟ ಮಂತ್ರಗಳ ಅರ್ಥಗಳು ವಿವಿಧ ಶಾಖೆಗಳಲ್ಲಿ ಸ್ವಲ್ಪ ಭಿನ್ನವಾದವು. ಯಜ್ಞಗಳ ರೀತಿಯೂ ಬೇರೆಯಾಯಿತು. ಅಂತೆಯೇ ಪ್ರಯೊಂದು ಶಾಖೆಗೂ ಒಂದೊಂದು ಬ್ರಾಹ್ಮಣವಾಯಿತು. ಉದಾಹರಣೆಗೆ, ಋಗ್ವೇದದ ಶಾಕಾಲ ಶಾಖೆಗೆ (ಶಾಕಲ್ಯ ಋಷಿ ಪರಂಪರೆ) ಐತರೇಯ ಬ್ರಾಹ್ಮಣವಿದೆ. ಇಕ್ಷ್ವಾಕು ಶಾಖೆಗೆ ಕೌಷೀತಕಿ ಬ್ರಾಹ್ಮಣವಿದೆ.
೨. ೩. ಅರಣ್ಯಕಗಳು
ಋಷಿಗಳು ತಮ್ಮ ಶಿಷ್ಯರಿಗೆ ಇವನ್ನು ಅರಣ್ಯದಲ್ಲಿ ಬೋಧಿಸಿದ್ದರಿಂದ ಇವುಗಳಿಗೆ ಅರಣ್ಯಕಗಳೆಂದು ಹೆಸರು. ಅರಣ್ಯಕಗಳೂ ಸಂಹಿತೆಗಳಿಗೆ ಪರಿಶಿಷ್ಟಗಳು. ಬ್ರಾಹ್ಮಣಗಳಂತೆ ಅರಣ್ಯಕಗಳಲ್ಲಿಯೂ ಯಜ್ಞ ಕ್ರಮಗಳನ್ನು ವಿವರಿಸಲಾಗುತ್ತದೆ. ಆದರೆ ಅರಣ್ಯಕಗಳಲ್ಲಿ ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ. ಅರಣ್ಯಕಗಳು ಕೆಲವೊಮ್ಮೆ ಬ್ರಾಹ್ಮಣ ಗ್ರಂಥಗಳ ಕೊನೆಯಲ್ಲಿ ಬರುತ್ತವೆ. ಕೆಲವೊಮ್ಮೆ ಪ್ರತ್ಯೇಕವಾಗಿಯೂ ಇರುತ್ತದೆ. ಬ್ರಾಹ್ಮಣ ಮತ್ತು ಅರಣ್ಯಕಗಳು ಸಂಹಿತೆಯ ಪರಿಶಿಷ್ಟಗಳಾದರು ಹಲವು ಕಡೆ ಇವುಗಳಲ್ಲಿ ಸ್ವತಂತ್ರ ವಿಷಯಗಳನ್ನೂ ಹೇಳಲ್ಪಟ್ಟಿದೆ.ಅರಣ್ಯಕಗಳು ತತ್ವ ಪ್ರಧಾನವಾದದ್ದರಿಂದ ಅವನ್ನು ಎಲ್ಲರಿಗೂ ಬೋಧಿಸುತ್ತಿರಲಿಲ್ಲ. ಮುಖ್ಯವಾಗಿ ವಾನಪ್ರಸ್ಥರಿಗೆ ಮತ್ತು ತಮ್ಮ ಶಿಷ್ಯರಿಗೆ ಋಷಿಗಳು ಅರಣ್ಯಗಳಲ್ಲಿ ಅರಣ್ಯಕಗಳನ್ನು ಬೋಧಿಸುತ್ತಿದ್ದರು. ಅರಣ್ಯಕಗಳು ಬಾಹ್ಮಣಗಳ ನಂತರ ರಚಿಸಲ್ಪಟ್ಟವು. ವೇದಾಂತಗಳೆಂದು ಪರಿಗಣಿಸಲ್ಪಡುವ ಉಪನಿಷತ್ತುಗಳಿಗೂ ಮತ್ತು ಬ್ರಾಹ್ಮಣಗಳಿಗೂ ಅರಣ್ಯಕಗಳು ಕೊಂಡಿಯಂತೆ ಇವೆ. ಗೃಹಸ್ಥನ ಕರ್ಮಗಳನ್ನು ಬ್ರಾಹ್ಮಣಗಳು ತಿಳಿಸಿದರೆ, ಅರಣ್ಯಕಗಳು ಆ ಕರ್ಮಗಳ ಗೂಡಾರ್ಥವನ್ನು ಚಿಂತಿಸುತ್ತದೆ. ಅರಣ್ಯಕಗಳ ಕೊನೆಯ ಭಾಗವೇ ಉಪನಿಷತ್ತುಗಳೆಂದು ಅನೇಕ ವಿದ್ವಾಂಸರು ತಿಳಿಯುತ್ತಾರೆ. ಬ್ರಾಹ್ಮಣಗಳಂತೆಯೇ ಪ್ರತಿಯೊಂದು ಶಾಖೆಗೂ ಅದರದೇ ಆದ ಅರಣ್ಯಕಗಳಿವೆ. ಉದಾಹರಣೆಗೆ ಕೃಷ್ಣಯಜುರ್ವೇದದ ತೈತ್ತಿರೀಯ (ತಿತ್ತಿರಿ ಋಷಿ ಮತ್ತು ಅವರ ಶಿಷ್ಯರು) ಶಾಖೆಗೆ ತೈತ್ತಿರೀಯ ಅರಣ್ಯಕವಿದೆ. ಕಾಠ ಶಾಖೆಗೆ ಕಾಠಕ ಅರಣ್ಯಕವಿದೆ.
೨.೪. ಉಪನಿಷತ್ತುಗಳು
ಉಪನಿಷತ್ತುಗಳು ಸಾಮಾನ್ಯವಾಗಿ ಅರಣ್ಯಕಗಳಲ್ಲಿ ಬರುತ್ತವೆ. ಆದರೆ ಅವು ಸಂಹಿತೆ ಅಥವಾ ಬ್ರಾಹ್ಮಣ ಭಾಗಗಳಲ್ಲೂ ಬರಬಹುದು. ಉದಾಹರಣೆಗೆ ಬೃಹದಾರಣ್ಯಕ ಉಪನಿಷತ್ತು ಶುಕ್ಲ ಯಜುರ್ವೇದದ ಬೃಹದಾರಣ್ಯಕದಲ್ಲಿ ಬರುತ್ತದೆ. ಈಶಾವಾಸ್ಯ ಉಪನಿಷತ್ತು ಶುಕ್ಲ ಯಜುರ್ವೇದ ಸಂಹಿತೆಯಲ್ಲಿಯೇ ಬರುತ್ತದೆ.
ಒಟ್ಟು ೧೦೮ ಉಪನಿಷತ್ತುಗಳಿವೆ ಎಂದು ಪ್ರತೀತಿಯಿದೆ. ಆದರೆ ಅವುಗಳಲ್ಲಿ ಹತ್ತನ್ನು ಮುಖ್ಯ ಉಪನಿಷತ್ತುಗಳೆಂದು ಪರಿಗಣಿಸಲಾಗಿದೆ. ಇವು ವೇದಾಂತ ತತ್ವವನ್ನು ಪ್ರತಿಪಾದನೆ ಮಾಡುವ ಉಪನಿಷತ್ತುಗಳು. ಇವುಗಳಿಗೆ ಆಚಾರ್ಯತ್ರಯರು ಭಾಷ್ಯಗಳನ್ನು ಬರೆದಿದ್ದಾರೆ. ಇತರ ಉಪನಿಷತ್ತುಗಳು ಯೋಗ, ಶಿವ, ವಿಷ್ಣು, ದೇವಿ, ಗಣಪತಿ, ಸನ್ಯಾಸ ಮುಂತಾದ ವಿಷಯಗಳನ್ನು ಕುರಿತು ಹೇಳುತ್ತವೆ.
೧೦ ಮುಖ್ಯ ಉಪನಿಷತ್ತುಗಳು ಹೀಗಿವೆ: ಐತರೇಯ (ಋಗ್ವೇದ), ಕೇನ, ಛಾಂದೋಗ್ಯ (ಸಾಮವೇದ), ಈಶ, ಕಠ, ತೈತ್ತಿರೀಯ, ಬೃಹದಾರಣ್ಯಕ (ಯಜುರ್ವೇದ), ಪ್ರಶ್ನ, ಮುಂಡಕ, ಮಾಂಡೂಕ್ಯ (ಅಥರ್ವವೇದ).
ನಾವು ಇಂದು ಈ ಸಂಹಿತಾ, ಬ್ರಾಹ್ಮಣ ಮತ್ತು ಅರಣ್ಯಕ ಮಂತ್ರಗಳನ್ನು ಸಂಧ್ಯಾವಂದನೆ, ದೇವರಪೂಜೆ ಮುಂತಾದ ನಿತ್ಯ ಕರ್ಮಗಳಲ್ಲಿಯೂ, ಮದುವೆ, ಉಪನಯನ, ಶ್ರಾದ್ಧ ಮುಂತಾದ ನೈಮಿತ್ತಿಕ ಕರ್ಮಗಳಲ್ಲಿಯೂ ಉಪಯೋಗಿಸುತ್ತೇವೆ. ಇಂದು ವೇದ ಕಾಲದ ಯಜ್ಞಗಳಿಗೆ ಅಷ್ಟಾಗಿ ಪ್ರಾಶಸ್ತ್ಯವಿಲ್ಲದ ಕಾರಣ ಪೂರ್ವಿಕರು ವೇದಮಂತ್ರಗಳಿಗೆ ಈ ಕರ್ಮಗಳಲ್ಲಿ ವಿನಿಯೋಗವನ್ನು ಹೇಳಿದ್ದಾರೆ. ಕೆಲವು ಬಾರಿ ಮಂತ್ರಕ್ಕೂ ಕರ್ಮಕ್ಕೂ ನೇರವಾಗಿ ಸಂಬಂಧವಿರುವುದಿಲ್ಲ. ಉದಾಹರಣೆಗೆ ನವಗ್ರಹಾರಾಧನೆಯ ಕಾಲದಲ್ಲಿ ಉಪಯೋಗಿಸುವ ನವಗ್ರಹಾವಾಹನೆಯ ಮಂತ್ರಗಳು ಋಗ್, ಯಜುಸ್ಸಂಹಿತೆಗಳಲ್ಲಿ ಬರುತ್ತವೆ. ಆದರೆ ವೇದಗಳಲ್ಲಿ ಎಲ್ಲಿಯೂ ನವಗ್ರಹಗಳ ಪ್ರಸ್ತಾಪವೇ ಇರುವುದಿಲ್ಲ. ಕೇತುಗ್ರಹಾವಾಹನೆಯ, "ಕೇತುಂ ಕೃಣ್ವನ್ನಕೇತವೇ" ಎಂಬ ಮಂತ್ರ ಋಗ್ಸಂಹಿತೆಯದ್ದು. ಇಂದ್ರ ದೇವತೆಯನ್ನು ಕುರಿತಾದದ್ದು. ಇಲ್ಲಿ ಕೇತು ಎಂದರೆ ಪ್ರಜ್ಞೆ ಎಂದರ್ಥ. ಅಂತೆಯೇ ನವಗ್ರಹವಾಹನೆಯ ಇತರ ಮಂತ್ರಗಳೂ ವಿವಿಧ ದೇವತೆಗಳನ್ನುದ್ದೇಶಿಸಿರುವಂತಹವು. ದುರ್ಗಾ ಸೂಕ್ತದ ಅನೇಕ ಮಂತ್ರಗಳು ಅಗ್ನಿದೇವತಾ ಮಂತ್ರಗಳು. ವೇದಮಂತ್ರಗಳ ಉಪಯೋಗ ನಿಲ್ಲದಿರಲಿ ಎಂದು ಹೀಗೆ ವಿಧಿಸಿರಬಹುದು.
೩. ವೇದ ಶಾಖೆಗಳು
ವೇದಗಳಲ್ಲಿ ಸಂಹಿತಾ ಭಾಗವೇ ಮುಖ್ಯವಾದ್ದರಿಂದ, ಇಲ್ಲಿಂದ ಸುಲಭವಾಗಿ ಅರ್ಥ ಮಾಡಿಕೊಳ್ಳಲು ವೇದ ಸಂಹಿತೆಗಳನ್ನೇ ವೇದಗಳೆಂದು ಕರೆಯಲಾಗಿದೆ. ಬ್ರಾಹ್ಮಣ ಮತ್ತು ಅರಣ್ಯಕಗಳನ್ನು ಸಂದರ್ಭಾನುಸಾರ ಆಯಾ ಹೆಸರಿನಿಂದ ನಿರ್ದೇಶಿಸಲಾಗಿದೆ.ವೇದಗಳು ನಾಲ್ಕು ಎಂಬುದು ನಮಗೆ ತಿಳಿದ ವಿಷಯ. ಆದರೆ ಇವುಗಳ ವಿಭಾಗ ಹೇಗಾಯಿತು? - ಎಂಬುದು ಮುಖ್ಯ ಪ್ರಶ್ನೆ. ಮೊದಲಿಗೆ ವೇದಗಳು ಅಪಾರವಾದ ಒಂದೇ ಒಂದು ಗ್ರಂಥರಾಶಿಯಾಗಿತ್ತು. ವೇದ ಸಾಹಿತ್ಯ ಬೆಳದಂದಂತೆಲ್ಲ ಎಲ್ಲರೂ ಅದನ್ನು ಸಂಪೂರ್ಣವಾಗಿ ಅಧ್ಯಯನ ಮಾಡುವುದು ಕಷ್ಟಸಾಧ್ಯವೆಂದು ಅಧ್ಯಯನದ ಅನುಕೂಲಕ್ಕಾಗಿ ವೇದವ್ಯಾಸರು ವೇದ ಗ್ರಂಥವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದರು. ಋಗ್, ಯಜಸ್ಸು, ಸಾಮ ಮತ್ತು ಅಥರ್ವ ಎಂಬ ಆ ನಾಲ್ಕು ಭಾಗಗಳನ್ನು ಕ್ರಮವಾಗಿ ಪೈಲ, ವೈಶಂಪಾಯನ, ಜೈಮಿನಿ ಮತ್ತು ಸುಮಂತ ಎಂಬ ಶಿಷ್ಯರಿಗೆ ಬೋಧಿಸಿದರು. ವೇದಗಳು ಈ ಶಿಷ್ಯರ ಮೂಲಕ ಹರಡಿತು. ಗುರುಗಳು ತಮ್ಮ ಶಿಷ್ಯರಿಗೆ ವೇದಪಾಠವನ್ನು ಹೇಳಿಕೊಡುವಾಗ ಅಲ್ಪ-ಸ್ವಲ್ಪ ವ್ಯತ್ಯಾಸಗಳೂ ಆದವು. ಆದರೆ ಈ ವ್ಯತ್ಯಾಸಗಳು ಸ್ವರ, ಮಂತ್ರ ಕ್ರಮದಲ್ಲಿ ಮಾತ್ರ - ಮಂತ್ರ ಸ್ವರೂಪದಲ್ಲಲ್ಲ. ಈ ರೀತಿ ಬೋಧನಾರೂಪದಲ್ಲಾದ - ಅಂದರೆ ಪಾಠರೂಪದಲ್ಲಾದ - ವ್ಯತ್ಯಾಸದಿಂದ ಶಾಖೆಗಳ ಉಗಮವಾಯಿತು.
ಪ್ರತಿಯೊಂದು ವೇದಕ್ಕೂ ಅನೇಕ ಶಾಖೆಗಳಿವೆ. ಅವೆಲ್ಲ ಇಂದು ಪ್ರಚಾರದಲ್ಲಿಲ್ಲ. ಒಂದು ವೇದಕ್ಕೆ ಒಂದೋ ಎರೆಡೋ ಶಾಖೆಗಳು ಚಾಲ್ತಿಯಲ್ಲಿವೆ. ಕೆಲವು ಶಾಖೆಗಳು ಉತ್ತರ ಭಾರತದಲ್ಲಿದ್ದರೆ ಕೆಲವು ದಕ್ಷಿಣ ಭಾರತದಲ್ಲಿವೆ. ವೇದಗಳ ಮುಖ್ಯ ಶಾಖೆಗಳ ವಿವರ ಇಂತಿದೆ:
ಋಗ್ವೇದ: ಋಗ್ವೇದಕ್ಕೆ ೨೧ ಶಾಖೆಗಳಿವೆಯೆಂದು ಹೇಳುತ್ತಾರೆ. ಇವುಗಳಲ್ಲಿ ಶಾಕಲ, ಬಾಷ್ಕಲ, ಮತ್ತು ಆಶ್ವೀಲಾಯನ ಶಾಖೆಗಳ ಪ್ರತಿಗಳು ದೊರೆತಿವೆ. ಆಶ್ವೀಲಾಯನ ಶಾಖೆಯ ಸೂತ್ರಗ್ರಂಥಗಳು (ಸ್ಮೃತಿಗಳು - ಇದರ ಬಗ್ಗೆ ಮುಂದೆ ತಿಳಿಸಲಾಗುತ್ತದೆ) ಪ್ರಸಿದ್ಧಿಯಾಗಿವೆ (ಅನೇಕ ಋಗ್ವೇದಿಗಳು - ಅದರಲ್ಲೂ ದಕ್ಷಿಣ ಭಾರತದವರು - ಆಶ್ವೀಲಾಯನ ಶಾಖೆಯವರು. ಅವರು ತಮ್ಮ ಪ್ರವರಗಳಲ್ಲಿ 'ಆಶ್ವೀಲಾಯನ ಸೂತ್ರಃ' ಎಂದೇ ಹೇಳಿಕೊಳ್ಳುತ್ತಾರೆ).
ಶುಕ್ಲಯಜುರ್ವೇದ: ಶುಕ್ಲ ಯಜುರ್ವೇದಕ್ಕೆ ೧೫ ಶಾಖೆಗಳಿವೆ. ಅವುಗಳಲ್ಲಿ ಮಾಧ್ಯಂದಿನ ಮತ್ತು ಕಾಣ್ವವೆಂಬ ಎರಡು ಶಾಖೆಗಳು ಮಾತ್ರ ಪ್ರಸಿದ್ಧಿಯಾದವು. ಮಾಧ್ಯಂದಿನ ಶಾಖೆ ಉತ್ತರ ಭಾರದಲ್ಲಿಯೂ, ಕಾಣ್ವ ಶಾಖೆ ದಕ್ಷಿಣ ಭಾರತದಲ್ಲಿಯೂ ಚಾಲ್ತಿಯಲ್ಲಿದೆ.
ಕೃಷ್ಣಯಜುರ್ವೇದ: ಕೃಷ್ಣ ಯಜುರ್ವೇದಕ್ಕೆ ದೊರೆತಿರುವ ಶಾಖೆಗಳು ೧೬. ಇವುಗಳಲ್ಲಿ ತೈತ್ತಿರೀಯ, ಬೋಧಾಯನ, ಆಪಸ್ಥಂಬ, ಕಾಠಕ ಎಂಬುವು ಪ್ರಸಿದ್ಧ. ದಕ್ಷಿಣ ಭಾರತದಲ್ಲಿ ತೈತ್ತಿರೀಯ ಶಾಖೆ ಚಾಲ್ತಿಯಲ್ಲಿದೆ. ತಿತ್ತಿರಿ ಮಹರ್ಷಿಗಳು ವ್ಯಾಸರ ನೇರ ಶಿಷ್ಯರಾದ ವೈಶಂಪಾಯನರ ಸಮೀಪ ಬಂಧುಗಳು ಎಂದು ಕೆಲವು ಕಡೆ ಹೇಳಿದೆ. ವೇದ ಭಾಷ್ಯ ಬರೆದ ಸಾಯಣರು ಬೋಧಾಯನ ಶಾಖೆಯವರು. ಆಪಸ್ಥಂಬ ಶಾಖೆಯ ಆಪಸ್ಥಂಬ ಸೂತ್ರ ಪ್ರಸಿದ್ಧವಾಗಿದೆ.
ಸಾಮವೇದದ: ಸಾಮವೇದಕ್ಕೆ ೧೦೦೦ ಶಾಖೆಗಳಿವೆ. ಆದರೆ ಅವುಗಳಲ್ಲಿ ಕೌತುಮವೆಂಬ ಒಂದು ಶಾಖೆ ಮಾತ್ರ ಪ್ರಸಿದ್ಧ.
ಅಥರ್ವವೇದ: ಅಥರ್ವ ವೇದಕ್ಕೆ ೯ ಶಾಖೆಗಳಿವೆ. ಅವುಗಳಲ್ಲಿ ಶೌನಕ ಮತ್ತು ಪಿಪ್ಪಲಾದ ಶಾಖೆಗಳು ಪ್ರಸಿದ್ಧ.
೪. ಚತುರ್ವೇದಗಳು
ವೇದಗಳು ನಾಲ್ಕು: ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ. ಆಯಾ ವೇದಗಳಲ್ಲಿ ಬರುವ ಮಂತ್ರ ಲಕ್ಷಣಗಳಿಂದ ಇವನ್ನು ನಾಲ್ಕು ವಿಭಾಗಗಳಾಗಿ ಮಾಡಿದ್ದಾರೆ. ಋಗ್, ಯಜುಸ್ಸು ಮತ್ತು ಸಾಮವೇದಗಳಿಗಿಂತ ಅಥರ್ವವೇದವು ವಿಷಯದಲ್ಲಿ ಸ್ವಲ್ಪ ಭಿನ್ನವಾಗಿದೆ.ಋಗ್ವೇದ ಮಂತ್ರಗಳು ಛಂದೋಬದ್ದವಾದವು - ಕವಿತೆಗಳೆಂದೂ ಹೇಳಬಹುದು. ಇವು ಮುಖ್ಯವಾಗಿ ದೇವತಾ ಸ್ತೋತ್ರರೂಪವಾದುವು. ಯಜುರ್ವೇದ ಗದ್ಯರೂಪವಾದುದು. ಯಜುರ್ವೇದದಲ್ಲಿ ಸ್ತೋತ್ರಗಳ ಜೊತೆಗೆ ಯಜ್ಞಗಳು ಮತ್ತು ಅವುಗಳಲ್ಲಿ ಉಪಯೋಗಿಸುವ ಮಂತ್ರಗಳಿವೆ. ಸಾಮವೇದದಲ್ಲಿ ಗಾನಕ್ಕೆ ಯೋಗ್ಯವಾದ ಮಂತ್ರಗಳಿವೆ. ಅಥರ್ವವೇದ ವಿಷಯದಲ್ಲಿ ಬಹಳ ವಿಶಾಲವಾದುದು. ಅದರಲ್ಲಿ ತತ್ವ, ಯಜ್ಞ, ರೋಗ ರುಜಿನಗಳು, ಕರ್ಮ ವಿಧಾನಗಳು, ಮಂತ್ರ-ತಂತ್ರಗಳು ಮುಂತಾಗಿ ಅನೇಕ ವಿಷಯಗಳ ಕುರಿತಾಗಿ ಚರ್ಚಿಸಲಾಗಿದೆ.
ಅನೇಕ ಬಾರಿ ಒಂದು ವೇದದಲ್ಲಿ ಬರುವ ಮಂತ್ರಗಳು ಇನ್ನೊಂದು ವೇದದಲ್ಲಿ ಪುನರಾವರ್ತಿತವಾಗಿವೆ. ಒಂದು ವೇದದ ಸಂಹಿತೆಯಲ್ಲಿ ಬರುವ ಮಂತ್ರಗಳು ಇನ್ನೊಂದು ವೇದದ ಬ್ರಾಹ್ಮಣ ಅಥವಾ ಅರಣ್ಯಕದಲ್ಲಿ ಬರಬಹುದು. ಸಾಮವೇದದಲ್ಲಿ ೭೫ ಮಂತ್ರಗಳನ್ನು ಹೊರತುಪಡಿಸಿ ಇನ್ನುಳಿದ ಮಂತ್ರಗಳು ಋಗ್ವೇದ ಮಂತ್ರಗಳು. ಅಥರ್ವವೇದದ ಸುಮಾರು ಆರನೇ ಒಂದರಷ್ಟು ಮಂತ್ರಗಳು ಋಗ್ವೇದದವು. ಉದಾಹರಣೆಗೆ, ಋಗ್ವೇದದ ಪುರುಷಸೂಕ್ತದ ಅನೇಕ ಮಂತ್ರಗಳು ತೈತ್ತಿರೀಯ ಅರಣ್ಯಕದಲ್ಲಿವೆ (ಇಂದು ಪ್ರಚಲಿತದಲ್ಲಿರುವ ಪುರುಷಸೂಕ್ತದ ಆವೃತ್ತಿ ತೈತ್ತಿರೀಯ ಅರಣ್ಯಕದ್ದು. ಆದರೆ ಮಾಧ್ವ ಸಂಪದಾಯದಲ್ಲಿ ಋಗ್ವೇದದ ಪುರುಷಸೂಕ್ತವೇ ರೂಢಿಯಲ್ಲಿದೆ).
೪.೧. ಋಗ್ವೇದ
೪.೧.೧. ಸಂಹಿತಾಭಾಗ
ಋಗ್ವೇದವು ವೇದಗಳಲ್ಲೆಲ್ಲ ತುಂಬಾ ಪ್ರಾಚೀನವಾದುದು. ಋಗ್ವೇದ ಸಂಹಿತೆಯು ಸ್ತೋತ್ರ ರೂಪವಾದುದು. ಋಗ್ವೇದ ಮಂತ್ರಗಳು ಛಂದಸ್ಸಿನ ಅಣುಗುಣವಾಗಿ ಇವೆ. ಇದನ್ನು ಕವಿತಾ ಪ್ರಕಾರವೆಂದೂ ಹೇಳಬಹುದು.
ಋಗ್ವೇದವನ್ನು (ಅಂದರೆ ಸಂಹಿತೆಯನ್ನು) ಹತ್ತು ಭಾಗಗಳಾಗಿ ವಿಂಗಡಿಸಿದ್ದಾರೆ. ಇವುಗಳನ್ನು ಮಂಡಲಗಳೆಂದು ಕರೆಯುತ್ತಾರೆ. ಪ್ರತಿಯೊಂದು ಮಂಡಲವನ್ನೂ ಪುನಾ ಅನುವಾಕ ಮತ್ತು ಸೂಕ್ತಗಳಾಗಿ ವಿಂಗಡಿಸಿದ್ದಾರೆ. ಒಂದೊಂದು ಸೂಕ್ತವೂ ಸಾಮಾನ್ಯವಾಗಿ ಒಂದು ದೇವತೆಯನ್ನು ಕುರಿತಾದದ್ದಾಗಿದೆ. ಕೆಲವೊಮ್ಮೆ ಒಂದು ಸೂಕ್ತದಲ್ಲಿ ಎರೆಡು ಮೂರು ದೇವತೆಗಳೂ ಬರಬಹುದು. ಋಗ್ವೇದದ ೨, ೩, ೪, ೫, ೬, ೭ ಮತ್ತು ೮ನೇ ಮಂಡಲಗಳಿಗೆ ಒಂದೇ ವಂಶದ ಋಷಿಗಳು ದ್ರಷ್ಟಾರರಾಗಿದ್ದಾರೆ. ಅವರು ಕ್ರಮವಾಗಿ ಗ್ರತ್ಸಮದ, ವಿಶ್ವಾಮಿತ್ರ, ವಾಮದೇವ, ಅತ್ರಿ, ಭಾರದ್ವಾಜ, ವಸಿಷ್ಠ ಮತ್ತು ಕಣ್ವರು. ೯ನೇ ಸೂಕ್ತ ಸಂಪೂರ್ಣವಾಗಿ ಪವಮಾನ ಸೋಮ ಎಂಬ ಒಂದೇ ದೇವತೆಯನ್ನು ಕುರಿತಾಗಿದೆ. ಬೇರೆ ಬೇರೆ ಋಷಿಗಳ ಪವಮಾನ ಸೋಮ ದೇವತೆಯ ಮಂತ್ರಗಳನ್ನು ೯ನೇ ಮಂಡಲದಲ್ಲಿ ಸೇರಿಸಿದ್ದಾರೆ. ಒಂದನೇ ಮತ್ತು ಹತ್ತನೇ ಮಂಡಲಗಳು ಬೇರೆ ಮಂಡಲಗಳಿಗೆ ಹೋಲಿಸಿದರೆ ಸ್ವಲ್ಪ ಈಚಿನವು. ಇವುಗಳ ದ್ರಷ್ಟಾರರು ಅನೇಕ ಋಷಿಗಳು. ಈ ಮಂಡಲಗಳಲ್ಲಿ ಹೆಚ್ಚೂ-ಕಡಿಮೆ ೧೦೦ ಮಂತ್ರಗಳಿಗೆ ಒಬ್ಬ ಋಷಿಯಿರುವುದರಿಂದ, ಅವರನ್ನು ಶತರ್ಚಿನರೆಂದು ಕರೆಯುತ್ತಾರೆ. ಒಟ್ಟಾಗಿ ಋಗ್ವೇದದಲ್ಲಿ ೧೦೨೮ ಸೂಕ್ತಗಳಿವೆ. ಒಟ್ಟು ಮಂತ್ರ ಸಂಖ್ಯೆ ೧೦೫೫೨. ಪ್ರತಿಯೊಂದು ಮಂಡಲದಲ್ಲಿಯೂ ಮೊದಲು ಗಾಯತ್ರಿಯಂತಹ ಸಣ್ಣ ಛಂದಸ್ಸಿನ ಮಂತ್ರಗಳಿಂದ ಆರಂಭವಾಗಿ ನಂತರ ದೊಡ್ಡ ಛಂದಸ್ಸುಗಳಾದ ಬೃಹತಿ, ಅನುಷ್ಟುಪ್, ತ್ರಿಷ್ಟುಪ್, ಜಗತೀ ಛಂದಸ್ಸಿನ ಮಂತ್ರಗಳು ಬರುತ್ತವೆ.
ಋಗ್ವೇದದ ಹತ್ತು ಮಂಡಲಗಳು ಗಾತ್ರದಲ್ಲಿ ಸಮನಾಗಿಲ್ಲ. ಒಂದನೇ ಮತ್ತು ಹತ್ತನೇ ಮಂಡಲದಲ್ಲಿ ೧೯೧ ಸೂಕ್ತಗಳಿವೆ. ಆದರೆ ೪ನೇ ಮಂಡಲದಲ್ಲಿ ೫೮ ಸೂಕ್ತಗಳಿವೆ. ಅಧ್ಯಯನಕ್ಕೆ ಅನುಕೂಲವಾಗುವಂತೆ ಋಗ್ವೇದವನ್ನು ಅಷ್ಟಕಗಳಾಗಿಯೂ, ಅಷ್ಟಕಗಳನ್ನು ಅಧ್ಯಾಯಗಳಾಗಿಯೂ ವಿಂಗಡಿಸಿದ್ದಾರೆ. ಪ್ರತಿಯೊಂದು ಅಧ್ಯಾಯದಲ್ಲಿಯೂ ಸುಮಾರಾಗಿ ಒಂದೇ ಸಂಖ್ಯೆಯ ಸೂಕ್ತಗಳಿವೆ.
ಋಗ್ವೇದದ ೨೫ರಷ್ಟು ಮಂತ್ರಗಳು ಇಂದ್ರದೇವತಾರಕವಾದುವು. ಎರಡನೆಯ ಸ್ಥಾನ ಅಗ್ನಿಯವು. ಉಳಿದಂತೆ ಮರುತ್ತುಗಳು, ಉಷಸ್ಸು, ಸೂರ್ಯ, ಅಶ್ವಿನಿ ದೇವತೆಗಳು, ಋಭುಗಳು, ವಿಷ್ಣು, ರುದ್ರ, ಸರಸ್ವತಿ, ಇಳಾ ಮುಂತಾದ ದೇವತೆಗಳಿವೆ. ಋಗ್ವೇದದ ೮ನೇ ಮತ್ತು ೯ನೇ ಮಂಡಲಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಮಂಡಲಗಳು ಅಗ್ನಿ ದೇವತಾ ಸೂಕ್ತಗಳಿಂದ ಆರಂಭವಾಗುತ್ತವೆ. ೮ನೇ ಮಂಡಲ ಇಂದ್ರ ದೇವತಾ ಋಕ್ಕಿನಿಂದ ಆರಂಭವಾಗುತ್ತದೆ. ೯ನೇ ಮಂಡಲ ಹಿಂದೆಯೇ ಹೇಳಿದಂತೆ ಸಂಪೂರ್ಣವಾಗಿ ಪವಮಾನ ಸೋಮ ದೇವತೆಗೆ ಸಂಬಂಧಪಟ್ಟವು.
ಮೇಲೆ ಹೇಳಿದ ಸೂಕ್ತಗಳ ಸಂಖ್ಯೆಗಳು ಋಗ್ವೇದದ ಶಾಕಲ ಶಾಖಾ ರೀತಿಯಾದದ್ದು. ಶಾಕಲ ಶಾಖೆಗೂ, ಬಾಷ್ಕಲ ಶಾಖೆಗೂ ಸ್ವಲ್ಪ ವ್ಯತ್ಯಾಸಗಳಿವೆ. ಈ ಎರೆಡು ಶಾಖೆಗಳಿಗೂ ಸಾಮಾನ್ಯವಾದ ಸೂಕ್ತಗಳ ಸಂಖ್ಯೆ ೧೦೧೭. ಶಾಕಲ ಶಾಖೆಯಲ್ಲಿ ೧೧ ಸೂಕ್ತಗಳು ಬೇರೆಯಾಗಿದ್ದರೆ ಬಾಷ್ಕಲ ಶಾಖೆಯ ೩೬ ಸೂಕ್ತಗಳು ಬೇರೆಯಾಗಿವೆ. ಈ ರೀತಿ ಒಂದು ಶಾಖೆಯಲ್ಲಿರುವ ಸೂಕ್ತಗಳು ಬೇರೆ ಶಾಖೆಯಲ್ಲಿಲ್ಲದಿದ್ದರೆ ಅಂತಹ ಸೂಕ್ತಗಳನ್ನು ಖಿಲ ಸೂಕ್ತಗಳೆಂದು ಕರೆಯುತ್ತಾರೆ. ಒಟ್ಟಿನಲ್ಲಿ ಋಗ್ವೇದದ ಸೂಕ್ತಗಳ ಸಂಖ್ಯೆಯನ್ನು ೧೦೧೭ ಎಂದೂ, ಶಾಕಲ ಶಾಖೆಯಲ್ಲಿ ೧೧ ಖಿಲ ಸೂಕ್ತಗಳೆಂದೂ, ಬಾಷ್ಕಲ ಶಾಖೆಯಲ್ಲಿ ೩೬ ಖಿಲ ಸೂಕ್ತಗಳೆಂದೂ ಹೇಳಬಹುದು. ಪ್ರಸಿದ್ದವಾದ ಶ್ರೀ ಸೂಕ್ತ ಬಾಷ್ಕಲ ಶಾಖೆಯ ಖಿಲ ಸೂಕ್ತ.
೪.೧.೨. ಬ್ರಾಹ್ಮಣ-ಅರಣ್ಯಕ-ಉಪನಿಷತ್ತುಗಳು
ಋಗ್ವೇದಕ್ಕೆ ಎರೆಡು ಬ್ರಾಹ್ಮಣಗಳು ಸಿಕ್ಕಿವೆ. ಶಾಕಾಲ ಶಾಖೆಯ ಐತರೇಯ ಬ್ರಾಹ್ಮಣ ಮತ್ತು ಬಾಷ್ಕಲ ಶಾಖೆಯ ಕೌಷೀತಕಿ ಬ್ರಾಹ್ಮಣ. ಇವುಗಳಲ್ಲಿ ಐತರೇಯ ಬ್ರಾಹ್ಮಣವೇ ಪ್ರಸಿದ್ಧವಾಗಿದೆ. ಇದರ ಕರ್ತೃ ಮಹೀದಾಸರೆಂಬ ಮಹರ್ಷಿಗಳೆಂದು ಹೇಳುತ್ತಾರೆ. ಐತರೇಯ ಬ್ರಾಹ್ಮಣದಲ್ಲಿ ೪೦ ಅಧ್ಯಾಯಗಳಿವೆ. ಕೌಷೀತಕೀ ಬ್ರಾಹ್ಮಣದಲ್ಲಿ ೩೦ ಅಧ್ಯಾಯಗಳಿವೆ. ಈ ಬ್ರಾಹ್ಮಣಗಳಲ್ಲಿ ಅಗ್ನಿಷ್ಟೋಮ ಮುಂತಾದ ಯಾಗಗಳ ವಿವರಣೆ, ಕ್ಷತ್ರಿಯ ಮಾಡಬೇಕಾದ ಯಜ್ಞಗಳು, ರಾಜ್ಯಾಭಿಷೇಕ ಕ್ರಮಗಳನ್ನು ವಿವರಿಸಲಾಗಿದೆ. ಈ ಬ್ರಾಹ್ಮಣಗಳಿಗೆ ಹೊಂದಿಕೊಂಡಂತೆ ಐತರೇಯ ಮತ್ತು ಕೌಷೀತಕಿ ಅರಣ್ಯಕಗಳಿವೆ.
ಋಗ್ವೇದದ ಮುಖ್ಯ ಉಪನಿಷತ್ತು ಐತರೇಯ ಬ್ರಾಹ್ಮಣಕ್ಕೆ ಸೇರಿದ ಐತರೇಯ ಉಪನಿಷತ್ತು. ಐತರೇಯ ಉಪನಿಷತ್ತಿನಲ್ಲಿ ಜೀವ, ಪ್ರಪಂಚ ಮತ್ತು ಆತ್ಮಗಳ ವಿಚಾರವಾದ ವಿಷಯಗಳು ಬಂದಿವೆ. ಇದರಲ್ಲಿ ೩ ಅಧ್ಯಾಯಗಳಿವೆ. ಒಟ್ಟು ೩೩ ಋಕ್ಕುಗಳಿವೆ. ಅದ್ವೈತದ ನಾಲ್ಕು ಮಹಾವಾಕ್ಯಗಳಲ್ಲಿ ಋಗ್ವೇದದ ವಾಕ್ಯವಾದ 'ಪ್ರಜ್ಞಾನಂ ಬ್ರಹ್ಮ' (ಶುದ್ಧ-ಪೂರ್ಣವಾದ ಜ್ಞಾನವೇ ಬ್ರಹ್ಮ) ಎಂಬ ವಾಕ್ಯ ಐತರೇಯ ಉಪನಿಷತ್ತಿನ ೩ನೇ ಅಧ್ಯಾಯದಲ್ಲಿ ಬಂದಿದೆ.
ಯಜುರ್ವೇದಗಳಲ್ಲಿ ಎರೆಡು ವಿಭಾಗಗಳಿವೆ: ಕೃಷ್ಣಯಜುರ್ವೇದ ಮತ್ತು ಶುಕ್ಲಯಜುರ್ವೇದ. ಎರಡಕ್ಕೂ ಅದರವೇ ಆದ ಶಾಖೆ, ಬ್ರಾಹ್ಮಣ, ಅರಣ್ಯಕಗಳಿವೆ. ಕೃಷ್ಣಯಜುರ್ವೇದವು ಒಂದು ಕ್ರಮವಾಗಿಲ್ಲ. ಕೃಷ್ಣಯಜುರ್ವೇದದಲ್ಲಿ ಸಂಹಿತಾ ಭಾಗಗಳಲ್ಲಿ ಬ್ರಾಹ್ಮಣ ಭಾಗಗಳೂ ಸೇರಿಕೊಂಡಿವೆ - ಅಂದರೆ ಕೆಲವೆಡೆ ಯಜ್ಞಗಳ ಮಂತ್ರಗಳೂ ಮತ್ತು ಅವುಗಳ ವಿವರಣೆಗಳೂ ಸಂಹಿಯಲ್ಲಿಯೇ ಬಂದಿದೆ. ಶುಕ್ಲಯಜುರ್ವೇದದಲ್ಲಿ ಸಂಹಿತೆ ಮತ್ತು ಬ್ರಾಹ್ಮಣ ಭಾಗಗಳನ್ನು ಕ್ರಮವಾಗಿ ವಿಂಗಡಿಸಲಾಗಿದೆ.
ಕೃಷ್ಣಯಜುರ್ವೇದದ ಅರಣ್ಯಕ ತೈತ್ತಿರೀಯ ಅರಣ್ಯಕ. ಇದರಲ್ಲಿ ೭ ಪ್ರಶ್ನಗಳಿವೆ. ಇವುಗಳಲ್ಲಿ ಮಹಾನಾರಾಯಣ ಉಪನಿಷತ್ತು ಮತ್ತು ತೈತ್ತಿರೀಯ ಉಪನಿಷತ್ತು ಮುಖ್ಯವಾದುವು. ತೈತ್ತಿರೀಯ ಅರಣ್ಯಕದಲ್ಲಿ ನಾವು ನಿತ್ಯ ಉಪಯೋಗಿಸುವ ಅನೇಕ ಮಂತ್ರಗಳು ಅಡಕವಾಗಿವೆ. ನಾರಾಯಣ ಸೂಕ್ತ, ದುರ್ಗಾ ಸೂಕ್ತ, ಅಘಮರ್ಷಣ ಸೂಕ್ತ, ಮೃತ್ಯುಂಜಯ ಮಂತ್ರ, ಸಂಧ್ಯಾವಂದನೆ ಮಂತ್ರ, ವಿರಿಜಾ ಹೋಮ ಮಂತ್ರ (ಇವೆಲ್ಲ ಮಹಾನಾರಾಯಣ ಉಪನಿಷತ್ತಿನಲ್ಲಿವೆ), ಮಂತ್ರಪುಷ್ಪದಲ್ಲಿ ಉಪಯೋಗಿಸುವ ಯೋಪಾಮ್ ಪುಷಮ್ ವೇದ, ಅರುಣ ಪ್ರಶ್ನ ಮುಂತಾದ ಮಂತ್ರಗಳು ತೈತ್ತಿರೀಯ ಅರಣ್ಯಕದಲ್ಲಿ ಬರುತ್ತವೆ.ಋಗ್ವೇದದ ಮುಖ್ಯ ಉಪನಿಷತ್ತು ಐತರೇಯ ಬ್ರಾಹ್ಮಣಕ್ಕೆ ಸೇರಿದ ಐತರೇಯ ಉಪನಿಷತ್ತು. ಐತರೇಯ ಉಪನಿಷತ್ತಿನಲ್ಲಿ ಜೀವ, ಪ್ರಪಂಚ ಮತ್ತು ಆತ್ಮಗಳ ವಿಚಾರವಾದ ವಿಷಯಗಳು ಬಂದಿವೆ. ಇದರಲ್ಲಿ ೩ ಅಧ್ಯಾಯಗಳಿವೆ. ಒಟ್ಟು ೩೩ ಋಕ್ಕುಗಳಿವೆ. ಅದ್ವೈತದ ನಾಲ್ಕು ಮಹಾವಾಕ್ಯಗಳಲ್ಲಿ ಋಗ್ವೇದದ ವಾಕ್ಯವಾದ 'ಪ್ರಜ್ಞಾನಂ ಬ್ರಹ್ಮ' (ಶುದ್ಧ-ಪೂರ್ಣವಾದ ಜ್ಞಾನವೇ ಬ್ರಹ್ಮ) ಎಂಬ ವಾಕ್ಯ ಐತರೇಯ ಉಪನಿಷತ್ತಿನ ೩ನೇ ಅಧ್ಯಾಯದಲ್ಲಿ ಬಂದಿದೆ.
೪.೨. ಯಜುರ್ವೇದ
ಯಜುರ್ವೇದ ಮಿಕ್ಕ ವೇದಗಳಿಗೆ ಹೋಲಿಸಿದರೆ ಹೊಸದಾಗಿ ರಚನೆಯಾದದ್ದು. ಯಜುರ್ವೇದ ಯಜ್ಞರೂಪಿಯಾದ ವೇದ. ಯಜುರ್ವೇದದಲ್ಲಿ ಯಜ್ಞಯಾಗಾದಿಗಳಲ್ಲಿ ಉಪಯೋಗಿಸುವ ಮಂತ್ರಗಳು, ಅವುಗಳ ಕಾಲ, ನಿಯಮ, ಕ್ರಮ ಮುಂತಾದವುಗಳ ಕುರಿತು ವಿವರವಾಗಿ ಚರ್ಚಿಸುತ್ತದೆ. ಗದ್ಯಾತ್ಮಕೋ ಯಜುಃ ಎಂಬಂತೆ ಯಜುರ್ವೇದವು ಗದ್ಯರೂಪಕವಾದುದು. ಅಂದರೆ ಯಜುರ್ವೇದ ಮಂತ್ರಗಳು ಯಾವುದೇ ಛಂದಸ್ಸಿನ ನಿಯಮಕ್ಕೆ ಅನುಗುಣವಾಗಿ ಇಲ್ಲ. ಯಜ್ಞದಲ್ಲಿ ಅಧ್ವರ್ಯು ಎಂಬ ಋತ್ವಿಕ್ಕಿಗೆ ಯಜುರ್ವೇದ ಮಂತ್ರಗಳು ಉಪಯುಕ್ತವಾಗಿವೆ.ಯಜುರ್ವೇದಗಳಲ್ಲಿ ಎರೆಡು ವಿಭಾಗಗಳಿವೆ: ಕೃಷ್ಣಯಜುರ್ವೇದ ಮತ್ತು ಶುಕ್ಲಯಜುರ್ವೇದ. ಎರಡಕ್ಕೂ ಅದರವೇ ಆದ ಶಾಖೆ, ಬ್ರಾಹ್ಮಣ, ಅರಣ್ಯಕಗಳಿವೆ. ಕೃಷ್ಣಯಜುರ್ವೇದವು ಒಂದು ಕ್ರಮವಾಗಿಲ್ಲ. ಕೃಷ್ಣಯಜುರ್ವೇದದಲ್ಲಿ ಸಂಹಿತಾ ಭಾಗಗಳಲ್ಲಿ ಬ್ರಾಹ್ಮಣ ಭಾಗಗಳೂ ಸೇರಿಕೊಂಡಿವೆ - ಅಂದರೆ ಕೆಲವೆಡೆ ಯಜ್ಞಗಳ ಮಂತ್ರಗಳೂ ಮತ್ತು ಅವುಗಳ ವಿವರಣೆಗಳೂ ಸಂಹಿಯಲ್ಲಿಯೇ ಬಂದಿದೆ. ಶುಕ್ಲಯಜುರ್ವೇದದಲ್ಲಿ ಸಂಹಿತೆ ಮತ್ತು ಬ್ರಾಹ್ಮಣ ಭಾಗಗಳನ್ನು ಕ್ರಮವಾಗಿ ವಿಂಗಡಿಸಲಾಗಿದೆ.
೪.೨.೧. ಕೃಷ್ಣಯಜುರ್ವೇದ
೪.೨.೧.೧. ಸಂಹಿತೆ
ಕೃಷ್ಣಯಜುರ್ವೇದ ಸಂಹಿತೆಯಲ್ಲಿ ಸೋಮ ಯಾಗ, ಅಗ್ನಿಷ್ಟೋಮ ಯಾಗ, ದಶಪೂರ್ಣಮಾಸ ಯಾಗ ಮುಂತಾದ ಯಾಗಗಳ ಮಂತ್ರಗಳಿವೆ. ಕೃಷ್ಣ ಯಜುರ್ವೇದಕ್ಕೆ ಎರೆಡು ಮುಖ್ಯ ಶಾಖೆಗಳಿವೆ: ತೈತ್ತಿರೀಯ ಶಾಖೆ ಮತ್ತು ಕಾಠಕ ಶಾಖೆ. ಇವುಗಳಲ್ಲಿ ತೈತ್ತಿರೀಯ ಶಾಖೆ ಪ್ರಸಿದ್ಧವಾಗಿದೆ. ತೈತ್ತಿರೀಯ ಶಾಖಾ ರೀತ್ಯಾ ಸಂಹಿತೆಯನ್ನು ತೈತ್ತಿರೀಯ ಸಂಹಿತೆಯೆಂದೂ, ಕಾಠಕದದ್ದನ್ನು ಕಾಠಕಸಂಹಿತೆಯೆಂದೂ ಕರೆಯುತ್ತಾರೆ.
ಕೃಷ್ಣಯಜುರ್ವೇದವನ್ನು ಕಾಂಡ - ಪ್ರಶ್ನ ಅಥವಾ ಪ್ರಪಾಠಕ - ಅನುವಾಕಗಳಾಗಿ ವಿಂಗಡಿಸಿದ್ದಾರೆ. ಇದರಲ್ಲಿ ಒಟ್ಟು ೭ ಕಾಂಡಗಳಲ್ಲಿ ೪೪ ಪ್ರಪಾಠಕಗಳಿವೆ. ಪ್ರಸಿದ್ದವಾದ ರುದ್ರ ನಮಕ - ಚಮಕ ಪ್ರಶ್ನಗಳು ಕ್ರಮವಾಗಿ ಕೃಷ್ಣಯಜುರ್ವೇದದ ೪ನೇ ಕಾಂಡದ ೫ ಮತ್ತು ೭ನೇ ಪ್ರಶ್ನಗಳಾಗಿ ಬರುತ್ತವೆ. ಹಿಂದೆಯೇ ಹೇಳಿದಂತೆ ಕೃಷ್ಣಯಜುರ್ವೇದದಲ್ಲಿ ಕೆಲವು ಬ್ರಾಹ್ಮಣ ಮಂತ್ರಗಳು ಸಂಹಿತೆಯಲ್ಲಿ ಬಂದಿವೆ. ಉದಾಹರಣೆಗೆ ಮೊದಲನೇ ಕಾಂಡದ ಎರಡನೇ ಪ್ರಶ್ನದಲ್ಲಿ ಸೋಮಯಾಗದ ಮಂತ್ರಗಳೂ, ೭ನೇ ಕಾಂಡದಲ್ಲಿ ಸೋಮಯಾಗ ಮಾಡುವ ಕಾಲ, ಕ್ರಮಗಳೂ (ಅಂದರೆ ಬ್ರಾಹ್ಮಣವೂ) ಬರುತ್ತದೆ.
೪.೨.೧.೨. ಬ್ರಾಹ್ಮಣ-ಅರಣ್ಯಕ-ಉಪನಿಷತ್ತುಗಳು
ಕೃಷ್ಣಯಜುರ್ವೇದದ ಮುಖ್ಯ ಬಾಹ್ಮಣ ತೈತ್ತಿರೀಯ ಬ್ರಾಹ್ಮಣ. ಇದರಲ್ಲಿ ಸಂಹಿತೆಯಲ್ಲಿಲ್ಲದ ಅನೇಕ ವಿಷಯಗಳಿವೆ. ಆದ್ದರಿಂದ ಕೆಲವರು ತತ್ತಿರೀಯ ಬ್ರಾಹ್ಮಣವನ್ನು ಕೃಷ್ಣಯಜುರ್ವೇದ ಸಂಹಿತೆಯ ಉತ್ತರ ಭಾಗವೆಂದೂ ಕರೆಯುತ್ತಾರೆ. ಇದರಲ್ಲಿ ಮೂರು ಕಾಂಡಗಳು ೨೮ ಅಧ್ಯಾಯಗಳೂ ಇವೆ. ಕಾಠಕ ಶಾಖೆಯ ಕಾಠಕ ಬ್ರಾಹ್ಮಣ ಕೃಷ್ಣಯಜುರ್ವೇದದ ಇನ್ನೊಂದು ಬ್ರಾಹ್ಮಣ. ಇವೆರಡಲ್ಲದೆ ಕೃಷ್ಣಯಜುರ್ವೇದಕ್ಕೆ, ಮೈತ್ರಾಯಣೀ ಬ್ರಾಹ್ಮಣ, ಜಾಬಾಲ ಬ್ರಾಹ್ಮಣ, ಶ್ವೇತಾಶ್ವೇತರ ಬ್ರಾಹ್ಮಣ ಮುಂತಾದ ಬ್ರಾಹ್ಮಣಗಳಿವೆ. ಆದರೆ ಇವಾವುವೂ ನಮಗೆ ಪೂರ್ಣವಾಗಿ ಸಿಕ್ಕಿಲ್ಲ.
ಕೃಷ್ಣ ಯಜುರ್ವೇದದ ಎರೆಡು ಮುಖ್ಯ ಉಪನಿಷತ್ತುಗಳು ತೈತ್ತಿರೀಯ ಮತ್ತು ಕಾಠಕ. ಹೆಸರೇ ಸೂಚಿಸುವಂತೆ ಇವು ಕ್ರಮವಾಗಿ ಆಯಾ ಶಾಖೆಗಳಿಗೆ ಸೇರುತ್ತವೆ. ತತ್ತಿರೀಯ ಉಪನಿಷತ್ತನ್ನು ಶೀಕ್ಷಾವಲ್ಲಿ, ಬ್ರಹ್ಮಾನಂದವಲ್ಲಿ, ಭೃಗುವಲ್ಲಿಗಳೆಂದು ವಿಂಗಡಿಸಿದ್ದಾರೆ. ಶೀಕ್ಷಾವಲ್ಲಿಯಲ್ಲಿ ಬ್ರಹ್ಮಚಾರಿಯ ಕರ್ತವ್ಯಗಳು, ಸ್ವಾಧ್ಯಾಯ ಪ್ರಶಂಸೆ, ಓಂ ಪ್ರಶಂಸೆ (ಓಂ ಇತಿ ಬ್ರಹ್ಮಾ, ಓಮಿತ್ಯೇದಗುಂ ಸರ್ವಂ) ಮುಂತಾದ ವಿಷಯಗಳಿವೆ. ಭೃಗು-ಬ್ರಹ್ಮಾನಂದವಲ್ಲಿಗಳಲ್ಲಿ ಬ್ರಹ್ಮ ಜಿಜ್ಞಾಸವಿದೆ. 'ಮಾತೃದೇವೋ ಭವ, ಪಿತೃದೇವೋ ಭವ', 'ಸತ್ಯಂ ವದ, ಧರ್ಮಂ ಚರ', ಅನ್ನಸಾಮ ಮುಂತಾದ ವಾಕ್ಯಗಳು ತೈತ್ತಿರೀಯ ಉಪನಿಷತ್ತಿನಲ್ಲಿ ಬರುತ್ತವೆ. ಕಠೋಪನಿಷತ್ತಿನಲ್ಲಿ ಎರೆಡು ಅಧ್ಯಾಯಗಳಿವೆ. ಒಂದೊಂದು ಅಧ್ಯಾಯದಲ್ಲಿಯೂ ೩ ವಲ್ಲಿಗಳಿವೆ. ಪ್ರಸಿದ್ಧವಾದ ನಚಿಕೇತ ಯಮನಿಂದ ಬ್ರಹ್ಮವಿದ್ಯೆಯನ್ನು ಪಡೆದ ಪ್ರಸಂಗವೇ ಕಠೋಪನಿಷತ್ತು.
೪.೨.೨. ಶುಕ್ಲ ಯಜುರ್ವೇದ
೪.೨.೨.೧. ಸಂಹಿತೆ
ಶುಕ್ಲ ಯಜುರ್ವೇದದಲ್ಲಿ ಸಂಹಿತೆ ಮತ್ತು ಬ್ರಾಹ್ಮಣಗಳನ್ನು ಕ್ರಮವಾಗಿ ವಿಂಗಡಿಸಲಾಗಿದೆ. ಈ ಕಾರಣದಿಂದ ಶುಕ್ಲ ಯಜುರ್ವೇದವು ಕೃಷ್ಣಯಜುರ್ವೇದಕ್ಕಿಂತ ಈಚಿನದೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಶುಕ್ಲ ಯಜುರ್ವೇದವನ್ನು ಕ್ರಮವಾಗಿ ವಿಂಗಡಿಸಿದವರು ಯಾಜ್ಞವಲ್ಕ್ಯ ಮಹರ್ಷಿಗಳು. ಯಜ್ಞವಲ್ಕ್ಯರಿಗೆ ಅಶ್ವ(ವಾಜಿ)ರೂಪದ ಸೂರ್ಯನಿಂದ ಉಪದೇಶವಾಯಿತೆಂದು ನಂಬಿಕೆಯಿರುವುದರಿಂದ ಶುಕ್ಲಯಜುರ್ವೇದ ಸಂಹಿತೆಯನ್ನು ವಾಜಿಸನೇಯಿ ಸಂಹಿತೆಯೆಂದೂ ಕರೆಯುತ್ತಾರೆ. ಶುಕ್ಲ ಯಜುರ್ವೇದಕ್ಕೆ ಕಾಣ್ವ, ಮಾಧ್ಯಂದಿನ ಎಂಬ ಎರೆಡು ಶಾಖೆಗಳಿವೆ. ಇವೆರೆಡಕ್ಕೂ ಪಾಠದಲ್ಲಿ ಹೆಚ್ಚು ಭೇದವಿಲ್ಲ. ಕಾಣ್ವ ಮಾಧ್ಯಂದಿನರು ಯಾಜ್ಞವಲ್ಕ್ಯರ ನೇರ ಶಿಷ್ಯರು.
ಶುಕ್ಲ ಯಜುರ್ವೇದದಲ್ಲಿ ೪೦ ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯವನ್ನು ಕಂಡಿಕೆಗಳೆಂಬ ಸಣ್ಣ ಸಣ್ಣ ಭಾಗಗಳಾಗಿ ವಿಂಗಡಿಸಿದ್ದಾರೆ. ಇಂತಹ ೧೯೭೧ ಕಂಡಿಕೆಗಳು ಶುಕ್ಲ ಯಜುರ್ವೇದದಲ್ಲಿದೆ. ಮೊದಲ ೨೫ ಅಧ್ಯಾಯಗಳು ದಶಪೂರ್ಣ ಮಾಸ ಯಾಗ(೧-೨), ಅಗ್ನಿಹೋತ್ರ ಯಾಗ(೩), ಸೋಮಯಜ್ಞ(೪-೮), ವಾಜಪೇಯ ಯಾಗ(೯), ರಾಜಸೂಯ ಯಾಗ(೧೦), ಅಗ್ನಿಚಯನ(೧೧-೧೮), ಶೌತ್ರಮಣಿ (೧೯-೨೧) ಮತ್ತು ಅಶ್ವಮೇಧ ಯಾಗಗಳ (೨೨-೨೫) ಕುರಿತಾಗಿ ಇವೆ. ೨೬-೩೯ನೇ ಅಧ್ಯಾಯಗಳಲ್ಲಿ ಪುರುಷ ಮೇಧ, ಪ್ರವರ್ಗ್ಯ, ಪಿತೃಯಜ್ಞ ಮುಂತಾದ ಯಾಗಗಳನ್ನು ಕುರಿತಾಗಿ ಹೇಳಿದ್ದಾರೆ. ಶುಕ್ಲ ಯಜುರ್ವೇದದ ೪೦ನೇ ಅಧ್ಯಾಯವೇ ಈಶೋಪನಿಷತ್ತು.
೪.೨.೨.೨. ಬ್ರಾಹ್ಮಣ-ಅರಣ್ಯಕ-ಉಪನಿಷತ್ತು
ಶುಕ್ಲ ಯಜುರ್ವೇದದ ಮುಖ್ಯ ಬ್ರಾಹ್ಮಣ ಶತಪಥಬ್ರಾಹ್ಮಣ. ಇದರಲ್ಲಿ ೧೪ ಕಾಂಡಗಳೂ ೧೦೦ ಅಧ್ಯಾಯಗಳೂ ಇವೆ. ಇದರಿಂದಲೇ ಈ ಬ್ರಾಹ್ಮಣಕ್ಕೆ ಶತಪಥವೆಂದು ಹೆಸರು. ಸಂಹಿತೆಯಲ್ಲಿ ಬರುವ ಎಲ್ಲ ಯಜ್ಞಗಳ ಕಾಲ, ಕ್ರಮವನ್ನು(ಯಜ್ಞ ವೇದಿಯ ನಿರ್ಮಾಣ, ಸೋಮದ ಉತ್ಪಾದನಾ ಕ್ರಮ ಇತ್ಯಾದಿ) ಈ ಬ್ರಾಹ್ಮಣ ವಿವರಿಸುತ್ತದೆ.
ಶತಪಥಬ್ರಾಹ್ಮಣದ ಕೊನೆಯ ಭಾಗವೇ ಶುಕ್ಲ ಯಜುರ್ವೇದದ ಅರಣ್ಯಕ: ಬೃಹದಾರಣ್ಯಕ. ಬೃಹದಾರಣ್ಯಕ ಉಪನಿಷತ್ತು ಬೃಹದಾರಣ್ಯಕದಲ್ಲಿ ಬರುತ್ತದೆ.
ಶುಕ್ಲ ಯಜುರ್ವೇದದ ಮುಖ್ಯ ಉಪನಿಷತ್ತುಗಳು - ಈಶೋಪನಿಷತ್ತು ಮತ್ತು ಬೃಹದಾರಣ್ಯಕ ಉಪನಿಷತ್ತು. ಮುಖ್ಯ ಉಪನಿಷತ್ತುಗಳಲ್ಲಿಸಂಹಿತಾ ಭಾಗದಲ್ಲಿ ಬರುವ ಒಂದೇ ಒಂದು ಉಪನಿಷತ್ತು ಈಶೋಪನಿಷತ್ತು. ಗಾತ್ರದಲ್ಲಿ ಈಶೋಪನಿಷತ್ತು ಚಿಕ್ಕದು. ಇದರಲ್ಲಿ ೧೮ ಋಕ್ಕುಗಳು ಮಾತ್ರವಿದೆ. ಆದರೂ 'ಈಶಾವಾಸ್ಯಮಿದಗಂ ಸರ್ವಂ' ಎಂದು ಆರಂಭವಾಗುವ ಈ ಉಪನಿಷತ್ತನ್ನು ಮುಖ್ಯ ಉಪನಿಷತ್ತುಗಳಲ್ಲಿ ಅತಿಮುಖ್ಯವೆಂದು ಪರಿಗಣಿಸುತ್ತಾರೆ. ಅತಿ ಪ್ರಸಿದ್ದವಾದ 'ಸೋಹಂ' ಎಂಬ ವಾಕ್ಯ ಈಶೋಪನಿಷತ್ತಿನದು. ಬೃಹದಾರಣ್ಯಕ ಉಪನಿಷತ್ತು ಬೃಹದಾರಣ್ಯಕದಲ್ಲಿ ಬರುತ್ತದೆ. ಈ ಉಪನಿಷತ್ತಿನಲ್ಲಿ ೬ ಕಾಂಡಗಳಿವೆ. ಅದ್ವೈತದ ಯಜುರ್ವೇದ ಮಹಾವಾಕ್ಯವಾದ 'ಅಹಂ ಬ್ರಹ್ಮಾಸ್ಮಿ' ಎಂಬ ವಾಕ್ಯವು ಬೃಹದಾರಣ್ಯಕ ಉಪನಿಷತ್ತಿನಲ್ಲಿದೆ. 'ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋಮಾ ಅಮೃತಂಗಮಯ' ಎಂಬ ಪ್ರಸಿದ್ದವಾದ ಮಂತ್ರ ಬೃಹದಾರಣ್ಯಕ ಉಪನಿಷತ್ತಿನ ಮೊದಲನೇ ಕಾಂಡದ ಮೂರನೇ ಅಧ್ಯಾಯದಲ್ಲಿದೆ.
೪.೩. ಸಾಮವೇದ
೪.೩.೧. ಸಂಹಿತೆ
ಸಾಮವೇದವು ಯಜ್ಞದಲ್ಲಿ ಉದ್ಗಾತೃವೆಂಬ ಋತ್ವಿಜನಿಗೆ ಸಾಮಗಾನ ಮಾಡಲು ಉಪಯುಕ್ತವಾದ ಮಂತ್ರಗಳು. ಸಾಮವೇದ ಸಂಹಿತೆಯು ಸಂಪೂರ್ಣವಾಗಿ ಪ್ರತ್ಯೇಕ ಗ್ರಂಥವಲ್ಲ. ೭೫ ಮಂತ್ರಗಳನ್ನು ಹೊರತುಪಡಿಸಿ ಇನ್ನೆಲ್ಲ ಮಂತ್ರಗಳು ಋಗ್ವೇದಸಂಹಿತೆಯಲ್ಲಿವೆ. ಇವು ಬಹುತೇಕ ಋಗ್ವೇದದ ೮ನೇ ಮಂತ್ತು ೯ನೇ ಮಂಡಲದ ಮಂತ್ರಗಳು. ಸಾಮವೇದಕ್ಕೆ ಕೌಥುಮ, ರಾಣಾಯನೀಯ ಮತ್ತು ಜೈಮಿನೀಯ ಎಂಬ ಮೂರು ಶಾಖೆಯ ಸಂಹಿತೆಗಳು ದೊರತಿವೆ. ಇವುಗಳಲ್ಲಿ ಕೌಥುಮ ಶಾಖೆಯೇ ಪ್ರಸಿದ್ದಿಯಾಗಿದೆ.
ಸಾಮವೇದವನ್ನು ಅರ್ಚಿಕ ಮತ್ತು ಉತ್ತರಾರ್ಚಿಕವೆಂದು ಎರೆಡು ಭಾಗಗಳಾಗಿ ವಿಂಗಡಿಸಿದ್ದಾರೆ. ಅರ್ಚಿಕದಲ್ಲಿ ೫೮೫ ಮಂತ್ರಗಳು ಮತ್ತು ಉತ್ತರಾರ್ಚಿಕದಲ್ಲಿ ೯೬೪ ಮಂತ್ರಗಳು - ಒಟ್ಟಾಗಿ ೧೫೪೯ ಮಂತ್ರಗಳಿವೆ. ಸಾಮಗಾನದಲ್ಲಿ ಗ್ರಾಮ್ಯಗಾನ ಮತ್ತು ಅರಣ್ಯಗಾನಗಳೆಂಬ ಎರೆಡು ವಿಧಗಳಿವೆ. ಗ್ರಾಮ್ಯಗಾನಗಳನ್ನು ಜನಗಳ ಮುಂದೆಯೂ ಅರಣ್ಯಗಾನಗಳನನ್ನು ಅರಣ್ಯಗಳಲ್ಲಿ ಅಥವಾ ವೈಯುಕ್ತಿಕ ಧ್ಯಾನಗಳಿಗಾಗಿ ಹಾಡುತ್ತಿದ್ದರು. ಅರ್ಚಿಕದ ಮಂತ್ರಗಳು ಸಾಮಾನ್ಯವಾಗಿ ದೇವತಾರೂಪಕವಾದ ಮಂತ್ರಗಳು. ಉತ್ತರಾರ್ಚಿಕದ ಮಂತ್ರಗಳು ಯಜ್ಞ ಸಂಬಂಧಿ ಮಂತ್ರಗಳು.

ಸಾಮವೇದ ಮಂತ್ರಗಳು ಸಾಮಾನ್ಯವಾಗಿ ಗಾನಮಾಡಲು ಅನುಕೂಲವಾದ ಗಾಯತ್ರೀ ಮತ್ತು ಪ್ರಗಾಥ ಛಂದಸ್ಸುಗಳ್ಳಲ್ಲಿದೆ. ಸಾಮವೇದಕ್ಕೂ ಇತರ ವೇದಗಳಿಗೂ ಉಚ್ಚಾರದಲ್ಲಿ ಭೇದವಿದೆ. ಋಗ್, ಯಜುಸ್ಸು ಮತ್ತು ಅಥರ್ವವೇದ ಮಂತ್ರಗಳನ್ನು ಉದಾತ್ತ, ಅನುದಾತ್ತ, ಸ್ವರಿತಗಳೆಂಬ ಮೂರು ಸ್ವರಗಳಲ್ಲಿ ಉಚ್ಚರಿಸುತ್ತಾರೆ. ಆದರೆ ಸಾಮಗಾನದಲ್ಲಿ ಸಂಗೀತದ ಪಂಚಮ, ಮಾಧ್ಯಮ, ಗಾಂಧಾರ, ಋಷಭ, ಷಡ್ಜ, ದೈವತ ಮತ್ತು ನಿಷಾದಗಳಿಗನುಸಾರವಾಗಿ ಕ್ರುಷ್ಟ, ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಪಂಚಮ ಮತ್ತು ಷಷ್ಠಗಳೆಂಬ ಸಪ್ತ ಸ್ವರಗಳಿವೆ. ಅನೇಕ ವಿಧವಾದ ಗಾನಗಳೂ, ಅವುಗಳಿಗೆ ವಿವಿಧ ಹೆಸರುಗಳೂ ಇವೆ. ಇಂದಿನ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಶಾಸ್ತ್ರಗಳಿಗೆ ಸಾಮವೇದವೇ ಮೂಲವೆಂದು ಹೇಳುತ್ತಾರೆ.
೪.೩.೨. ಬ್ರಾಹ್ಮಣ-ಅರಣ್ಯಕ-ಉಪನಿಷತ್ತುಗಳು
ಸಾಮವೇದಕ್ಕೆ ತಾಂಡ್ಯ ಬ್ರಾಹ್ಮಣ, ಷಡ್ವಿಂಶತಿ ಬ್ರಾಹ್ಮಣ ಮತ್ತು ಜಮಿನೀಯ ಬ್ರಾಹ್ಮಣಗಳು ಮುಖ್ಯವಾದುವು. ಇವಲ್ಲದೆ ಅನೇಕ ಬ್ರಾಹ್ಮಣಗಳ ಹೆಸರುಗಳು ದೊರೆತಿದ್ದರೂ ಅವುಗಳ ಪ್ರತಿಗಳು ದೊರೆತಿಲ್ಲ. ತಾಂಡ್ಯ ಬ್ರಾಹ್ಮಣದ ಕೊನೆಯ ಭಾಗವು ತಾಂಡ್ಯ ಅರಣ್ಯಕವೆನಿಸಿಕೊಳ್ಳುತ್ತದೆ. ಇದಲ್ಲದೆ ಜೈಮಿನಿ ಬ್ರಾಹ್ಮಣಕ್ಕೆ ಸೇರಿದ ತಲವಕಾರ ಅಥವಾ ಜೈಮಿನಿ ಅರಣ್ಯಕಗಳಿವೆ.

ಸಾಮವೇದದ ಮುಖ್ಯ ಉಪನಿಷತ್ತುಗಳು ಎರೆಡು: ಛಾಂದೋಗ್ಯ ಮತ್ತು ಕೇನ. ಛಾಂದೋಗ್ಯವು ದೊಡ್ಡ ಉಪನಿಷತ್ತು. ಇದರಲ್ಲಿ ಎಂಟು ಪ್ರಪಾಠಕಗಳಿವೆ. ಅನೇಕ ಉಪಕಥೆಗಳು ಬರುತ್ತವೆ. ಪಂಚಾಗ್ನಿ ವಿದ್ಯೆ, ಆತ್ಮ-ಬ್ರಹ್ಮತತ್ವ ಮುಂತಾದ ಅನೇಕ ಗಹನ ವಿಷಯಗಳನ್ನು ಈ ಉಪನಿಷತ್ತಿನಲ್ಲಿ ಚರ್ಚಿಸಲಾಗಿದೆ. ಅದ್ವೈತದ ಸಾಮವೇದ ಮಹಾವಾಕ್ಯವಾದ 'ಸ ಆತ್ಮಾ ತತ್ವಮಸಿ' ವಾಕ್ಯವು ಛಾಂದೋಗ್ಯ ಉಪನಿಷತ್ತಿನ ೬ನೇ ಪ್ರಪಾಠಕದಲ್ಲಿ ಬರುತ್ತದೆ. ಕೇನೋಪನಿಷತ್ತು ಜೈಮಿನಿ ಅರಣ್ಯಕದಲ್ಲಿ ಬರುತ್ತದೆ. ಇದನ್ನು ತಲವಕಾರ ಉಪನಿಷತ್ತೆಂದೂ ಕರೆಯುತ್ತಾರೆ. ಕೇನೋಪನಿಷತ್ತಿನಲ್ಲಿ ಮೂರು ಭಾಗಗಳಿವೆ. ಮೊದಲ ಭಾಗವು ೧೩ ಮಂತ್ರಗಳ ಪದ್ಯಗಳಾಗಿಯೂ, ಎರಡನೆಯ ಭಾಗವು ೧೫ ಮಂತ್ರಗಳ ಗದ್ಯವಾಗಿಯೂ ಇವೆ. ಮೂರನೇ ಭಾಗದಲ್ಲಿ ಆರು ಮಂತ್ರಗಳಿವೆ. ಕೇನದ ಮೂರು ಭಾಗಗಳನ್ನು ನಾಲ್ಕು ಅಧ್ಯಾಯಗಳಾಗಿ ವಿಂಗಡಿಸಿದ್ದಾರೆ. ಕೇನೋಪನಿಷತ್ತಿನಲ್ಲಿ ಸಗುಣ ಮತ್ತು ನಿರ್ಗುಣ ಬ್ರಹ್ಮಗಳ ಚರ್ಚೆಯಿದೆ.
೪.೪. ಅಥರ್ವವೇದ
೪.೪.೧. ಸಂಹಿತೆ
ಅಥರ್ವವೇದವನ್ನು ಅಥರ್ವಾಂಗೀರಸವೇದ, ಭೃಗ್ವಂಗೀರಸವೇದ, ಬ್ರಹ್ಮವೇದವೆಂದೂ ಕರೆಯುತ್ತಾರೆ. ವಿಷಯದಲ್ಲಿ ಮಿಕ್ಕವೇದಗಳಗಿಂತ ಅಥರ್ವವೇದವು ಭಿನ್ನ. ಅಥರ್ವವೇದದ ಭಾಷಾಶೈಲಿ ಋಗ್ವೇದವನ್ನು ಹೋಲುತ್ತದೆ. ಆದರೆ ಛಂದಸ್ಸುಗಳಲ್ಲಿ ಕಟ್ಟುನಿಟ್ಟಾದ ಕ್ರಮವಿಲ್ಲ. ಅಥರ್ವವೇದದಲ್ಲಿ ದೇವತಾ ಸ್ತೋತ್ರಗಳು, ಯಜ್ಞರೂಪ ಮಂತ್ರಗಳಲ್ಲದೆ, ಚಿಕಿತ್ಸಾ ವಿಧಾನಗಳು, ಗಿಡ ಮೂಲಿಕೆಗಳು, ಮನುಷ್ಯನ ವ್ಯಕ್ತಿತ್ವ, ವಿವಿಧ ಕರ್ಮಗಳು, ಭೂತ-ಪ್ರೇತ ಕುರಿತಾದ ವಿಷಯಗಳೂ ಬರುತ್ತವೆ. ಅಥರ್ವವೇದಕ್ಕೆ ೯ ಶಾಖೆಗಳಿವೆ, ಅದರಲ್ಲಿ ಪಿಪ್ಪಲಾದ ಶಾಖೆಯೇ ಮುಖ್ಯವಾದದ್ದು.
ಅಥರ್ವವೇದದಲ್ಲಿ ೨೦ ಭಾಗಗಳಿವೆ. ೨೦ನೇ ಭಾಗದ ಬಹುತೇಕ ಎಲ್ಲ ಮಂತ್ರಗೂ ಋಗ್ವೇದ ಮಂತ್ರಗಳು. ಈ ೨೦ ಭಾಗಗಳಲ್ಲಿ ೭೩೧ ಸೂಕ್ತಗಳೂ, ಸುಮಾರು ೧೨ಸಾವಿರ ಋಕ್ಕುಗಳೂ ಇವೆ. ಅಥರ್ವವೇದದ ಅನೇಕ ಸೂಕ್ತಗಳು ಒಂದರಿಂದ ಐದು ಮಂತ್ರಗಳ ಚಿಕ್ಕ-ಚಿಕ್ಕ ಸೂಕ್ತಗಳು.
೪.೪.೨. ಬ್ರಾಹ್ಮಣ-ಅರಣ್ಯಕ-ಉಪನಿಷತ್ತುಗಳು
ಅಥವಾವೇದದ ಬ್ರಾಹ್ಮಣ ಗೋಪಥ ಬ್ರಾಹ್ಮಣ. ಅರಣ್ಯಕಗಳ ಬಗ್ಗೆ ತಿಳಿದಿಲ್ಲ. ಅಥರ್ವವೇದದಲ್ಲಿ ಮೂರು ಮುಖ್ಯ ಉಪನಿಷತ್ತುಗಳಿವೆ: ಪ್ರಶ್ನ, ಮಾಂಡೂಕ್ಯ, ಮುಂಡಕ. ಪ್ರಶ್ನೋಪನಿಷತ್ತು ಹೆಸರೇ ತಿಳಿಸುವಂತೆ ಪ್ರಶ್ನೋತ್ತರ ರೂಪದಲ್ಲಿದೆ. ಇದರಲ್ಲಿ ೬ ಪ್ರಶ್ನೆಗಳಿವೆ. ಮಾಂಡೂಕ್ಯ ಉಪನಿಷತ್ತು ೧೨ ಮಂತ್ರಗಳ ಮುಖ್ಯೋಪನಿಷತ್ತುಗಳಲ್ಲಿಯೇ ಅತ್ಯಂತ ಸಣ್ಣ ಉಪನಿಷತ್ತು. ಜಾಗ್ರತ್, ಸ್ವಪ್ನ, ಸುಷುಪ್ತಿ, ತುರ್ಯಗಳೆಂಬ ನಾಲ್ಕು ಅವಸ್ಥೆಗಳ ಕುರಿತು ಈ ಉಪನಿಷತ್ತು ವಿವರಿಸುತ್ತದೆ. ಅದ್ವೈತ ಅಥರ್ವವೇದದ ಮಹಾವಾಕ್ಯವಾದ 'ಅಯಮಾತ್ಮಾ ಬ್ರಹ್ಮ' ಎಂಬ ವಾಕ್ಯವು ಮಾಂಡೂಕ್ಯೋಪನಿಷತ್ತಿನ ಎರಡನೇ ಮಂತ್ರದಲ್ಲಿ ಬರುತ್ತದೆ. ಮುಂಡಕೋಪನಿಷತ್ತಿನಲ್ಲಿ ಮೂರು ಮುಂಡಕಗಳು-ಆರು ಕಾಂಡಗಳು-೬೪ ಮಂತ್ರಗಳಿವೆ. ಭಾರತದ ರಾಷ್ಟ್ರ ಲಾಂಛನವಾದ ಅಶೋಕದಲ್ಲಿ ಕೆತ್ತಿರುವ 'ಸತ್ಯಮೇವ ಜಯತೆ' ಎಂಬ ವಾಕ್ಯ ಮುಂಡಕೋಪನಿಷತ್ತಿನದು.
೫. ವೇದಾಂಗಗಳು
ವೇದಾಂಗಗಳು ವೇದಗಳ ಭಾಗಗಳಲ್ಲ. ಇವು ವೇದಗಳನ್ನು ಕಲಿಯಲು, ಅರ್ಥ ಮಾಡಿಕೊಳ್ಳಲು ಉಪಯುಕ್ತವಾದಗ್ರಂಥಗಳು. ವೇದಗಳು ಸಾವಿರಾರು ವರ್ಷಗಳಿಂದ ಶಾಖಾ ಭೇದಗಳನ್ನು ಹೊರತುಪಡಿಸಿ ಸ್ವರ ಮಾತ್ರೆಗಳಲ್ಲಿ ಶಿಥಿಲವಾಗದೆ ಇರುವುದಕ್ಕೆ ಕಾರಣ ವೇದಾಂಗಗಳು. ಆರು ವೇದಾಂಗಗಳಿವೆ: ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ ಮತ್ತು ಕಲ್ಪ. ವೇದಾಂಗಗಳು ಸ್ಮೃತಿಗಳು. ಅಂದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದವು.೫.೧. ಶಿಕ್ಷಾ
ಶಿಕ್ಷಾ ಎಂದರೆ ವೇದಗಳನ್ನು ಸ್ವರಸಹಿತವಾಗಿ ಉಚ್ಚಾರಣಾ ದೋಷಗಳಿಲ್ಲದೆ ಪಠಿಸುವುದನ್ನು ಕಲಿಸುವ ಶಾಸ್ತ್ರ. ವೇದದ ಪ್ರತಿಶಾಖೆಗೂ ಅದರದೇ ಆದ ಪ್ರತ್ಯೇಕ ಶಿಕ್ಷಾ ಗ್ರಂಥಗಳಿವೆ. ಈ ಗ್ರಂಥಗಳನ್ನು 'ಪ್ರತಿಶಾಖ್ಯಾ' ಎಂದು ಕರೆಯುತ್ತಾರೆ. ಋಗ್ವೇದದಕ್ಕೆ ಶಾಕಲ ಶಾಖೆಯ ಪ್ರತಿಶಾಖ್ಯೆ ಪ್ರಸಿದ್ಧಿಯಾಗಿದೆ. ಕೃಷ್ಣಯಜುರ್ವೇದಕ್ಕೆ ತೈತ್ತಿರೀಯ ಪ್ರತಿಶಾಖ್ಯೆ, ಶುಕ್ಲ ಯಜುರ್ವೇದಕ್ಕೆ ವಾಜಸನೇಯಿ ಪ್ರತಿಶಾಖ್ಯೆ, ಸಾಮವೇದಕ್ಕೆ ಸಾಮವೇದ ಪ್ರತಿಶಾಖ್ಯೆ, ಅಥರ್ವವೇದಕ್ಕೆ ಅಥರ್ವವೇದ ಪ್ರತಿಶಾಖ್ಯೆ ಇರುವುದು.ಪ್ರತಿಶಾಖ್ಯ ಗ್ರಂಥ ಲಕ್ಷಣಗಳನ್ನು ಶಾಕಾಲ ಪ್ರತಿಶಾಖ್ಯೆಯ ಉದಾಹರಣೆಯೊಂದಿಗೆ ತಿಳಿಯಬಹುದು. ಶಾಕಾಲ ಪ್ರತಿಶಾಖ್ಯೆಯಲ್ಲಿ ೩ ಅಧ್ಯಾಯಗಳಿವೆ. ಒಂದೊಂದು ಅಧ್ಯಾಯದಲ್ಲಿ ೬ ಪಟಲಗಳೆಂಬ ಉಪವಿಭಾಗಗಳಿವೆ. ಮೊದಲ ಪಟಲದಲ್ಲಿ ಅಕ್ಷರ, ಸ್ವರ, ವ್ಯಂಜನಗಳ ಬಗ್ಗೆ ವಿವರಣೆಯಿದೆ. ಎರಡನೆಯ ಪಟಲದಲ್ಲಿ ಅಕ್ಷರ ಜೋಡಣೆಯ ಬಗ್ಗೆ ವಿವರಿಸಲಾಗಿದೆ. ಮೂರನೆಯ ಪಟಲ ಸ್ವರ ಪಟಲ. ಇದರಲ್ಲಿ ಉಚ್ಛಾರಣಾ ವಿಧಾನಗಳನ್ನು ತಿಳಿಸಲಾಗಿದೆ. ೪-೬ನೇ ಪಟಲಗಳಲ್ಲಿ ವ್ಯಂಜನ ಸಂಧಿಗಳನ್ನೂ, ೭-೯ನೇ ಪಟಲಗಳಲ್ಲಿ ಸ್ವರಿತ ಸ್ವರದ ಬಗ್ಗೆಯೂ, ಮಿಕ್ಕ ಪಟಲಗಳಲ್ಲಿಅಕ್ಷರ ಉತ್ಪತ್ತಿ ಮತ್ತು ಛಂದಸ್ಸುಗಳನ್ನು ಕೊಡಲಾಗಿದೆ.
ಶಿಕ್ಷಾ ಶಾಸ್ತ್ರದಲ್ಲಿ ಆರು ಭಾಗಗಳಿವೆ: ವರ್ಣ, ಸ್ವರ, ಮಾತ್ರ, ಬಲ, ಸಾಮ ಮತ್ತು ಸಂತಾನ.
ವರ್ಣ: ವರ್ಣ ಎಂದರೆ ಅಕ್ಷರಗಳು. 'ತ್ರಿಶಷ್ಠಿಶ್ಚತುಃಶಷ್ಟಿರ್ವಾ ವರ್ಣಾಃ ಸಂಭವತೋ ಮಶಾಃ' ಎಂಬಂತೆ ಸಂಸ್ಕೃತ ಭಾಷೆಯಲ್ಲಿ ೬೩ ಅಥವಾ ೬೪ ವರ್ಣಗಳಿವೆ.
ಸ್ವರ: ಸ್ವರಗಳು ಅಕ್ಷರಗಳನ್ನು ಉಚ್ಚರಿಸಲು ಸಹಾಯ ಮಾಡುವಂಥಹವು. ಸ್ವರಗಳಲ್ಲಿ ಮೂರು ವಿಧಗಳಿವೆ: ಉದಾತ್ತ, ಅನುದತ್ತ ಮತ್ತು ಸ್ವರಿತ. ಸಾಧಾರಣ ಧ್ವನಿಯಲ್ಲಿ ಉಚ್ಚರಿಸುವ ಅಕ್ಷರಗಳು ಉದಾತ್ತಸ್ವರಗಳು. ಕೊಂಚ ಕಡಿಮೆ ಧ್ವನಿಯಲ್ಲಿ ಉಚ್ಚರಿಸುವ ಅಕ್ಷರಗಳು ಅನುದಾತ್ತ ಸ್ವರಗಳು. ಸ್ವರಿತಗಳನ್ನು ಸ್ವಲ್ಪ ಏರಿನ ಧ್ವನಿಯಲ್ಲಿ ಉಚ್ಚರಿಸುತ್ತಾರೆ. ದೀರ್ಘಾಕ್ಷರ ಸ್ವರಿತಗಳನ್ನು ದೀರ್ಘಸ್ವರಿತಗಳೆಂದು ಕರೆಯುತ್ತಾರೆ. ಮಂತ್ರಗಳನ್ನು ಬರೆಯುವಾಗ ಉದಾತ್ತ ಸ್ವರಗಳಿಗೆ ಯಾವುದೇ ಚಿಹ್ನೆ ಬಳಸುವುದಿಲ್ಲ. ಅನುದಾತ್ತ ಸ್ವರದ ಕೆಳಗೆ '_' ಚಿಹ್ನೆಯನ್ನು ಬಳಸುತ್ತಾರೆ. ಸ್ವರಿತ ಸ್ವರದ ಮೇಲೆ '।' ಚಿಹ್ನೆಯನ್ನು ಬಳಸುತ್ತಾರೆ. ದೀರ್ಘಸ್ವರಿತದ ಮೇಲೆ '।।' ಚಿಹ್ನೆಯನ್ನು ಬಳಸುತ್ತಾರೆ. ಕೆಲವು ಉದಾಹರಣೆಗಳು:
೧. ಋಗ್ವೇದದ ಮೊದಲ ಮಂತ್ರ:
।। । । ।।
ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಂ ।
_ _ _ _
।। ।
ಹೋತಾರಂ ರತ್ನ ಧಾತಮಂ ।।
_।। ।
ಹೋತಾರಂ ರತ್ನ ಧಾತಮಂ ।।
ಧ್ವನಿಮುದ್ರಣ:
https://www.aurobindo.ru/workings/matherials/rigveda/01/01-001.htm
ಮೇಲಿನ ಮಂತ್ರವು ಸ್ವರಿತ ದೀರ್ಘ ಸ್ವರಿತಗಳ ಉಚ್ಚಾರಣೆಯನ್ನು ಸ್ಪಷ್ಟಪಡಿಸುತ್ತದೆ.
೨. ಋಗ್ವೇದ ಮೊದಲ ಮಂಡಲ ನಾಲ್ಕನೇ ಸೂಕ್ತದ ಮೊದಲನೇ ಮಂತ್ರ:
।। ।। ।।
ಸುರೂಪಕೃತ್ನುಮೂತಯೇ ಸುದುಘಾಮಿವ ಗೋದುಹೇ ।
_ _ _ _ _ _ _
।
ಜುಹೂಮಸಿ ದ್ಯವಿದ್ಯವಿ ॥
_ _ _
ಧ್ವನಿಮುದ್ರಣ:
https://www.aurobindo.ru/workings/matherials/rigveda/01/01-004.htm
ಈ ಮಂತ್ರದ ಸಾಲುಗಳ ಮೊದಲ ಪದಗಳು ಅನುದಾತ್ತಗಳ ಉಚ್ಚಾರಣೆಯನ್ನು ಸ್ಪಷ್ಟಪಡಿಸುತ್ತದೆ.
ಮಂತ್ರಗಳಲ್ಲಿ ಉದಾತ್ತ, ಅನುದಾತ್ತ, ಸ್ವರಿತಗಳನ್ನು ತಪ್ಪಾಗಿ ಉಚ್ಚರಿಸಿದರೆ ಅರ್ಥ ವ್ಯತ್ಯಾಸವಾಗುವ ಪ್ರಮಾದವಿರುತ್ತದೆ.
ಮಾತ್ರೆ: 'ಅ' ಎಂಬ ಸ್ವರವನ್ನು ಉಚ್ಚರಿಸಲು ಬೇಕಾಗುವ ಕಾಲವನ್ನು ಮಾತ್ರೆ ಎಂದು ಕರೆಯುತ್ತಾರೆ. ಒಂದು ಮಾತ್ರಾ ಅಕ್ಷರವನ್ನು ಹ್ರಸ್ವಸ್ವರವೆಂದೂ, ಎರೆಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರವನ್ನು ದೀರ್ಘಸ್ವರವೆಂದೂ, ಮೂರು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರವನ್ನು ಪ್ಲುತವೆಂದೂ ಕರೆಯುತ್ತಾರೆ. ಪ್ಲುತವನ್ನು ಸೂಚಿಸಲು ಅಕ್ಷರದ ಮುಂದೆ '೩' ಚಿಹ್ನೆಯನ್ನು ಬರೆಯುತ್ತಾರೆ. ಎರೆಡು ಮಾತ್ರಾ ಪ್ಲುತವೂ ಉಂಟು. ಪ್ಲುತ ಸ್ವರಗಳ ಉಚ್ಚಾರಣಾ ಉದಾಹರಣೆಗಳು ಮೇಲೆ ಕೊಟ್ಟಿರುವ ಧ್ವನಿ ಮುದ್ರಣಿಕೆಗಳಲ್ಲಿಯೇ ಇದೆ. ಮೊದಲ ಮುದ್ರಿಕೆಯು ಋಗ್ವೇದದ ಮೊದಲನೇ ಸೂಕ್ತ. ಅದರ ಎರಡನೆಯ ಮಂತ್ರದಲ್ಲಿ ಎರೆಡು ಮಾತ್ರಾಕಾಲದ ಪ್ಲುತ ಸ್ವರವಿದೆ. ಎರಡನೆಯ ಮುದ್ರಣ ಋಗ್ವೇದದ ನಾಲ್ಕನೇ ಸೂಕ್ತ. ಅದರ ಕೊನೆಯ ಮಂತ್ರದಲ್ಲಿ ಮೂರು ಮಾತ್ರಾಕಾಲದ ಪ್ಲುತ ಸ್ವರವಿದೆ.
ಬಲ: ಬಲವೆಂದರೆ ಉಚ್ಚಾರಣೆಯ ಸ್ಥಾನ ಪ್ರಯತ್ನಗಳು. ಸ್ಥಾನವೆಂದರೆ ನಾಲಿಗೆಯು ಬಾಯಿಯನ್ನು ಸ್ಪರ್ಶಿಸುವ ಸ್ಥಳಗಳು. ಕಂಠ, ದಂತ ಮುಂತಾದ ೮ ಸ್ಥಾನಗಳಿವೆ. ಸ್ವರಗಳನ್ನು ಉಚ್ಚರಿಸುವಾಗ ನಾಲಿಗೆಯು ಬಾಯಿಯನ್ನು ಸ್ಪರ್ಶಿಸುವುದಿಲ್ಲ. ಪ ವರ್ಗದ ಸ್ವರಗಳನ್ನು ಉಚ್ಚರಿಸುವಾಗ ನಾಲಿಗೆಯು ತುಟಿಯನ್ನು ಸ್ಪರ್ಶಸುತ್ತದೆ ಇತ್ಯಾದಿ.
ಸಾಮ: ಸಾಮವು ಯಾವ ಅಕ್ಷರವನ್ನು ಹ್ರಸ್ವವಾಗಿ ಪಠಿಸಬೇಕು ಯಾವುದನ್ನು ದೀರ್ಘವಾಗಿ ಪಠಿಸಬೇಕು ಎಂಬುದನ್ನು ತಿಳಿಸುತ್ತದೆ. ಮಂತ್ರಗಳನ್ನು ಉಚ್ಚರಿಸುವಾಗ ಅತಿ ಮೆಲ್ಲಗೆಯೂ, ಅತಿ ರಾಗವಾಗಿಯೂ ಉಚ್ಛರಿಸಬಾರದು. ಸಾಮಕ್ಕೆ ತಕ್ಕಂತೆ - ಅಂದರೆ ಅಕ್ಷರಗಳನ್ನು ಹ್ರಸ್ವ, ದೀರ್ಘ, ಸಂಯುಕ್ತಾಕ್ಷರಗಳನ್ನು ಸ್ಪಷ್ಟವಾಗಿ ಕೇಳಿಸುವಂತೆ ಉಚ್ಚರಿಸಬೇಕು.
ಸಂತಾನ: ಸಂತಾನವು ವಿವಿಧ ಪದಗಳ ಸಂಧಿ ನಿಯಮಾನುಕ್ರಮವನ್ನು ತಿಳಿಸುತ್ತದೆ.
೫.೨. ವ್ಯಾಕರಣ
ವೇದ ವ್ಯಾಕರಣ ಗ್ರಂಥಗಳ ಬಹುತೇಕ ಭಾಗಗಳು ಈಗ ಲುಪ್ತವಾಗಿದೆ. ಅಲ್ಲಲ್ಲಿ ಕೆಲವು ಅಂಶಗಳು ಸಿಗುತ್ತವೆ. ವ್ಯಾಕರಣ ಗ್ರಂಥಕಾರರಲ್ಲಿ ಶಕಟಯಾನ, ಗಾರ್ಗ್ಯ, ಶಾಕಲ್ಯ ಮತ್ತು ಯಾಸ್ಕರು ಮುಖ್ಯರು. ವೇದಕಾಲದ ಸಂಸ್ಕೃತ ವ್ಯಾಕರಣಕ್ಕೂ ಆಧುನಿಕ ಸಂಸ್ಕೃತ ವ್ಯಾಕರಣಕ್ಕೂ ವ್ಯತ್ಯಾಸಗಳಿವೆ. ನಮಗೆ ಈಗ ಸಿಗುವ ಪಾಣಿನಿಯ ಎಂಟು ಅಧ್ಯಾಯಗಳ ಅಷ್ಟಾಧ್ಯಾಯಿ ಎಂಬ ವ್ಯಾಕರಣ ಗ್ರಂಥವೇ ಪುರಾತನವಾದುದು. ಈ ಗ್ರಂಥವು ಆಧುನಿಕ ಸಂಸ್ಕೃತ ವ್ಯಾಕರಣವನ್ನೇ ಪ್ರಧಾನವಾಗಿ ವಿವರಿಸಿರುವುದರಿಂದ ಇದನ್ನು ವೇದಾಂಗವಾಗಿ ಪರಿಗಣಿಸುವುದಿಲ್ಲ. ಆದರೂ ಪಾಣಿನೀಯ ವ್ಯಾಕರಣ ಗ್ರಂಥದಲ್ಲಿ ವೇದ ವ್ಯಾಕರಣದ ಕೆಲವು ಭಾಗಗಳು ಸಿಗುತ್ತವೆ.
ವೇದದ ಅರ್ಥವನ್ನು ತಿಳಿಯಲು, ವೇದ ಮಂತ್ರಗಳು ಸ್ವರ, ಮಾತ್ರಾದಿಗಳ ವ್ಯತ್ಯಾಸವಾಗದಂತೆ ಕಾಪಾಡಲು, ಮಂತ್ರಗಳ ಲಿಂಗ, ವಚನಾದಿಗಳನ್ನು ತಿಳಿಯಲು, ಸಂಧಿ ಸಮಾಸಗಳನ್ನು ತಿಳಿಯಲು ವ್ಯಾಕರಣ ಶಾಸ್ತ್ರವೇ ಮುಖ್ಯವಾದುದು.
೫.೩. ಛಂದಸ್ಸು
ಉಚ್ಚ ಸಾಹಿತ್ಯದ ಬಹುತೇಕ ಗ್ರಂಥಗಳು ಛಂದೋಬದ್ದವಾಗಿವೆ. ಛಂದೋಬದ್ಧವಾದ ಪದ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಅನುಕೂಲವಾದ್ದರಿಂದ ಬರವಣಿಗೆಯಿಲ್ಲದ ಆ ಕಾಲದಲ್ಲಿ ವೇದಗಳನ್ನು ಛಂದೋಬದ್ದವಾಗಿ ರಚಿಸಿರುವುದು ಸ್ವಾಭಾವಿಕವಾಗಿದೆ. 'ಛಂದಃ ಪಾದೌ ತು ವೇದಸ್ಯ' ಎಂಬಂತೆ ಮನುಷ್ಯನಿಗೆ ಕಾಲುಗಳು ಎಷ್ಟು ಮುಖ್ಯವೋ ವೇದಗಳಿದೆ ಛಂದಸ್ಸು ಅಷ್ಟು ಮುಖ್ಯ. ಛಂದಸ್ಸುಗಳು ವೇದ ಮಂತ್ರಗಳ (ಪದ್ಯರೂಪ ಮಂತ್ರಗಳ) ವೃತ್ತಗಳ ಕುರಿತು ಚರ್ಚಿಸುತ್ತದೆ. ವೇದಗಳಲ್ಲಿ ಋಗ್, ಸಾಮ ಮತ್ತು ಹಲವು ಅಥರ್ವ ವೇದದ ಭಾಗಗಳು ಪದ್ಯರೂಪದಲ್ಲಿವೆ. ಯಜುರ್ವೇದವು ಗದ್ಯ ರೂಪದಲ್ಲಿದೆ. ಪಿಂಗಲರಿಂದ ರಚಿತವಾದ ಛಂದಸ್ಸಿನ ಕುರಿತಾದ ಗ್ರಂಥವೇ ಈಗ ಬಳಕೆಯಲ್ಲಿದೆ. ಇದರಲ್ಲಿ ವೇದ ವೃತ್ತಗಳಲ್ಲದೆ ಆಧುನಿಕ ಸಂಸ್ಕೃತದ ಛಂದಸ್ಸುಗಳೂ ಚರ್ಚಿಸಲ್ಪಟ್ಟಿದೆ.
ಛಂದಸ್ಸುಗಳು ಋಕ್ಕುಗಳಲ್ಲಿನ ಅಕ್ಷರ ಸಂಖ್ಯೆಯ ಅನುಗುಣವಾಗಿ ವಿಂಗಡಿಸಲ್ಪಟ್ಟಿದೆ. ವೇದ ಛಂದಸ್ಸುಗಳಲ್ಲಿ ಮುಖ್ಯವಾದವು ಇಂತಿವೆ - ಇಲ್ಲಿನ ಉದಾಹರಣಾ ಋಕ್ಕುಗಳಲ್ಲಿ ಸ್ವರ ವಿನ್ಯಾಸವನ್ನು ಕೊಟ್ಟಿಲ್ಲ:
೧. ಗಾಯತ್ರಿ: ಗಾಯತ್ರಿ ಛಂದಸ್ಸಿನಲ್ಲಿ ೮ ಅಕ್ಷರಗಳ ಮೂರು ಪಾದಗಳಿವೆ (ಪಾದ = ಸಾಲು). ಒಟ್ಟು ೨೪ ಅಕ್ಷರಗಳು. ಬರೆಯುವಾಗ ಅಥವಾ ಉಚ್ಚರಿಸುವಾಗ ಮೊದಲ ಎರೆಡು ಪಾದಗಳನ್ನು ಒಟ್ಟಿಗೆ ಹೇಳಲಾಗುತ್ತದೆ. ಮೂರನೇ ಪಾದವನ್ನು ಬೇರೆಯಾಗಿ ಹೇಳಲಾಗುತ್ತದೆ. ಉದಾಹರಣೆ:
ಋಗ್ವೇದ ಮೊದಲ ಮಂಡಲ, ೪೩ನೇ ಸೂಕ್ತ, ಮೊದಲನೇ ಮಂತ್ರ.
ಕದ್ರುದ್ರಾಯ ಪ್ರಚೇತಸೇ ಮೀಳ್ಹುಷ್ಟಮಾಯ ತವ್ಯಸೇ।
ವೋಚೇಮ ಶಂತಮಂ ಹೃದೇ ।।
೨. ಉಷ್ಣಿಕ್: ಉಷ್ಣಿಕ್ ಛಂದಸ್ಸಿನಲ್ಲಿ ಒಟ್ಟು ೨೮ ಮಂತ್ರಗಳು. ಇದರಲ್ಲಿ ಮೊದಲೆರೆಡು ಪಾದಗಳಲ್ಲಿ ೮ ಅಕ್ಷರಗಳೂ ಕೊನೆಯ ಪಾದದಲ್ಲಿ೧೨ ಅಕ್ಷರಗಳೂ ಇವೆ. ಉದಾಹರಣೆ:
ಋಗ್ವೇದ ಮೊದಲ ಮಂಡಲ, ೯೨ನೇ ಸೂಕ್ತ, ಹದಿನಾರನೇ ಮಂತ್ರ.
ಅಶ್ವಿನಾ ವರ್ತಿರಸ್ಮದಾ ಗೋಮದ್ದಸ್ರಾ ಹಿರಣ್ಯವತ್ ।
ಅರ್ವಾಗ್ರಥಂ ಸಮನಸಾ ನಿ ಯಚ್ಛತಮ್ ।।
೩. ಅನುಷ್ಟುಪ್: ಅನುಷ್ಟುಪ್ ಛಂದಸ್ಸು ಬಹಳ ಪ್ರಸಿದ್ದವಾದುದು. ರಾಮಾಯಣ ಮಹಾಭಾರತಗಳು ಅನುಷ್ಟುಪ್ ಛಂದಸ್ಸಿನಲ್ಲಿದೆ. ಅನುಷ್ಟುಪ್ ಛಂದಸ್ಸಿನಲ್ಲಿ ೮ ಅಕ್ಷರಗಳ ನಾಲ್ಕು ಪಾದಗಳಿವೆ. ಒಟ್ಟು ೩೨ ಅಕ್ಷರಗಳು. ಉದಾಹರಣೆ:
ಋಗ್ವೇದ ಹತ್ತನೇ ಮಂಡಲ, ೯೦ನೇ ಸೂಕ್ತ (ಪುರುಷ ಸೂಕ್ತ), ನಾಲ್ಕನೇ ಮಂತ್ರ.
ತ್ರಿಪಾದೂರ್ಧ್ವ ಉದೖತ್ಪುರುಷಃ ಪಾದೋಸ್ಯೇಹಾಭವತ್ಪುನಃ |
ತತೋ ವಿಶ್ವಂವ್ಯಕ್ರಾಮತ್ಸಾಶನಾನಶನೇ ಅಭಿ ||
೪. ಬೃಹತೀ: ಬೃಹತೀ ಛಂದಸ್ಸಿನಲ್ಲಿ ಒಟ್ಟು ೩೬ ಅಕ್ಷರಗಳಿವೆ. ಒಂದು, ಎರಡು ಮತ್ತು ನಾಲ್ಕನೇ ಪಾದಗಳಲ್ಲಿ ೮ ಅಕ್ಷರಗಳು ಮತ್ತು ಮೂರನೇ ಪಾದದಲ್ಲಿ ೧೨ ಅಕ್ಷರಗಳೂ ಇರುತ್ತವೆ ಇರುತ್ತವೆ. ಉದಾಹರಣೆ:
ಋಗ್ವೇದ ಮೊದಲ ಮಂಡಲ ೩೬ನೇ ಸೂಕ್ತ, ಮೊದಲ ಮಂತ್ರ.
ಪ್ರ ಯದಿತ್ಥಾ ಪರಾವತಃ ಶೋಚಿರ್ನ ಮಾನಸಮಸ್ಯಥ ।
ಕಸ್ಯ ಕ್ರತ್ವಾ ಮರುತಃ ಕಸ್ಯ ವರ್ಪಸಾ ಕಂ ಯಾಥ ಕಂ ಹ ಧೂತಯಃ ।।
ಋಗ್ವೇದ ಮೊದಲ ಮಂಡಲ, ೮೦ನೇ ಸೂಕ್ತ, ಮೊದಲ ಮಂತ್ರ.
ಇತ್ಥಾ ಹಿ ಸೋಮ ಇನ್ಮದೇ ಬ್ರಹ್ಮಾ ಚಕಾರ ವರ್ಧನಮ್ ।
ಶವಿಷ್ಠ ವಜ್ರಿನ್ನೋಜಸಾ ಪೃಥಿವ್ಯಾ ನಿಃ ಶಶಾ ಅಹಿಮರ್ಚನ್ನನು ಸ್ವರಾಜ್ಯಮ್ ।।
೬. ತ್ರಿಷ್ಟುಪ್: ತ್ರಿಷ್ಟುಪ್ ಛಂದಸ್ಸಿನಲ್ಲಿ ಒಟ್ಟು ೪೪ ಅಕ್ಷರಗಳಿವೆ. ಇವು ೧೧ ಅಕ್ಷರಗಳ ನಾಲ್ಕು ಪಾದಗಳಾಗಿ ವಿಂಗಡಿಸಲ್ಪಟ್ಟಿದೆ. ಉದಾಹರಣೆ:
ಋಗ್ವೇದ ಮೊದಲ ಮಂಡಲ, ೯೯ನೇ ಸೂಕ್ತ, ಮೊದಲ ಮಂತ್ರ.
ಜಾತವೇದಸೇ ಸುನವಾಮ ಸೋಮಮರಾತೀಯತೋ ನಿದಹಾತಿ ವೇದಃ ।
ಸ ನಃ ಪರ್ಷದತಿ ದುರ್ಗಾಣಿ ವಿಶ್ವಾ ನಾವೇವ ಸಿಂಧುಂ ದುರಿತಾತ್ಯಗ್ನಿಃ ।।
೭. ಜಗತೀ: ಜಗತೀ ಛಂದಸ್ಸಿನಲ್ಲಿ ೧೨ ಅಕ್ಷರಗಳ ನಾಲ್ಕು ಪಾದಗಳಿರುತ್ತವೆ. ಒಟ್ಟು ೪೮ ಅಕ್ಷರಗಳು. ಉದಾಹರಣೆ:
ಋಗ್ವೇದ ಮೊದಲ ಮಂಡಲ, ೧೪೧ನೇ ಸೂಕ್ತ (ಬಳಿತ್ಥಾ ಸೂಕ್ತ), ಮೊದಲ ಮಂತ್ರ.
ಬಳಿತ್ಥಾ ತದ್ವಪುಷೇ ಧಾಯಿ ದರ್ಶತಂ ದೇವಸ್ಯ ಭರ್ಗಃ ಸಹಸೋ ಯತೋ ಜನಿ।
ಯದೀಮುಪ ಹ್ವರತೇ ಸಾಧತೇ ಮತಿಋತಸ್ಯ ಧೇನಾ ಅನಯಂತ ಸಸೃತಃ ।।
ಈ ೭ ಛಂದಸ್ಸುಗಳಲ್ಲದೆ ೭೬, ೮೦, ೮೪, ೮೮, ೯೨, ೯೬ ಅಕ್ಷರಗಳ ಛಂದಸ್ಸುಗಳೂ ಇವೆ. ಆದರೆ ಅವು ಅಷ್ಟಾಗಿ ಉಪಯೋಗಿಸಲ್ಪಟ್ಟಿಲ್ಲ. ಮೇಲೆ ಹೇಳಿದ ಛಂದಸ್ಸುಗಳಲ್ಲಿಯೂ ವಿವಿಧ ವಿನ್ಯಾಸಗಳಿವೆ. ಆಧುನಿಕ ಸಂಸ್ಕೃತದಲ್ಲಿ ಉಪಯೋಗಿಸುವ ಶಾರ್ದೂಲ ವಿಕ್ರೀಡಿತ, ಸ್ರಗ್ಧರೆ, ಮತ್ತೇಭ ವಿಕ್ರೀಡಿತ ಮುಂತಾದ ಛಂದಸ್ಸುಗಳು ವೇದದಲ್ಲಿಲ್ಲ.
೫.೪. ನಿರುಕ್ತ
ವೇದಾರ್ಥಕ್ಕೆ ಸಹಾಯವಾದ ಶಾಸ್ತ್ರ ನಿರುಕ್ತ. ನಿರುಕ್ತಶಾಸ್ತ್ರವು ಯಾಸ್ಕರಿಂದ ರಚಿಸಲ್ಪಟ್ಟಿದೆ. ಇದರಲ್ಲಿ ಎರಡು ಭಾಗಗಳಿವೆ. ಮೊದಲನೆಯದು ನಿಘಂಟು. ನಿಘಂಟುವಿನಲ್ಲಿ ಕ್ಲಿಷ್ಟ ಪದಗಳ ಅರ್ಥಗಳ ಪಟ್ಟಿಯಿದೆ. ಎರಡನೆಯದು ನಿರುಕ್ತ. ಇದರಲ್ಲಿ ಪದಗಳ ಉತ್ಪತ್ತಿ, ವ್ಯಾಖ್ಯಾನಗಳಿವೆ. ಆಂಗ್ಲದಲ್ಲಿ ನಿರುಕ್ತವನ್ನು etymology ಎಂದು ಕರೆಯುತ್ತಾರೆ.
ನಿಘಂಟುವಿನಲ್ಲಿ ಮೂರು ಭಾಗಗಳಿವೆ. ಮೊದಲ ಭಾಗದಲ್ಲಿ ಮೂರು ಭಾಗಗಳಿವೆ. ಎರಡನೆಯ ಮತ್ತು ಮೂರನೆಯ ಭಾಗಗಳಲ್ಲಿ ಒಂದೊಂದು ಅಧ್ಯಾಯವಿದೆ. ಮೊದಲ ಅಧ್ಯಾಯದಲ್ಲಿ ನಾನಾರ್ಥಗಳೂ, ಎರಡನೆಯದರಲ್ಲಿ ಪ್ರಾಣಿಗಳ ಹೆಸರುಗಳು, ಮೂರನೆಯದರಲ್ಲಿ ಮೊದಲ ಮತ್ತು ಎರಡನೆಯ ಅಧ್ಯಾಯಗಳಲ್ಲಿ ಬರುವ ಪದಗಳ ಗುಣಗಳನ್ನು ಹೇಳಿದೆ. ಎರಡನೇ ಭಾಗದಲ್ಲಿ ವೇದದಲ್ಲಿ ಮಾತ್ರ ಕಂಡುಬರುವ, ಈಗ ಬಳಕೆಯಲ್ಲಿಲ್ಲದ ಪದಗಳ ಅರ್ಥಗಳನ್ನು ವಿವರಿಸಲಾಗಿದೆ. ಕೊನೆಯ ಅಧ್ಯಾಯದಲ್ಲಿ ದೇವತೆಗಳ ಕುರಿತಾಗಿ ಹೇಳಲಾಗಿದೆ.
ನಿರುಕ್ತವು ನಿಘಂಟುವಿನ ವ್ಯಾಖ್ಯಾನವು. ಇದು ವೇದಾರ್ಥಕ್ಕೆ ಬಹು ಮುಖ್ಯವಾದ ಗ್ರಂಥ. ಇಲ್ಲಿ ಕೆಲವು ಕಡೆ ವೇದ ಮಂತ್ರಗಳ ಅರ್ಥವೂ ಕೊಡಲ್ಪಟ್ಟಿದೆ. ನಿರುಕ್ತದಲ್ಲಿ ೧೨ ಅಧ್ಯಾಯಗಳಿವೆ. ಈ ಅಧ್ಯಾಯಗಳಲ್ಲಿ ನಿಘಂಟುವಿನ ಎಲ್ಲ ಅಧ್ಯಾಯಗಳಿಗೆ ವ್ಯಾಖ್ಯಾನಗಳಿವೆ. ವ್ಯಾಖ್ಯಾನಗಳಲ್ಲಿ ಪದಗಳ ಉತ್ಪತ್ತಿ, ಅವುಗಳ ವ್ಯಾಕರಣ ರೀತಿ - ನಾಮಪದ, ಕ್ರಿಯಾಪದ, ಲಿಂಗಗಳು, ನಾನಾರ್ಥಗಳು ಮುಂತಾದವುಗಳ ಬಗ್ಗೆ ಹೇಳಲಾಗಿದೆ.
ವೇದಾರ್ಥಕ್ಕೆ ಯಾಸ್ಕರ ನಿರುಕ್ತವೇ ದಾರಿದೀಪ. ಯಾವುದೇ ವೇದಾರ್ಥಕಾರನೂ ನಿರುಕ್ತವನ್ನು ಮರೆತು ವೇದಾಭ್ಯಾಸ ಮಾಡುವುದು ಸಾಧ್ಯವಿಲ್ಲ.
೫.೫. ಜ್ಯೋತಿಷ
ಜ್ಯೋತಿಷ ಶಾಸ್ತ್ರವು ವೇದದಲ್ಲಿ ಮಾಡುವ ಯಜ್ಞ-ಯಾಗಾದಿ ಕ್ರಮಗಳನ್ನು ಮಾಡಬೇಕಾದ ಕಾಲ ಮಹೂರ್ತಗಳನ್ನು ಕುರಿತು ಚರ್ಚಿಸುತ್ತದೆ. ಗ್ರಹಗತಿಗಳಿಂದ ಮನುಷ್ಯನ ಶುಭಾಶುಭ ಫಲಗಳನ್ನು ತಿಳಿಸುವ ಜ್ಯೋತಿಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.
೫.೬. ಕಲ್ಪ
ಕಲ್ಪ ಸೂತ್ರಗಳಲ್ಲಿ ಶ್ರೌತಸೂತ್ರ, ಗೃಹ್ಯಸೂತ್ರ, ಧರ್ಮಸೂತ್ರ, ಶುಲ್ವಸೂತ್ರಗಳೆಂದು ನಾಲ್ಕು ವಿಧ. ಇವುಗಳಲ್ಲಿ ಶ್ರೌತಸೂತ್ರ ಮತ್ತು ಶುಲ್ವಸೂತ್ರಗಳು ವೇದಕ್ಕೆ ನೇರವಾಗಿ ಸಂಬಂಧಪಟ್ಟುವು. ಗೃಹ್ಯ ಮತ್ತು ಧರ್ಮಸೂತ್ರಗಳು ವೇದವನ್ನು ಆಶ್ರಯಿಸಿ ರಚಿಸಿದ ಪ್ರತ್ಯೇಕ ಗ್ರಂಥಗಳು. ಆದ್ದರಿಂದ ಶ್ರೌತ ಮತ್ತು ಶುಲ್ವಸೂತ್ರಗಳನ್ನು ಮಾತ್ರ ವೇದಾಂಗಗಳು.
ಕಲ್ಪ ಸೂತ್ರಗಳು ಬೇರೆ ಬೇರೆ ವೇದಗಳಿಗೆ ಬೇರೆ ಬೇರೆಯಾಗಿವೆ. ಕಲ್ಪಸೂತ್ರಗಳಿಗೆ ಅವನ್ನು ರಚಿಸಿದ ಋಷಿಗಳ ಹೆಸರಿಡಲಾಗಿದೆ. ಕಲ್ಪ ಸೂತ್ರಗಳಲ್ಲಿ ಯಜ್ಞ ಯಾಗಾದಿಗಳ ಕ್ರಮವೂ, ಅವುಗಳಲ್ಲಿ ಉಪಯೋಗಿಸಬೇಕಾದ ವೇದ ಮಂತ್ರಗಳೂ, ಯಜ್ಞದಲ್ಲಿ ಉಪಯುಕ್ತವಾದ ಅಗ್ನಿಕುಂಡ, ವೇದಿಕೆ, ಸಾಮಗ್ರಿ, ಅವುಗಳ ಪ್ರಮಾಣ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.

ಋಗ್ವೇದಕ್ಕೆ ಅಶ್ವೀಲಾಯನ ಮತ್ತು ಸಾಂಖ್ಯಾಯನ, ಕೃಷ್ಣ ಯಜುರ್ವೇದಕ್ಕೆ ಬೋಧಾಯನ ಮತ್ತು ಆಪಸ್ಥಂಬ, ಶುಕ್ಲ ಯಜುರ್ವೇದಕ್ಕೆ ಕಾತ್ಯಾಯನ, ಸಾಮವೇದಕ್ಕೆ ಲಾಟ್ಯಾಯನ ಶ್ರೌತಸೂತ್ರಗಳಿವೆ. ಇಂದಿಗೂ ಗೋತ್ರ ಪ್ರವರವನ್ನುಚ್ಚರಿಸುವಾಗ ಆಯಾ ಗೋತ್ರದವರು ಆಯಾ ವೇದಗಳಿಗೆ ಸಂಬಂಧಿಸಿದ ಸೂತ್ರಗಳನ್ನು ಉಚ್ಚರಿಸುತ್ತಾರೆ.
ಈ ಆರು ವೇದಾಂಗಗಳಲ್ಲದೆ ವೇದ ಸೂಕ್ತಗಳನ್ನು, ಅವುಗಳಲ್ಲಿರುವ ಮಂತ್ರ ಸಂಖ್ಯೆಗಳನ್ನು, ಸೂಕ್ತಗಳ ಸೇವಾತೆಗಳನ್ನೂ ತಿಳಿಸುವ ಅನುಕ್ರಮಣಿಕೆಗಳೆಂಬ ಗ್ರಂಥಗಳೂ ಇವೆ.
ಈ ಆರು ವೇದಾಂಗಗಳಲ್ಲದೆ ವೇದ ಸೂಕ್ತಗಳನ್ನು, ಅವುಗಳಲ್ಲಿರುವ ಮಂತ್ರ ಸಂಖ್ಯೆಗಳನ್ನು, ಸೂಕ್ತಗಳ ಸೇವಾತೆಗಳನ್ನೂ ತಿಳಿಸುವ ಅನುಕ್ರಮಣಿಕೆಗಳೆಂಬ ಗ್ರಂಥಗಳೂ ಇವೆ.
೬. ವೇದಪಾಠಕ್ರಮ
ಸಾವಿರಾರು ವರ್ಷಗಳ ಕಾಲ ವೇದಗಳು ಅಚ್ಚಳಿಯದಂತೆ ಉಳಿದಿರಬೇಕಾದರೆ ಅದನ್ನು ಕಲಿಯಲು ಒಂದು ಕ್ರಮವಿದ್ದೇ ಇರಬೇಕು. ನಮ್ಮ ಋಷಿಗಳು ವೇದಪಾಠಕ್ಕೆ ಕ್ರಮವನ್ನು ಗೊತ್ತುಪಡಿಸಿದ್ದಾರೆ. ವೇದಗಳನ್ನು ಗುರುವಿನ ಅಥವಾ ತಂದೆಯ ಅಭಿಮುಖವಾಗಿ ಕುಳಿತು ಕಲಿಯಬೇಕು. ಈ ಕಲಿಕೆಗೆ ಒಂದು ಕ್ರಮವಿದೆ. ಈ ಕ್ರಮವು ಇಂದಿಗೂ ರೂಢಿಯಲ್ಲಿದೆ.
ಮೊದಲು ವೇದವನ್ನು ಸಂಹಿತಾ ಪಾಠದಲ್ಲಿ - ಅಂದರೆ ಪೂರ್ಣ ವಾಕ್ಯರೂಪದಲ್ಲಿ - ಅಭ್ಯಾಸ ಮಾಡಬೇಕು. ನಂತರ ವಾಕ್ಯದ ಒಂದೊಂದೇ ಪದಗಳನ್ನು ಬಿಡಿಸಿ ಅಧ್ಯಯನ ಮಾಡಬೇಕು. ಇದನ್ನು ಪದಪಾಠವೆನ್ನುತ್ತಾರೆ. ಇವೆರಡಲ್ಲದೆ ಇನ್ನು ೯ ವಿಧಾನಗಳಿವೆ. ಈ ಪಾಠಗಳನ್ನು ಎರೆಡು ವಿಧವಾಗಿ ವಿಂಗಡಿಸಿದ್ದಾರೆ: ಪ್ರಕೃತಿ ಮತ್ತು ವಿಕೃತಿಗಳು. ಪ್ರಕೃತಿ ವಿಧಾನದಲ್ಲಿ ಪದಗಳನ್ನು ಸಂಹಿತೆಯ ಕ್ರಮವಾಗಿಯೇ ಪಠಿಸಲಾಗುತ್ತದೆ. ವಿಕೃತಿಗಳಲ್ಲಿ ಪದಗಳನ್ನು ಹಿಂದು ಮುಂದಾಗಿಯೂ ಪಠಿಸುತ್ತಾರೆ. ಎಲ್ಲ ಪಾಠಗಲ್ಲಿಯೂ ಸ್ವರ, ವ್ಯಾಕರಣ ನಿಯಮಗಳು ಪಾಲಿಸಲ್ಪಡುತ್ತವೆ. ಸಂಹಿತಾ ಪಾಠ, ಪದಪಾಠ, ಕ್ರಮಪಾಠ ಎಂಬುವು ಪ್ರಕೃತಿಗಳು. ವಿಕೃತಿಗಳು ಎಂಟಿವೆ:
ಜಟಾ ಮಾಲಾ ಶಿಖಾ ರೇಖಾ ಧ್ವಜೋ ದಂಡೋ ರಥೋ ಘನಃ ।
ಅಷ್ಟೌ ವಿಕೃತಯಃ ಪ್ರೋಕ್ತಾಃ ಕ್ರಮಪೂರ್ವಾ ಮಹರ್ಷಿಭಿಃ ।।
ಜಟಾ, ಮಾಲಾ, ಶಿಖಾ, ರೇಖಾ, ಧ್ವಜ, ದಂಡ, ರಥ ಮತ್ತು ಘನ ಎಂಬುವು ಎಂಟು ವಿಕೃತಿಗಳು. ಇವುಗಳಲ್ಲಿ ಜಟಾಪಾಠ ಮತ್ತು ಘನಪಾಠಗಳು ಮಾತ್ರ ಇಂದು ರೂಢಿಯಲ್ಲಿವೆ. ಪಾಠ ಕ್ರಮದಲ್ಲಿ ವಿವಿಧ ಶಾಖೆಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ.
ಉದಾಹರಣೆಗೆ ವೇದಗಳಲೆಲ್ಲ ಅತ್ಯಂತ ಪ್ರಸಿದ್ದವಾದ ಗಾಯತ್ರಿ ಮಂತ್ರವನ್ನು ತೆಗೆದುಕೊಳ್ಳೋಣ. ಗಾಯತ್ರಿ ಮಂತ್ರವು ಋಗ್ವೇದದ ಮೂರನೇ ಮಂಡಲದ ೬೨ನೇ ಸೂಕ್ತದ ೧೦ನೇ ಮಂತ್ರ. ಈ ಮಂತ್ರವು ಸಾಮವೇದದ ೧೪೬೨ನೇ ಮಂತ್ರವಾಗಿಯೂ, ಕೃಷ್ಣಯಜುರ್ವೇದದ ಮೊದಲ ಕಾಂಡ, ಐದನೇ ಪ್ರಶ್ನ ೬ನೇ ಅನುವಾಕದಲ್ಲೂ, ಶುಕ್ಲಯಜುರ್ವೇದದ ಮೂರನೇ ಅಧ್ಯಾಯದಲ್ಲಿಯೂ ಬಂದಿದೆ. ಗಾಯತ್ರಿ ಮಂತ್ರವು ಗಾಯತ್ರಿ ಛಂದಸ್ಸಿನಲ್ಲಿದೆ. ಅಂದರೆ ೮ ಅಕ್ಷರಗಳ ಮೂರು ಪಾದಗಳು. ಒಟ್ಟು ೨೪ ಅಕ್ಷರಗಳು. ಗಾಯತ್ರಿ ಛಂದಸ್ಸಿನಲ್ಲಿರುವ ಎಲ್ಲ ಮಂತ್ರಗಳಲ್ಲಿ ಈ ಮಂತ್ರಕ್ಕೆ ಮಾತ್ರ 'ಗಾಯತ್ರಿ' ಎಂದು ಹೆಸರಿಟ್ಟಿದ್ದಾರೆ.
ಈ ಉದಾಹರಣೆಯ ಪಾಠಕ್ರಮದ ಧ್ವನಿಮುದ್ರಿಕೆಯನ್ನು ಈ ಸ್ಥಳದಲ್ಲಿ ಕೇಳಬಹುದು:
https://www.youtube.com/watch?v=bd8d_tmQoW0
ಸಂಹಿತಾಪಾಠ: ಗಾಯತ್ರಿ ಮಂತ್ರಕ್ಕೆ ವಿಶ್ವಾಮಿತ್ರ ಋಷಿಯೇ ಋಷಿ. ಗಾಯತ್ರಿ ಛಂದಸ್ಸು. ಸವಿತೃ ದೇವತೆ.
। ।। ।। ।
ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ।
_ _ _
। ।।
ಧಿಯೋ ಯೋ ನಃ ಪ್ರಚೋದಯಾತ್ ।।
_ _
ಪದಪಾಠ: ಸಂಹಿತಾ ಪಾಠದ ಪ್ರತಿಯೊಂದು ಪದವನ್ನು ಬಿಡಿಸಿ ಪಠಿಸುವುದು ಪದಪಾಠ. ಸಂಹಿತಾ ಪಾಠದ ಸ್ವರಗಳು ಪದಪಾಠದಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು.
।। । ।

ತತ್ । ಸವಿತುಃ । ವರೇಣ್ಯಂ । ಭರ್ಗಃ । ದೇವಸ್ಯ । ಧೀಮಹಿ ।
_ _ _ _ _ _
। ।।
ಧಿಯಃ । ಯಃ । ನಃ । ಪ್ರ ಚೋದಯಾತ್ ।
_ _ _
ಮೇಲಿನ ಪದಪಾಠದಲ್ಲಿ ೧೦ ಪದಗಳಿವೆ. ಸಂಹಿತಾ ಪಾಠಕ್ಕೂ ಪದಪಾಠಕ್ಕೂ ಇರುವ ಸ್ವರ ವ್ಯತ್ಯಾಸವನ್ನು ಗಮನಿಸಬಹುದು. ಉದಾಹರಣೆಗೆ ಧೀಮಹಿ ಎಂಬ ಪದವು ಇಲ್ಲಿ ಸರ್ವ ಅನುದಾತ್ತವಾಗಿದೆ. ಸಂಹಿತಾ ಪಾಠದಲ್ಲಿ ಧೀಮಹಿ ಪದದ ಎಲ್ಲ ಅಕ್ಷರಗಳೂ ಉದಾತ್ತಗಳು.
ವೇದಪಾಠದಲ್ಲಿ ಮಂತ್ರಾರ್ಥಕ್ಕೆ ತುಂಬಾ ಪ್ರಾಮುಖ್ಯತೆಯಿದೆ. ಅರ್ಥವಿಲ್ಲದ ವೇದಾಭ್ಯಾಸ ವ್ಯರ್ಥವೆಂದು ಅನೇಕ ಕಡೆ ಹೇಳಿದೆ. ಆದ್ದರಿಂದ ವೇದ ಪಾಠಕ್ರಮದಲ್ಲಿ ಮಂತ್ರಾರ್ಥವೂ ಒಳಗೊಂಡಿದೆ. ಗಾಯತ್ರಿ ಮಂತ್ರಕ್ಕೆ ಸಾಯಣಭಾಷ್ಯಾ ರೀತಿಯಾಗಿ ಅರ್ಥವಿಂತಿದೆ.
ಪದಾರ್ಥ:
ಯಃ - ಯಾವನು । ನಃ - ನಮಗೆ । ಧಿಯಃ - ಕರ್ಮವಿಷಯಕವಾದ ಪ್ರಜ್ಞೆಯನ್ನು। ಪ್ರಚೋದಯಾತ್ - ಪ್ರೇರಿಸುತ್ತಾನೆಯೋ । ತತ್ - ಅಂತಹ । ದೇವಸ್ಯ - ದೇವನ । ಸವಿತುಃ - ಸವಿತೃವಿನ ಅಥವಾ ಸೂರ್ಯನ । ವರೇಣ್ಯಂ - ಸರ್ವರಿಂದಲೂ ಪೂಜಿಸಲ್ಪಡತಕ್ಕವನ । ಭರ್ಗಃ - ಜ್ಯೋತಿಯನ್ನು। ಧೀಮಹಿ - ಧ್ಯಾನಿಸುತ್ತೇವೆ.
ಭಾವಾರ್ಥ ಮತ್ತು ವಿವರಣೆ:
ಯಾವ ಸವಿತೃದೇವನು ನಮಗೆ ಕರ್ಮ ವಿಷಯಕವಾದ ಜ್ಞಾನವನ್ನು ಅಥವಾ ಪ್ರಜ್ಞೆಯನ್ನು ಪ್ರರಿಸುತ್ತಾನೋ ಅಂತಹ ದೇವನಾದ ಸವಿತೃವಿನ ವಿಶ್ವಪೂಜ್ಯವಾದ ಜ್ಯೋತಿಯನ್ನು ಧ್ಯಾನಿಸುತ್ತೇವೆ.
ಈ ಮಂತ್ರವು ಸವಿತೃ ದೇವತಾ ಮಂತ್ರವಾಗಿದ್ದರೂ, ಸವಿತೃವಿಗೂ ಇತರ ದೇವತೆಗಳಿಗೂ ಯಾವುದೇ ಭೇದವಿಲ್ಲ ಎಂಬುದನ್ನು ನಾವು 'ಏಕಂ ಸದ್ವಿಪ್ರಾ ಬಹುಧಾ ವದಂತಿ' (ಒಂದೇ ಸತ್ಯವನ್ನು ತಿಳಿದವರು ವಿವಿಧ ರೀತಿಯಲ್ಲಿ ಹೇಳುತ್ತಾರೆ, ಋಗ್ವೇದ ಮೊದಲ ಮಂಡಲ, ೧೬೪ನೇ ಸೂಕ್ತ) ಮುಂತಾದ ವೇದ ಮಂತ್ರಗಳಿಂದಲೇ ತಿಳಿಯಬಹುದು. ಆದ್ದರಿಂದ ಇಲ್ಲಿ ಸವಿತೃ ಅಥವಾ ಸೂರ್ಯನ ಜ್ಯೋತಿ ಎಂದರೆ ಪರತತ್ವ, ಪರಮೇಶ್ವರ ಎಂಬ ಅರ್ಥ ಬರುತ್ತದೆ. ಅಂತೆಯೇ ಜ್ಞಾನಕ್ಕೂ ಅಧ್ಯಾತ್ಮವಾದ 'ಪರತತ್ವ' ಎಂಬ ಅರ್ಥವಿದೆ. ಆಧ್ಯಾತ್ಮಿಕವಾಗಿ ಗಾಯತ್ರೀ ಮಂತ್ರಕ್ಕೆ, 'ಶುದ್ಧ ಜ್ಞಾನವನ್ನು ಕೊಡು ಎಂದು ನಾವು ಪರತತ್ವವನ್ನು ಪ್ರಾರ್ಥಿಸುತ್ತೇವೆ' ಎಂದು ಅರ್ಥೈಸಬಹುದು. ಗಾಯತ್ರಿ ಮಂತ್ರದ ಪೂರ್ಣ ವಿವರಣೆಯನ್ನು ಹೆಚ್.ಪಿ. ವೆಂಕಟರಾಯರ ಋಗ್ವೇದ ಸಂಹಿತೆ ಸಾಯಣ ಭಾಷ್ಯ ಕನ್ನಡ ಅನುವಾದದ ೧೭ನೇ ಪುಸ್ತಕದ ೫೫೫ನೇ ಪುಟದಿಂದ ಮೊದಲಾಗಿ ಸುಮಾರು ೮೦ ಪುಟಗಳಲ್ಲಿ ಕಾಣಬಹುದು.
ಕ್ರಮಪಾಠ:
'ಕ್ರಮೇಣ ಪದದ್ವಯಸ್ಯ ಪಾಠಂ' - ಕ್ರಮ ಪಾಠವೆಂದರೆ ಎರೆಡೆರೆಡು ಪದಗಳನ್ನು ಸ್ವರ ಸಂಧಿ ನಿಯಮಾನುಸಾರವಾಗಿ ಪಠಿಸುವುದು. ಇಲ್ಲಿ ಮೊದಲಿಗೆ ೧ ಮತ್ತು ೨ನೇ ಪದಗಳನ್ನು ಮೊದಲು ಉಚ್ಚರಿಸುತ್ತಾರೆ. ನಂತರ ೨ ಮತ್ತು ೩, ೩ ಮತ್ತು ೪... ಪಾಠ ಹೀಗೆ ಸಾಗುತ್ತದೆ. ಗಾಯತ್ರಿ ಮಂತ್ರದ ಕ್ರಮ ಪಾಠವು ಹೀಗಿದೆ (ಸ್ವರ ನಿಯಮವು ಪದಪಾಠದಲ್ಲಂತೆಯೇ ಇದೆ. ಆದ್ದರಿಂದ ಕೆಳಗೆ ಸ್ವರ ನಿಯಮವನ್ನು ಕೊಡಲಾಗಿಲ್ಲ. ಇದರ ಪಾಠವಿಧಾನವು ಮೇಲೆ ಕೊಟ್ಟಿರುವ ಧ್ವನಿಮುದ್ರಣದಲ್ಲಿದೆ):
ತತ್ಸವಿತುಃ । ಸವಿತುರ್ವರೇಣ್ಯಂ । ವರೇಣ್ಯಂ ಭರ್ಗಃ । ಭರ್ಗೋ ದೇವಸ್ಯ । ದೇವಸ್ಯ ಧೀಮಹಿ । ಧೀಮಹೀತಿ ಧೀಮಹಿ।
ಧಿಯೋ ಯಃ । ಯೋ ನಃ । ನಃ ಪ್ರಚೋದಯಾತ್ । ಪ್ರಚೋದಯಾದಿತಿ ಪ್ರ ಚೋದಯಾತ್ ।
ಕ್ರಮಪಾಠ, ಜಾಟಾಪಾಠ ಮತ್ತು ಘನಪಾಠಗಳಲ್ಲಿನ ಸಾಲುಗಳ ಕೊನೆಯಲ್ಲಿ ಬರುವ 'ಇತಿ' ಪ್ರಯೋಗವು (ಧೀಮಹೀತಿ ಧೀಮಹಿ - ಹೀಗೆ) ಕೆಲವು ಶಾಖೆಗಳಲ್ಲಿ ಇಲ್ಲ. ಕೆಲವು ಶಾಖೆಗಳಲ್ಲಿ ಇದೆ.
ಜಟಾಪಾಟ:
ಜಾಟಾಪಾಠವಾದ ಕ್ರಮ ಹೀಗಿದೆ:
ಮೊದಲ ಸಾಲು.
೧ + ೨ + ೨ + ೧ + ೧ + ೨
ಉತ್ತರಾರ್ಧವನ್ನೂ ಹೀಗೇ ಪಠಿಸಬೇಕು.
ಘನಪಾಠ:
ಘನಪಾಠವೂ ವಿಕೃತಿ. ಘನಪಾಠವೇ ವೇದ ಪಾಠದ ಕೊನೆಯ ಘಟ್ಟ. ಘನಪಾಠವನ್ನು ತಿಳಿದವರನ್ನು ಘನಪಾಠಿಗಳೆನ್ನುತ್ತಾರೆ. ಇವರು ವೇದಾಧ್ಯಯನದಲ್ಲಿ ಪೂರ್ಣ ಪಾರಂಗತರು. ಇವರು ಆಚಾರ್ಯರೆನಿಸಿಕೊಳ್ಳುತ್ತಾರೆ.
ವಿಕೃತಿಗಳಲ್ಲಿ ಪಂಚಸಂಧಿಗಳೆಂಬ ಐದು ಲಕ್ಷಣಗಳಿವೆ. ಅವುಗಳಿಗೆ ಕ್ರಮ, ಉತ್ಕ್ರಮ, ವ್ಯುತ್ಕ್ರಮ, ಅಭಿಕ್ರಮ, ಸಂಕ್ರಮವೆಂದು ಹೆಸರು.
ಕ್ರಮವೆಂದರೆ ಒಂದು ಪದವನ್ನು ಮತ್ತು ಅದರ ಮುಂದಿನ ಪದವನ್ನು ಪಠಿಸುವುದು. ತತ್ಸವಿತುಃ, ಸವಿತುರ್ವರೇಣ್ಯಂ ಹೀಗೆ (೧ + ೨).
ಉತ್ಕ್ರಮವೆಂದರೆ ಒಂದೇ ಪದವನ್ನು ಎರೆಡು ಬಾರಿ ಪಠಿಸುವುದು. ಸವಿತುಃ ಸವಿತುಃ, ಭರ್ಗೋ ಭರ್ಗೋ ಹೀಗೆ (೧+೧, ೨+೨).
ವ್ಯುತ್ಕ್ರಮವೆಂದರೆ ಪದವನ್ನು ಮತ್ತು ಅದರ ಹಿಂದಿನ ಪದವನ್ನು ಪಠಿಸುವುದು. ಸವಿತುಃ ತತ್, ದೇವಸ್ಯ ಭರ್ಗೋ ಹೀಗೆ (೨+೧, ೩+೨).
ಅಭಿಕ್ರಮ (೧+೧), ಸಂಕ್ರಮಗಳು(೨+೧) ಉತ್ಕರ್ಮ, ವ್ಯುತ್ಕರ್ಮಗಳಂತೆಯೇ.
ಘನಪಾಠದ ಲಕ್ಷಣ ಹೀಗಿದೆ:
ಘನಪಾಠದಲ್ಲಿ ಮೊದಲು ಜಟಾಪಾಠದ ಕ್ರಮವನ್ನು ಪಠಿಸಿ ನಂತರ ೧, ೨, ೩ನೇ ಪದಗಳನ್ನು ಒಟ್ಟಾಗಿ ಪಠಿಸಬೇಕು ಅನಂತರ ಮತ್ತೆ ೩, ೨, ೧ ಹೀಗೆ ಪಠಿಸಬೇಕು.
೧ + ೨ + ೨ + ೧ + ೧ + ೨ + ೩ + ೩ + ೨ + ೧ + ೧ + ೨ + ೩
೨ + ೩ + ೩ + ೨ + ೨ + ೩ + ೪ + ೪ + ೩ + ೨ + ೨ + ೩ + ೪
ಇತ್ಯಾದಿ.
ಗಾಯತ್ರಿ ಮಂತ್ರದ ಘನಪಾಠವು ಹೀಗಿದೆ:
ತತ್ಸವಿತುಃ ಸವಿತುಃ ತತ್ ತತ್ ಸವಿತುರ್ವರೇಣ್ಯಂ ವರೇಣ್ಯಗುಂ ಸವಿತುಃ ತತ್ತತ್ಸವಿತುರ್ವರೇಣ್ಯಂ।
೧ + ೨ ೨ + ೧ ೧ + ೨ + ೩ ೩ + ೨ + ೧ ೧ + ೨ + ೩
ವರೇಣ್ಯಂ ಭರ್ಗೋ ಭರ್ಗೋ ವರೇಣ್ಯಂ ವರೇಣ್ಯಂ ಭರ್ಗೋ ದೇವಸ್ಯ ದೇವಸ್ಯ ಭರ್ಗೋ ವರೇಣ್ಯಂ ವರೇಣ್ಯಂ ಭರ್ಗೋ ದೇವಸ್ಯ ।
ಭರ್ಗೋ ದೇವಸ್ಯ ದೇವಸ್ಯ ಭರ್ಗೋ ಭರ್ಗೋ ದೇವಸ್ಯ ಧೀಮಹಿ ಧೀಮಹಿ ದೇವಸ್ಯ ಭರ್ಗೋ ಭರ್ಗೋ ದೇವಸ್ಯ ಧೀಮಹಿ ।
ದೇವಸ್ಯ ಧೀಮಹಿ ಧೀಮಹಿ ದೇವಸ್ಯ ದೇವಸ್ಯ ಧೀಮಹಿ । ಧೀಮಹಿ ಇತಿ ಧೀಮಹಿ ।
ಸ್ಮೃತಿಗಳಲ್ಲಿ ಮುಖ್ಯವಾದವು ಕಲ್ಪಸೂತ್ರಗ್ರಂಥಗಳು. ಕಲ್ಪಸೂತ್ರಗಳಲ್ಲಿ ಶ್ರೌತ ಮತ್ತು ಶುಲ್ಬಸೂತ್ರಗಳು ವೇದಗಳನ್ನು ತಿಳಿಯಲು ಅನುಕೂಲವಾದದ್ದರಿಂದ ಅವುಗಳನ್ನು ವೇದಾಂಗಗಳಾಗಿ ಪರಿಗಣಿಸಲಾಗಿದೆ. ಧರ್ಮಸೂತ್ರಗಳು ಮತ್ತು ಗೃಹ್ಯಸೂತ್ರಗಳು ವೇದಗಳನ್ನು ಆಧರಿಸಿ ರಚಿಸಲ್ಪಟ್ಟ ಪ್ರತ್ಯೇಕ ಗ್ರಂಥಗಳು.
ಸೂತ್ರಗ್ರಂಥಗಳು ವೇದಕಾಲಕ್ಕಿಂತ ತುಂಬಾ ಈಚಿನವು. ಇವುಗಳ ಕಾಲವನ್ನು ಸುಮಾರು ಕ್ರಿ.ಪೂ. ೫೦೦ರಿಂದ ಕ್ರಿ.ಶ. ೨೦೦ರ ವರೆಗೆ ಎಂದು ಅಂದಾಜಿಸಬಹುದು. ಇವು ವೇದಕಾಲೋತ್ತರ ಸಾಮಾಜಿಕ ಜೀವನವನ್ನು ತಿಳಿಯಲು ಸಹಾಯವಾಗುತ್ತವೆ.
ಧರ್ಮಸೂತ್ರಗಳಿಗೆ ಸಾಮಯಾಚಾರಿಕ ಸೂತ್ರಗಳೆಂದೂ ಹೆಸರು. ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಮತ್ತು ಶೂದ್ರ ಪಂಗಡಗಳೂ, ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಆಶ್ರಮದವರೂ ಸಮಾಜಗಳಲ್ಲಿ ಹೇಗೆ ನಡೆಯಬೇಕೆಂದು ತಿಳಿಸಿಕೊಡುತ್ತವೆ. ಧರ್ಮಸೂತ್ರಗಳು ವಿವಿಧ ವೇದಗಳಿಗೆ ಬೇರೆ ಬೇರೆಯಾಗಿದ್ದವೆಂದು ತೋರುತ್ತದೆ. ಆದರೆ ನಮಗೆ ಇಂದು ಸಿಕ್ಕಿರುವುದು ಆಪಸ್ಥಂಬ, ಹಿರಣ್ಯಕೇಶೀಯ ಮತ್ತು ಬೋಧಾಯನ ಧರ್ಮಸೂತ್ರಗಳು ಮಾತ್ರ. ಈ ಧರ್ಮಸೂತ್ರಗಳನ್ನು ಅನುಸರಿಸಿ ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ ಮುಂತಾದವುಗಳು ರಚಿತವಾಗಿವೆ.
ಗೃಹ್ಯಸೂತ್ರಗಳು ಸಂಸಾರಿಯೂ ನಿತ್ಯ ಆಚರಿಸಬೇಕಾದ ಕರ್ಮಗಳ ಬಗ್ಗೆ ತಿಳಿಸುತ್ತವೆ. ಗೃಹ್ಯಸೂತ್ರಗಳೂ ಪ್ರತಿ ವೇದಕ್ಕೆ ಬೇರೆ-ಬೇರೆಯಾಗಿವೆ. ಗೃಹ್ಯಸೂತ್ರಗಳ ಸಾಮಾನ್ಯ ವಿಷಯಗಳು ಪಾಕಯಜ್ಞ, ಬಲಿಹರಣ, ನಾಮಕರಣ, ಚೌಲ, ಉಪನಯನ, ವಿವಾಹ ಮುಂತಾದವುಗಳು. ಋಗ್ವೇದದ ಗೃಹ್ಯಸೂತ್ರಗಳು ಅಶ್ವೀಲಾಯನ ಮತ್ತು ಸಾಂಖ್ಯಾಯನ ಗೃಹ್ಯಸೂತ್ರಗಳು. ಕೃಷ್ಣಯಜುರ್ವೇದದ ಆಪಸ್ಥಂಬ, ಬೋಧಾಯನ, ಶುಕ್ಲ ಯಜುರ್ವೇದದ ಪಾರಸ್ಕರ, ಸಾಮವೇದದ ಗೋಭಿಲ, ಅಥರ್ವವೇದದ ಕೌಶಿಕ ಗೃಹ್ಯಸೂತ್ರಗಳು ಪ್ರಸಿದ್ಧಿಯಾಗಿವೆ.
ರಾಮಾಯಣ ಮಹಾಭಾರತಗಳು ಭಾರತ ಸಾಹಿತ್ಯದ ಅತ್ಯುಷ್ಕೃತ ಗ್ರಂಥಗಳು. ಇವುಗಳನ್ನು ಬರೆದವರು ಕ್ರಮವಾಗಿ ವಾಲ್ಮೀಕಿ ಮತ್ತು ವ್ಯಾಸ ಮಹರ್ಷಿಗಳು. ಈ ಗ್ರಂಥಗಳು ವಿಷ್ಣುವಿನ ಅವತಾರಗಳೆಂದು ಪರಿಗಣಿಸಲಾದ ರಾಮ ಮತ್ತು ಕೃಷ್ಣರ ಕಥೆಗಳು. ವೇದ ಮತ್ತು ಕಲ್ಪಸೂತ್ರಗಳ ಸಂದೇಶವು ಇಲ್ಲಿ ಕಥಾರೂಪದಲ್ಲಿ ವಿವರಿಸಲಾಗಿದೆ. ಇವನ್ನು ಪಂಚಮ ವೇದಗಳೆಂದೂ ಕರೆಯಬಹುದು. ಭಾರತೀಯ ಸನಾತನ ಸಂಸ್ಕೃತಿ ಮತ್ತು ತತ್ವದ ದ್ಯೋತಕಗಳಾದ ಆದಿತ್ಯಹೃದಯ, ವಿದುರನೀತಿ, ಭೀಷ್ಮನೀತಿ, ಭಗವದ್ಗೀತೆ ಮುಂತಾದವುಗಳು ರಾಮಾಯಣ ಮಹಾಭಾರತಗಳಲ್ಲಿ ಬಂದಿವೆ.
ಈ ಗ್ರಂಥಗಳಲ್ಲದೆ ವೇದಗಳನ್ನು ಪ್ರಮಾಣವಾಗಿ ಭಾರತದಲ್ಲಿ ಆರು ತತ್ವಶಾಸ್ತ್ರದ ವಿಭಾಗಗಳಿವೆ. ಅವು: ಸಾಂಖ್ಯ, ಯೋಗ, ವೈಶೇಷಿಕ, ನ್ಯಾಯ, ಮೀಮಾಂಸ ಮತ್ತು ವೇದಾಂತ. ಈ ವಿಷಯಗಳಿಗೆ ಸಂಬಂಧಪಟ್ಟ ಕೆಲವು ಸೂತ್ರ, ಭಾಷ್ಯ, ವಾರ್ತಿಕಗಳೆಂಬ ಗ್ರಂಥಗಳಿವೆ. ಈ ಗ್ರಂಥಗಳು ಸ್ಮೃತಿ ಗ್ರಂಥಗಳಲ್ಲದಿದ್ದರೂ ಭಾರತೀಯ ಸಂಸ್ಕೃತಿಯ ದೃಷ್ಟಿಯಿಂದ ಬಹು ಮುಖ್ಯವಾದವು. ಸಾಂಖ್ಯ ಸೂತ್ರಗಳಲ್ಲಿ ಕಪಿಲ ಮಹರ್ಷಿಯ ಸಾಂಖ್ಯ ಸೂತ್ರಗಳು, ಯೋಗ ತತ್ವದಲ್ಲಿ ಪತಂಜಲಿ ಮಹರ್ಷಿಯ ಯೋಗಸೂತ್ರಗಳು, ವೈಶೇಷಿಕ ತತ್ವದಲ್ಲಿ ಕಣಾದ ಮಹರ್ಷಿಯ ವೈಶೇಷಿಕ ಸೂತ್ರಗಳು, ನ್ಯಾಯಗಳಲ್ಲಿ ಗೌತಮ ಮಹರ್ಷಿಯ ನ್ಯಾಯ ಸೂತ್ರಗಳು, ಮೀಮಾಂಸದಲ್ಲಿ ಜೈಮಿನಿ ಮಹರ್ಷಿಗಳ ಮೀಮಾಂಸಾ ಸೂತ್ರಗಳು ಮತ್ತು ವೇದಾಂತದಲ್ಲಿ ಬಾದರಾಯಣ (ವೇದವ್ಯಾಸರು) ಮಹರ್ಷಿಯ ಬ್ರಹ್ಮಸೂತ್ರಗಳು ಪ್ರಮುಖವಾದವು. ಈ ಸೂತ್ರಗಳಿಗೆ ಅನುಸಾರವಾಗಿ ಈ ತತ್ವಗಳ ಅನುಯಾಯಿಗಳು ಅನೇಕ ಭಾಷ್ಯ, ವಾರ್ತಿಕ ಗ್ರಂಥಗಳನ್ನು ಬರೆದರು.
ಮೇಲೆ ತಿಳಿಸಿದ ಆರು ತತ್ವಗಳಲ್ಲಿ ಮೀಮಾಂಸ ಮತ್ತು ವೇದಾಂತ ತತ್ವಗಳು ಸುಮಾರು ೮-೯ನೇ ಶತಮಾನಗಳವರೆಗೂ ಆಚರಣೆಯಲ್ಲಿದ್ದವು. ವೇದಾಂತವನ್ನು ಉತ್ತರ ಮೀಮಾಂಸೆಯೆಂದೂ ಕರೆಯುತ್ತಾರೆ. ಕುಮಾರಿಲ ಭಟ್ಟರು ಮತ್ತು ಪ್ರಭಾಕರರು ಮುಖ್ಯವಾದ ಮೀಮಾಂಸಾ ಪಂಡಿತರು. ೯ನೇ ಶತಮಾನದ ನಂತರ ವೇದಾಂತ ತತ್ವವು ಪ್ರಸಿದ್ಧವಾಯಿತು. ವೇದಾಂತವು ಮುಖ್ಯವಾಗಿ ಉಪನಿಷತ್ತುಗಳನ್ನು ಆಧರಿಸಿರುವವು. ಇಂದು ನಮ್ಮ ಸಂಪ್ರದಾಯದಲ್ಲಿ ವೇದಾಂತ ಮತವೇ ಮುಖ್ಯವಾಗಿದೆ. ವೇದಾಂತ ತತ್ವದ ಮುಖ್ಯ ಆಚಾರ್ಯರು ಶಂಕರಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು. ಈ ಮೂವರು ಆಚಾರ್ಯರ ತತ್ವ ಸಂದೇಶಗಳೂ ಬೇರೆ ಬೇರೆಯಾಗಿದ್ದರೂ ಇವರೆಲ್ಲರೂ ವೇದಾಂತ ಮತದ ಅನುಯಾಯಿಗಳು. ಆಚಾರ್ಯರ ತತ್ವಗಳನ್ನು ಕ್ರಮವಾಗಿ ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತವೆಂದು ಕರೆಯುತ್ತಾರೆ. ವೇದಾಂತದ ಮೂರು ಮುಖ್ಯ ಗ್ರಂಥಗಳು ಉಪನಿಷತ್ತುಗಳು, ಬಾದರಾಯಣ ಬ್ರಹ್ಮಸೂತ್ರಗಳು ಮತ್ತು ಮಹಾಭಾರತದ ಭಗವದ್ಗೀತೆ. ಈ ಮೂರು ಗ್ರಂಥಗಳನ್ನು ಪ್ರಸ್ಥಾನತ್ರಯಗಳೆಂದು ಕರೆಯುತ್ತಾರೆ. ಪ್ರಸ್ಥಾನತ್ರಯಗಳಿಗೆ ಮೂರು ಆಚಾರ್ಯರೂ ಭಾಷ್ಯಗಳನ್ನು ಬರೆದಿದ್ದಾರೆ.
ಯೋ ವೇದಾದೌ ಸ್ವರಃ ಪ್ರೋಕ್ತೋ ವೆದಾಂತೇನ ಪ್ರತಿಷ್ಠಿತಃ ।
ತಸ್ಯ ಪ್ರಕೃತಿಲೀನಸ್ಯ ಯಃ ಪರಃ ಸ ಮಹೇಶ್ವರಃ ।
_ _ _ _ _ _
। ।।
ಧಿಯಃ । ಯಃ । ನಃ । ಪ್ರ ಚೋದಯಾತ್ ।
_ _ _
ಮೇಲಿನ ಪದಪಾಠದಲ್ಲಿ ೧೦ ಪದಗಳಿವೆ. ಸಂಹಿತಾ ಪಾಠಕ್ಕೂ ಪದಪಾಠಕ್ಕೂ ಇರುವ ಸ್ವರ ವ್ಯತ್ಯಾಸವನ್ನು ಗಮನಿಸಬಹುದು. ಉದಾಹರಣೆಗೆ ಧೀಮಹಿ ಎಂಬ ಪದವು ಇಲ್ಲಿ ಸರ್ವ ಅನುದಾತ್ತವಾಗಿದೆ. ಸಂಹಿತಾ ಪಾಠದಲ್ಲಿ ಧೀಮಹಿ ಪದದ ಎಲ್ಲ ಅಕ್ಷರಗಳೂ ಉದಾತ್ತಗಳು.
ವೇದಪಾಠದಲ್ಲಿ ಮಂತ್ರಾರ್ಥಕ್ಕೆ ತುಂಬಾ ಪ್ರಾಮುಖ್ಯತೆಯಿದೆ. ಅರ್ಥವಿಲ್ಲದ ವೇದಾಭ್ಯಾಸ ವ್ಯರ್ಥವೆಂದು ಅನೇಕ ಕಡೆ ಹೇಳಿದೆ. ಆದ್ದರಿಂದ ವೇದ ಪಾಠಕ್ರಮದಲ್ಲಿ ಮಂತ್ರಾರ್ಥವೂ ಒಳಗೊಂಡಿದೆ. ಗಾಯತ್ರಿ ಮಂತ್ರಕ್ಕೆ ಸಾಯಣಭಾಷ್ಯಾ ರೀತಿಯಾಗಿ ಅರ್ಥವಿಂತಿದೆ.
ಪದಾರ್ಥ:
ಯಃ - ಯಾವನು । ನಃ - ನಮಗೆ । ಧಿಯಃ - ಕರ್ಮವಿಷಯಕವಾದ ಪ್ರಜ್ಞೆಯನ್ನು। ಪ್ರಚೋದಯಾತ್ - ಪ್ರೇರಿಸುತ್ತಾನೆಯೋ । ತತ್ - ಅಂತಹ । ದೇವಸ್ಯ - ದೇವನ । ಸವಿತುಃ - ಸವಿತೃವಿನ ಅಥವಾ ಸೂರ್ಯನ । ವರೇಣ್ಯಂ - ಸರ್ವರಿಂದಲೂ ಪೂಜಿಸಲ್ಪಡತಕ್ಕವನ । ಭರ್ಗಃ - ಜ್ಯೋತಿಯನ್ನು। ಧೀಮಹಿ - ಧ್ಯಾನಿಸುತ್ತೇವೆ.
ಭಾವಾರ್ಥ ಮತ್ತು ವಿವರಣೆ:
ಯಾವ ಸವಿತೃದೇವನು ನಮಗೆ ಕರ್ಮ ವಿಷಯಕವಾದ ಜ್ಞಾನವನ್ನು ಅಥವಾ ಪ್ರಜ್ಞೆಯನ್ನು ಪ್ರರಿಸುತ್ತಾನೋ ಅಂತಹ ದೇವನಾದ ಸವಿತೃವಿನ ವಿಶ್ವಪೂಜ್ಯವಾದ ಜ್ಯೋತಿಯನ್ನು ಧ್ಯಾನಿಸುತ್ತೇವೆ.
ಈ ಮಂತ್ರವು ಸವಿತೃ ದೇವತಾ ಮಂತ್ರವಾಗಿದ್ದರೂ, ಸವಿತೃವಿಗೂ ಇತರ ದೇವತೆಗಳಿಗೂ ಯಾವುದೇ ಭೇದವಿಲ್ಲ ಎಂಬುದನ್ನು ನಾವು 'ಏಕಂ ಸದ್ವಿಪ್ರಾ ಬಹುಧಾ ವದಂತಿ' (ಒಂದೇ ಸತ್ಯವನ್ನು ತಿಳಿದವರು ವಿವಿಧ ರೀತಿಯಲ್ಲಿ ಹೇಳುತ್ತಾರೆ, ಋಗ್ವೇದ ಮೊದಲ ಮಂಡಲ, ೧೬೪ನೇ ಸೂಕ್ತ) ಮುಂತಾದ ವೇದ ಮಂತ್ರಗಳಿಂದಲೇ ತಿಳಿಯಬಹುದು. ಆದ್ದರಿಂದ ಇಲ್ಲಿ ಸವಿತೃ ಅಥವಾ ಸೂರ್ಯನ ಜ್ಯೋತಿ ಎಂದರೆ ಪರತತ್ವ, ಪರಮೇಶ್ವರ ಎಂಬ ಅರ್ಥ ಬರುತ್ತದೆ. ಅಂತೆಯೇ ಜ್ಞಾನಕ್ಕೂ ಅಧ್ಯಾತ್ಮವಾದ 'ಪರತತ್ವ' ಎಂಬ ಅರ್ಥವಿದೆ. ಆಧ್ಯಾತ್ಮಿಕವಾಗಿ ಗಾಯತ್ರೀ ಮಂತ್ರಕ್ಕೆ, 'ಶುದ್ಧ ಜ್ಞಾನವನ್ನು ಕೊಡು ಎಂದು ನಾವು ಪರತತ್ವವನ್ನು ಪ್ರಾರ್ಥಿಸುತ್ತೇವೆ' ಎಂದು ಅರ್ಥೈಸಬಹುದು. ಗಾಯತ್ರಿ ಮಂತ್ರದ ಪೂರ್ಣ ವಿವರಣೆಯನ್ನು ಹೆಚ್.ಪಿ. ವೆಂಕಟರಾಯರ ಋಗ್ವೇದ ಸಂಹಿತೆ ಸಾಯಣ ಭಾಷ್ಯ ಕನ್ನಡ ಅನುವಾದದ ೧೭ನೇ ಪುಸ್ತಕದ ೫೫೫ನೇ ಪುಟದಿಂದ ಮೊದಲಾಗಿ ಸುಮಾರು ೮೦ ಪುಟಗಳಲ್ಲಿ ಕಾಣಬಹುದು.
ಕ್ರಮಪಾಠ:
'ಕ್ರಮೇಣ ಪದದ್ವಯಸ್ಯ ಪಾಠಂ' - ಕ್ರಮ ಪಾಠವೆಂದರೆ ಎರೆಡೆರೆಡು ಪದಗಳನ್ನು ಸ್ವರ ಸಂಧಿ ನಿಯಮಾನುಸಾರವಾಗಿ ಪಠಿಸುವುದು. ಇಲ್ಲಿ ಮೊದಲಿಗೆ ೧ ಮತ್ತು ೨ನೇ ಪದಗಳನ್ನು ಮೊದಲು ಉಚ್ಚರಿಸುತ್ತಾರೆ. ನಂತರ ೨ ಮತ್ತು ೩, ೩ ಮತ್ತು ೪... ಪಾಠ ಹೀಗೆ ಸಾಗುತ್ತದೆ. ಗಾಯತ್ರಿ ಮಂತ್ರದ ಕ್ರಮ ಪಾಠವು ಹೀಗಿದೆ (ಸ್ವರ ನಿಯಮವು ಪದಪಾಠದಲ್ಲಂತೆಯೇ ಇದೆ. ಆದ್ದರಿಂದ ಕೆಳಗೆ ಸ್ವರ ನಿಯಮವನ್ನು ಕೊಡಲಾಗಿಲ್ಲ. ಇದರ ಪಾಠವಿಧಾನವು ಮೇಲೆ ಕೊಟ್ಟಿರುವ ಧ್ವನಿಮುದ್ರಣದಲ್ಲಿದೆ):
ತತ್ಸವಿತುಃ । ಸವಿತುರ್ವರೇಣ್ಯಂ । ವರೇಣ್ಯಂ ಭರ್ಗಃ । ಭರ್ಗೋ ದೇವಸ್ಯ । ದೇವಸ್ಯ ಧೀಮಹಿ । ಧೀಮಹೀತಿ ಧೀಮಹಿ।
ಧಿಯೋ ಯಃ । ಯೋ ನಃ । ನಃ ಪ್ರಚೋದಯಾತ್ । ಪ್ರಚೋದಯಾದಿತಿ ಪ್ರ ಚೋದಯಾತ್ ।
ಕ್ರಮಪಾಠ, ಜಾಟಾಪಾಠ ಮತ್ತು ಘನಪಾಠಗಳಲ್ಲಿನ ಸಾಲುಗಳ ಕೊನೆಯಲ್ಲಿ ಬರುವ 'ಇತಿ' ಪ್ರಯೋಗವು (ಧೀಮಹೀತಿ ಧೀಮಹಿ - ಹೀಗೆ) ಕೆಲವು ಶಾಖೆಗಳಲ್ಲಿ ಇಲ್ಲ. ಕೆಲವು ಶಾಖೆಗಳಲ್ಲಿ ಇದೆ.
ಜಟಾಪಾಟ:
ಜಾಟಾಪಾಠವಾದ ಕ್ರಮ ಹೀಗಿದೆ:
ಮೊದಲ ಸಾಲು.
೧ + ೨ + ೨ + ೧ + ೧ + ೨
ಈಗ ಮೊದಲ ಪದವನ್ನು ಬಿಟ್ಟು ಎರಡನೇ ಪದದಿಂದ:
೨ + ೩ + ೩ + ೨ + ೨ + ೩
ಹೀಗೆಯೇ ಮುಂದುವರೆಯುತ್ತದೆ. ಇಲ್ಲಿ ಪದಗಳನ್ನು ಹಿಂದು ಮುಂದಾಗಿ ಉಪಯೋಗಿಸುವುದರಿಂದ ಜಟಾಪಾಠವು ವಿಕೃತಿ.
ಗಾಯತ್ರಿ ಮಂತ್ರದ ಮೊದಲ ಪಾದದ ಜಟಾಪಾಠದ ಕ್ರಮ:
ತತ್ಸವಿತುಃ ಸವಿತುಃ ತತ್ ತತ್ಸವಿತುಃ ।
ಸವಿತುರ್ವರೇಣ್ಯಂ ವರೇಣ್ಯಗುಂ ಸವಿತುರ್ ಸವಿತುರ್ವರೇಣ್ಯಂ ।
ವರೇಣ್ಯಂ ಭರ್ಗೋ ಭರ್ಗೋ ವರೇಣ್ಯಂ ವರೇಣ್ಯಂ ಭರ್ಗಃ ।
ಭರ್ಗೋ ದೇವಸ್ಯ ದೇವಸ್ಯ ಭರ್ಗೋ ಭರ್ಗೋ ದೇವಸ್ಯ ।
ದೇವಸ್ಯ ಧೀಮಹಿ ಧೀಮಹಿ ದೇವಸ್ಯ ದೇವಸ್ಯ ಧೀಮಹಿ । ಧೀಮಹಿ ಇತಿ ಧೀಮಹಿ ।
ಘನಪಾಠ:
ಘನಪಾಠವೂ ವಿಕೃತಿ. ಘನಪಾಠವೇ ವೇದ ಪಾಠದ ಕೊನೆಯ ಘಟ್ಟ. ಘನಪಾಠವನ್ನು ತಿಳಿದವರನ್ನು ಘನಪಾಠಿಗಳೆನ್ನುತ್ತಾರೆ. ಇವರು ವೇದಾಧ್ಯಯನದಲ್ಲಿ ಪೂರ್ಣ ಪಾರಂಗತರು. ಇವರು ಆಚಾರ್ಯರೆನಿಸಿಕೊಳ್ಳುತ್ತಾರೆ.
ವಿಕೃತಿಗಳಲ್ಲಿ ಪಂಚಸಂಧಿಗಳೆಂಬ ಐದು ಲಕ್ಷಣಗಳಿವೆ. ಅವುಗಳಿಗೆ ಕ್ರಮ, ಉತ್ಕ್ರಮ, ವ್ಯುತ್ಕ್ರಮ, ಅಭಿಕ್ರಮ, ಸಂಕ್ರಮವೆಂದು ಹೆಸರು.
ಕ್ರಮವೆಂದರೆ ಒಂದು ಪದವನ್ನು ಮತ್ತು ಅದರ ಮುಂದಿನ ಪದವನ್ನು ಪಠಿಸುವುದು. ತತ್ಸವಿತುಃ, ಸವಿತುರ್ವರೇಣ್ಯಂ ಹೀಗೆ (೧ + ೨).
ಉತ್ಕ್ರಮವೆಂದರೆ ಒಂದೇ ಪದವನ್ನು ಎರೆಡು ಬಾರಿ ಪಠಿಸುವುದು. ಸವಿತುಃ ಸವಿತುಃ, ಭರ್ಗೋ ಭರ್ಗೋ ಹೀಗೆ (೧+೧, ೨+೨).
ವ್ಯುತ್ಕ್ರಮವೆಂದರೆ ಪದವನ್ನು ಮತ್ತು ಅದರ ಹಿಂದಿನ ಪದವನ್ನು ಪಠಿಸುವುದು. ಸವಿತುಃ ತತ್, ದೇವಸ್ಯ ಭರ್ಗೋ ಹೀಗೆ (೨+೧, ೩+೨).
ಅಭಿಕ್ರಮ (೧+೧), ಸಂಕ್ರಮಗಳು(೨+೧) ಉತ್ಕರ್ಮ, ವ್ಯುತ್ಕರ್ಮಗಳಂತೆಯೇ.
ಘನಪಾಠದ ಲಕ್ಷಣ ಹೀಗಿದೆ:
ಘನಪಾಠದಲ್ಲಿ ಮೊದಲು ಜಟಾಪಾಠದ ಕ್ರಮವನ್ನು ಪಠಿಸಿ ನಂತರ ೧, ೨, ೩ನೇ ಪದಗಳನ್ನು ಒಟ್ಟಾಗಿ ಪಠಿಸಬೇಕು ಅನಂತರ ಮತ್ತೆ ೩, ೨, ೧ ಹೀಗೆ ಪಠಿಸಬೇಕು.
೧ + ೨ + ೨ + ೧ + ೧ + ೨ + ೩ + ೩ + ೨ + ೧ + ೧ + ೨ + ೩
೨ + ೩ + ೩ + ೨ + ೨ + ೩ + ೪ + ೪ + ೩ + ೨ + ೨ + ೩ + ೪
ಇತ್ಯಾದಿ.
ಗಾಯತ್ರಿ ಮಂತ್ರದ ಘನಪಾಠವು ಹೀಗಿದೆ:
ತತ್ಸವಿತುಃ ಸವಿತುಃ ತತ್ ತತ್ ಸವಿತುರ್ವರೇಣ್ಯಂ ವರೇಣ್ಯಗುಂ ಸವಿತುಃ ತತ್ತತ್ಸವಿತುರ್ವರೇಣ್ಯಂ।
೧ + ೨ ೨ + ೧ ೧ + ೨ + ೩ ೩ + ೨ + ೧ ೧ + ೨ + ೩
ಸವಿತುರ್ವರೇಣ್ಯಂ ವರೇಣ್ಯಗುಂ ಸವಿತುರ್ ಸವಿತುರ್ವರೇಣ್ಯಂ ಭರ್ಗೋ ಭರ್ಗೋ ವರೇಣ್ಯಗುಂ ಸವಿತುರ್ ಸವಿತುರ್ವರೇಣ್ಯಂ ಭರ್ಗಃ ।
ಭರ್ಗೋ ದೇವಸ್ಯ ದೇವಸ್ಯ ಭರ್ಗೋ ಭರ್ಗೋ ದೇವಸ್ಯ ಧೀಮಹಿ ಧೀಮಹಿ ದೇವಸ್ಯ ಭರ್ಗೋ ಭರ್ಗೋ ದೇವಸ್ಯ ಧೀಮಹಿ ।
ದೇವಸ್ಯ ಧೀಮಹಿ ಧೀಮಹಿ ದೇವಸ್ಯ ದೇವಸ್ಯ ಧೀಮಹಿ । ಧೀಮಹಿ ಇತಿ ಧೀಮಹಿ ।
೭. ಸ್ಮೃತಿ ಗ್ರಂಥಗಳು
ಹಿಂದೆಯೇ ಹೇಳಿದಂತೆ ಸ್ಮೃತಿಗಳು ನೆನಪಿಟ್ಟುಕೊಳ್ಳವೆಕಾದ ಗ್ರಂಥಗಳು. ವೇದಾಂಗಗಳು ಸ್ಮೃತಿಗಳು. ವೇದಾಂಗಗಳಲ್ಲದೆ ಕಾವ್ಯ, ಇತಿಹಾಸ, ಪುರಾಣ, ರಾಮಾಯಣ, ಮಹಾಭಾರತ ಮುಂತಾದವುಗಳೆಲ್ಲ ಸ್ಮೃತಿಗಳು. ಇವುಗಳಲ್ಲಿ ಕೆಲವನ್ನು ಪುರಾಣಗಳಾಗಿ ವಿಂಗಡಿಸಲಾಗುತ್ತದೆ. ಸ್ಮೃತಿಗಳೆಲ್ಲ ಶ್ರುತಿಗಳ ನಂತರ ರಚಿಸಲ್ಪಟ್ಟವುಗಳು. ಇವಕ್ಕೆಲ್ಲ ಶ್ರುತಿಗಳೇ ಆಧಾರ.ಸ್ಮೃತಿಗಳಲ್ಲಿ ಮುಖ್ಯವಾದವು ಕಲ್ಪಸೂತ್ರಗ್ರಂಥಗಳು. ಕಲ್ಪಸೂತ್ರಗಳಲ್ಲಿ ಶ್ರೌತ ಮತ್ತು ಶುಲ್ಬಸೂತ್ರಗಳು ವೇದಗಳನ್ನು ತಿಳಿಯಲು ಅನುಕೂಲವಾದದ್ದರಿಂದ ಅವುಗಳನ್ನು ವೇದಾಂಗಗಳಾಗಿ ಪರಿಗಣಿಸಲಾಗಿದೆ. ಧರ್ಮಸೂತ್ರಗಳು ಮತ್ತು ಗೃಹ್ಯಸೂತ್ರಗಳು ವೇದಗಳನ್ನು ಆಧರಿಸಿ ರಚಿಸಲ್ಪಟ್ಟ ಪ್ರತ್ಯೇಕ ಗ್ರಂಥಗಳು.
ಸೂತ್ರಗ್ರಂಥಗಳು ವೇದಕಾಲಕ್ಕಿಂತ ತುಂಬಾ ಈಚಿನವು. ಇವುಗಳ ಕಾಲವನ್ನು ಸುಮಾರು ಕ್ರಿ.ಪೂ. ೫೦೦ರಿಂದ ಕ್ರಿ.ಶ. ೨೦೦ರ ವರೆಗೆ ಎಂದು ಅಂದಾಜಿಸಬಹುದು. ಇವು ವೇದಕಾಲೋತ್ತರ ಸಾಮಾಜಿಕ ಜೀವನವನ್ನು ತಿಳಿಯಲು ಸಹಾಯವಾಗುತ್ತವೆ.
ಧರ್ಮಸೂತ್ರಗಳಿಗೆ ಸಾಮಯಾಚಾರಿಕ ಸೂತ್ರಗಳೆಂದೂ ಹೆಸರು. ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಮತ್ತು ಶೂದ್ರ ಪಂಗಡಗಳೂ, ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಆಶ್ರಮದವರೂ ಸಮಾಜಗಳಲ್ಲಿ ಹೇಗೆ ನಡೆಯಬೇಕೆಂದು ತಿಳಿಸಿಕೊಡುತ್ತವೆ. ಧರ್ಮಸೂತ್ರಗಳು ವಿವಿಧ ವೇದಗಳಿಗೆ ಬೇರೆ ಬೇರೆಯಾಗಿದ್ದವೆಂದು ತೋರುತ್ತದೆ. ಆದರೆ ನಮಗೆ ಇಂದು ಸಿಕ್ಕಿರುವುದು ಆಪಸ್ಥಂಬ, ಹಿರಣ್ಯಕೇಶೀಯ ಮತ್ತು ಬೋಧಾಯನ ಧರ್ಮಸೂತ್ರಗಳು ಮಾತ್ರ. ಈ ಧರ್ಮಸೂತ್ರಗಳನ್ನು ಅನುಸರಿಸಿ ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ ಮುಂತಾದವುಗಳು ರಚಿತವಾಗಿವೆ.
ಗೃಹ್ಯಸೂತ್ರಗಳು ಸಂಸಾರಿಯೂ ನಿತ್ಯ ಆಚರಿಸಬೇಕಾದ ಕರ್ಮಗಳ ಬಗ್ಗೆ ತಿಳಿಸುತ್ತವೆ. ಗೃಹ್ಯಸೂತ್ರಗಳೂ ಪ್ರತಿ ವೇದಕ್ಕೆ ಬೇರೆ-ಬೇರೆಯಾಗಿವೆ. ಗೃಹ್ಯಸೂತ್ರಗಳ ಸಾಮಾನ್ಯ ವಿಷಯಗಳು ಪಾಕಯಜ್ಞ, ಬಲಿಹರಣ, ನಾಮಕರಣ, ಚೌಲ, ಉಪನಯನ, ವಿವಾಹ ಮುಂತಾದವುಗಳು. ಋಗ್ವೇದದ ಗೃಹ್ಯಸೂತ್ರಗಳು ಅಶ್ವೀಲಾಯನ ಮತ್ತು ಸಾಂಖ್ಯಾಯನ ಗೃಹ್ಯಸೂತ್ರಗಳು. ಕೃಷ್ಣಯಜುರ್ವೇದದ ಆಪಸ್ಥಂಬ, ಬೋಧಾಯನ, ಶುಕ್ಲ ಯಜುರ್ವೇದದ ಪಾರಸ್ಕರ, ಸಾಮವೇದದ ಗೋಭಿಲ, ಅಥರ್ವವೇದದ ಕೌಶಿಕ ಗೃಹ್ಯಸೂತ್ರಗಳು ಪ್ರಸಿದ್ಧಿಯಾಗಿವೆ.
ರಾಮಾಯಣ ಮಹಾಭಾರತಗಳು ಭಾರತ ಸಾಹಿತ್ಯದ ಅತ್ಯುಷ್ಕೃತ ಗ್ರಂಥಗಳು. ಇವುಗಳನ್ನು ಬರೆದವರು ಕ್ರಮವಾಗಿ ವಾಲ್ಮೀಕಿ ಮತ್ತು ವ್ಯಾಸ ಮಹರ್ಷಿಗಳು. ಈ ಗ್ರಂಥಗಳು ವಿಷ್ಣುವಿನ ಅವತಾರಗಳೆಂದು ಪರಿಗಣಿಸಲಾದ ರಾಮ ಮತ್ತು ಕೃಷ್ಣರ ಕಥೆಗಳು. ವೇದ ಮತ್ತು ಕಲ್ಪಸೂತ್ರಗಳ ಸಂದೇಶವು ಇಲ್ಲಿ ಕಥಾರೂಪದಲ್ಲಿ ವಿವರಿಸಲಾಗಿದೆ. ಇವನ್ನು ಪಂಚಮ ವೇದಗಳೆಂದೂ ಕರೆಯಬಹುದು. ಭಾರತೀಯ ಸನಾತನ ಸಂಸ್ಕೃತಿ ಮತ್ತು ತತ್ವದ ದ್ಯೋತಕಗಳಾದ ಆದಿತ್ಯಹೃದಯ, ವಿದುರನೀತಿ, ಭೀಷ್ಮನೀತಿ, ಭಗವದ್ಗೀತೆ ಮುಂತಾದವುಗಳು ರಾಮಾಯಣ ಮಹಾಭಾರತಗಳಲ್ಲಿ ಬಂದಿವೆ.
ಈ ಗ್ರಂಥಗಳಲ್ಲದೆ ವೇದಗಳನ್ನು ಪ್ರಮಾಣವಾಗಿ ಭಾರತದಲ್ಲಿ ಆರು ತತ್ವಶಾಸ್ತ್ರದ ವಿಭಾಗಗಳಿವೆ. ಅವು: ಸಾಂಖ್ಯ, ಯೋಗ, ವೈಶೇಷಿಕ, ನ್ಯಾಯ, ಮೀಮಾಂಸ ಮತ್ತು ವೇದಾಂತ. ಈ ವಿಷಯಗಳಿಗೆ ಸಂಬಂಧಪಟ್ಟ ಕೆಲವು ಸೂತ್ರ, ಭಾಷ್ಯ, ವಾರ್ತಿಕಗಳೆಂಬ ಗ್ರಂಥಗಳಿವೆ. ಈ ಗ್ರಂಥಗಳು ಸ್ಮೃತಿ ಗ್ರಂಥಗಳಲ್ಲದಿದ್ದರೂ ಭಾರತೀಯ ಸಂಸ್ಕೃತಿಯ ದೃಷ್ಟಿಯಿಂದ ಬಹು ಮುಖ್ಯವಾದವು. ಸಾಂಖ್ಯ ಸೂತ್ರಗಳಲ್ಲಿ ಕಪಿಲ ಮಹರ್ಷಿಯ ಸಾಂಖ್ಯ ಸೂತ್ರಗಳು, ಯೋಗ ತತ್ವದಲ್ಲಿ ಪತಂಜಲಿ ಮಹರ್ಷಿಯ ಯೋಗಸೂತ್ರಗಳು, ವೈಶೇಷಿಕ ತತ್ವದಲ್ಲಿ ಕಣಾದ ಮಹರ್ಷಿಯ ವೈಶೇಷಿಕ ಸೂತ್ರಗಳು, ನ್ಯಾಯಗಳಲ್ಲಿ ಗೌತಮ ಮಹರ್ಷಿಯ ನ್ಯಾಯ ಸೂತ್ರಗಳು, ಮೀಮಾಂಸದಲ್ಲಿ ಜೈಮಿನಿ ಮಹರ್ಷಿಗಳ ಮೀಮಾಂಸಾ ಸೂತ್ರಗಳು ಮತ್ತು ವೇದಾಂತದಲ್ಲಿ ಬಾದರಾಯಣ (ವೇದವ್ಯಾಸರು) ಮಹರ್ಷಿಯ ಬ್ರಹ್ಮಸೂತ್ರಗಳು ಪ್ರಮುಖವಾದವು. ಈ ಸೂತ್ರಗಳಿಗೆ ಅನುಸಾರವಾಗಿ ಈ ತತ್ವಗಳ ಅನುಯಾಯಿಗಳು ಅನೇಕ ಭಾಷ್ಯ, ವಾರ್ತಿಕ ಗ್ರಂಥಗಳನ್ನು ಬರೆದರು.
ಮೇಲೆ ತಿಳಿಸಿದ ಆರು ತತ್ವಗಳಲ್ಲಿ ಮೀಮಾಂಸ ಮತ್ತು ವೇದಾಂತ ತತ್ವಗಳು ಸುಮಾರು ೮-೯ನೇ ಶತಮಾನಗಳವರೆಗೂ ಆಚರಣೆಯಲ್ಲಿದ್ದವು. ವೇದಾಂತವನ್ನು ಉತ್ತರ ಮೀಮಾಂಸೆಯೆಂದೂ ಕರೆಯುತ್ತಾರೆ. ಕುಮಾರಿಲ ಭಟ್ಟರು ಮತ್ತು ಪ್ರಭಾಕರರು ಮುಖ್ಯವಾದ ಮೀಮಾಂಸಾ ಪಂಡಿತರು. ೯ನೇ ಶತಮಾನದ ನಂತರ ವೇದಾಂತ ತತ್ವವು ಪ್ರಸಿದ್ಧವಾಯಿತು. ವೇದಾಂತವು ಮುಖ್ಯವಾಗಿ ಉಪನಿಷತ್ತುಗಳನ್ನು ಆಧರಿಸಿರುವವು. ಇಂದು ನಮ್ಮ ಸಂಪ್ರದಾಯದಲ್ಲಿ ವೇದಾಂತ ಮತವೇ ಮುಖ್ಯವಾಗಿದೆ. ವೇದಾಂತ ತತ್ವದ ಮುಖ್ಯ ಆಚಾರ್ಯರು ಶಂಕರಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು. ಈ ಮೂವರು ಆಚಾರ್ಯರ ತತ್ವ ಸಂದೇಶಗಳೂ ಬೇರೆ ಬೇರೆಯಾಗಿದ್ದರೂ ಇವರೆಲ್ಲರೂ ವೇದಾಂತ ಮತದ ಅನುಯಾಯಿಗಳು. ಆಚಾರ್ಯರ ತತ್ವಗಳನ್ನು ಕ್ರಮವಾಗಿ ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತವೆಂದು ಕರೆಯುತ್ತಾರೆ. ವೇದಾಂತದ ಮೂರು ಮುಖ್ಯ ಗ್ರಂಥಗಳು ಉಪನಿಷತ್ತುಗಳು, ಬಾದರಾಯಣ ಬ್ರಹ್ಮಸೂತ್ರಗಳು ಮತ್ತು ಮಹಾಭಾರತದ ಭಗವದ್ಗೀತೆ. ಈ ಮೂರು ಗ್ರಂಥಗಳನ್ನು ಪ್ರಸ್ಥಾನತ್ರಯಗಳೆಂದು ಕರೆಯುತ್ತಾರೆ. ಪ್ರಸ್ಥಾನತ್ರಯಗಳಿಗೆ ಮೂರು ಆಚಾರ್ಯರೂ ಭಾಷ್ಯಗಳನ್ನು ಬರೆದಿದ್ದಾರೆ.
೮. ಉಪಸಂಹಾರ
ವೇದಗಳು ಅನಂತ ಗ್ರಂಥ ರಾಶಿ. ಈ ವೇದ ಗ್ರಂಥಗಳ ಪರಿಚಯದ ಒಂದು ಸಣ್ಣ ಪ್ರಯತ್ನ ಈ ಲೇಖನ ಮಾಲೆ. ಇಲ್ಲಿ ನನ್ನ ಯಾವುದೇ ಸ್ವಂತ ಕೆಲಸವಿಲ್ಲ. ಇದು ವಿಷಯಗಳ ಸಂಪಾದನೆ. ಪ್ರಸ್ತುತ ಲೇಖನ ಮಾಲೆಯ ಮುಖ್ಯ ಆಕಾರ ಗ್ರಂಥ ಹೆಚ್.ಪಿ. ವೆಂಕಟರಾಯರ ಋಗ್ವೇದ ಸಾಯಣಭಾಷ್ಯದ ಕನ್ನಡ ಅನುವಾದದ ಪೂರ್ವ ಪೀಠಿಕೆ. ಇದಲ್ಲದೆ ಅವಶ್ಯವಿರುವ ಕಡೆ ಬೇರೆ ಗ್ರಂಥಗಳ ಸಹಾಯ ಪಡೆದಿದ್ದೇನೆ. ಧನ್ಯವಾದಗಳು.
ಯೋ ವೇದಾದೌ ಸ್ವರಃ ಪ್ರೋಕ್ತೋ ವೆದಾಂತೇನ ಪ್ರತಿಷ್ಠಿತಃ ।
ತಸ್ಯ ಪ್ರಕೃತಿಲೀನಸ್ಯ ಯಃ ಪರಃ ಸ ಮಹೇಶ್ವರಃ ।
ವೇದಃ ಶಿವಃ ಶಿವೋ ವೇದೋ ವೇದಾಧ್ಯಾಯೀ ಸದಾಶಿವಃ ।
ತಸ್ಮಾದ್ ಸರ್ವ ಪ್ರಯತ್ನೇನ ವೇದಮೇವ ಸದಾ ಜಪೇತ್ ।।
ಯದಕ್ಷರ ಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್ ।
ತತ್ಸರ್ವಂ ಕ್ಷಮ್ಯತಾ ದೇವಾ ವಾಗೀಶ್ವರ ನಮೋಸ್ತುತೇ ।।
ತತ್ಸರ್ವಂ ಕ್ಷಮ್ಯತಾ ದೇವಾ ವಾಗೀಶ್ವರ ನಮೋಸ್ತುತೇ ।।