ದೃಶ್ಯ ೨
(ವಿಷಣ್ಣನಾದ ವಿದೂಷಕನ ಪ್ರವೇಶ)
ವಿದೂಷಕ: (ದೀರ್ಘವಾಗಿ ಉಸಿರೆಳೆದುಕೊಳ್ಳುತ್ತಾ) ಈ ಬೇಟೆಯಾಡುವ ರಾಜನ ಸ್ನೇಹದಿಂದ ನನಗೆ ಸಾಕಾಗಿ ಹೋಗಿದೆ. ಈ ಬೇಸಿಗೆಯಲ್ಲೂ ಇಲ್ಲಿ ಜಿಂಕೆ, ಇಲ್ಲಿ ಹುಲಿ, ಇಲ್ಲಿ ಹಂದಿ ಎಂದು ನೆರಳೇ ವಿರಳವಾದ ಈ ಕಾಡಿನಲ್ಲಿ ಅಲೆದಾಡಿಸುತ್ತಾನೆ! ಎಲೆಗಳಿಂದ ತುಂಬಿ ಬೆಟ್ಟಗಳಿಂದ ಬರುತ್ತಿರುವ ನದಿ ನೀರನ್ನು ಕುಡಿಯಬೇಕಾಗಿದೆ. ಸಮಯವಲ್ಲದ ಸಮಯದಲ್ಲಿ ಹಸಿ ಮಾಂಸದ ಊಟ ಮಾಡಬೇಕಾಗಿದೆ. ಈ ಕುದುರೆಯ ಮೇಲೆ ಕೂತು ಕೂತು ನನ್ನ ಸಂದಿಗಳಲ್ಲಿ ನೋವು ಬಂದು ರಾತ್ರಿಯಲ್ಲೂ ನಿದ್ದೆ ಬಾರದ ಹಾಗಿದೆ. ಬಂದರೂ ಬೆಳಗ್ಗೆಯೇ ಈ ಬೇಟೆಗಾರರ ಕೋಲಾಹಲದಲ್ಲಿ ಬೇಗ ಎಚ್ಚರವಾಗಿಬಿಡುತ್ತದೆ. ಈ ಪೀಡೆಗಳು ತೊಲಗುವ ಹಾಗೇ ಕಾಣುತ್ತಿಲ್ಲ. ಇದೆಲ್ಲದರ ಮೇಲೆ ಗಾಯದ ಮೇಲೆ ಬರೆಯೆಳೆದಂತೆ ಈ ರಾಜ ನಿನ್ನೆ ಆಶ್ರಮಕ್ಕೆ ಹೋಗಿ ಆ ಸುಂದರಿ ಶಕುಂತಲೆಯನ್ನು ನೋಡಿದ ಮೇಲಿನಿಂದ ಊರಿಗೆ ಹೋಗುವ ಮನಸ್ಸೇ ಮಾಡುತ್ತಿಲ್ಲ. ಈ ಯೋಚೆನೆಯಲ್ಲೇ ಬೆಳಗಾಗಿಬಿಟ್ಟಿದೆ. ಇನ್ನೂ ಏನು ಗತಿಯೋ!? ಇಷ್ಟು ಹೊತ್ತಿಗೆ ರಾಜ ಎದ್ದು ಸಿದ್ಧವಾಗಿರಬಹುದು. ನೋಡೋಣ.
(ಸ್ವಲ್ಪ ಮುಂದೆ ಹೋಗಿ ನೋಡುತ್ತಾನೆ)
ಇಗೋ, ಕಾಡು ಹೂಗಳ ಮಾಲೆಹಾಕಿಕೊಂಡು ಕೈಯಲ್ಲಿ ಬಿಲ್ಲು ಹಿಡಿದಿರುವ ಯವನ ಸ್ತ್ರೀಯರ ಮಧ್ಯೆ ನನ್ನ ಪ್ರಿಯಸ್ನೇಹಿತ ಬರುತ್ತಿದ್ದಾನೆ. ಇರಲಿ. ಕೈ ಕಾಲು ನೋಯುತ್ತಿರುವ ನೆಪ ಮಾಡಿಕೊಂಡು ಇಲ್ಲೇ ಕುಳಿತುಕೊಳ್ಳೋಣ. ವಿಶ್ರಾಂತಿಯಾದರೂ ಸಿಕ್ಕುತ್ತದೆ.
(ಒಂದು ಕೋಲು ಹಿಡಿದು ಕುಳಿತುಕೊಳ್ಳುತ್ತಾನೆ, ತನ್ನ ರಕ್ಷಕಿಯರ ಜೊತೆ ರಾಜ ಬರುತ್ತಾನೆ)
ದುಷ್ಯಂತ: ಅವಳೇನೂ ನನಗೆ ಅಷ್ಟು ಸುಲಭದ ದಾರಿಯಲ್ಲ. ಫಲವಿನ್ನೂ ಸಿಕ್ಕಿಲ್ಲದಿದ್ದರೂ ಅವಳ ಭಾವಗಳನ್ನು ಗಮನಿಸಿಯೇ ಒಂದು ರೀತಿಯ ಸಂತೋಷವಿದೆ.
(ಮುಗುಳ್ನಗೆಯಿಂದ)
ಆದರೂ ಅವಳ ಭಾವಗಳನ್ನು ನೆನೆಸಿಕೊಳ್ಳುತ್ತಾ ಅದೇ ನಿಜವೆಂದುಕೊಳ್ಳುವುದೂ ಮೂರ್ಖತ್ವವೇನೋ! ಅವಳು ಎಲ್ಲಿ ನೋಡುತ್ತಿದ್ದರೂ ಅವಳ ದೃಷ್ಟಿ ಮಾತ್ರ ನನ್ನ ಕಡೆಗೆ ಇತ್ತು. ಅವಳ ಸ್ನೇಹಿತೆ 'ಹೋಗಬೇಡ' ಎಂದಾಗ ಅವಳ ಜೊತೆ ಹುಸಿಕೋಪದಿಂದ ಮಾತಾಡಿದ್ದು ನನ್ನ ಮೇಲಿನ ಆಸ್ತೆಯಿಂದಲೇ ಅಲ್ಲವೇ? ಈ ಸಂದರ್ಭಗಳಲ್ಲಿ ಕಾಮಿ ಎಲ್ಲವನ್ನೂ ತನಗೇ ಅನ್ವಯಿಸಿಕೊಳ್ಳುತ್ತಾನೆ.
ವಿದೂಷಕ: (ತಾನಿದ್ದಲ್ಲೇ ಕುಳಿತು) ಅಯ್ಯಾ ಸ್ನೇಹಿತ, ನನ್ನ ಕೈ ಕಾಲುಗಳು ಅಲ್ಲಾಡುತ್ತಿಲ್ಲ. ಬರೀ ಮಾತಲ್ಲೇ ಹೇಳುತ್ತೇನೆ, ಮಹಾರಾಜನಿಗೆ ಜಯವಾಗಲಿ!
ದುಷ್ಯಂತ: ಏನಾಯಿತು ನಿನಗೆ?
ವಿದೂಷಕ: ಏನು? ನೀನೆ ಕಣ್ಣಿಗೆ ಸೂಜಿ ಚುಚ್ಚಿ ಈಗ ಕಣ್ಣೀರಿಗೆ ಕಾರಣ ಕೇಳುತ್ತೀಯಾ?
ದುಷ್ಯಂತ: ಅರ್ಥವಾಗಲಿಲ್ಲ.
ವಿದೂಷಕ: ನದಿಯಲ್ಲಿನ ಯಾವುದೋ ಗಿಡ ಹಿಂದೆ, ಮುಂದೆ, ಹೇಗೆ ಬೇಕೋ ಹಾಗೇ ಹೋಗುತ್ತಿದ್ದರೆ ಅದು ಆ ಗಿಡದ ಶಕ್ತಿಯೋ ಅಥವಾ ನದಿಯ ವೇಗದ ಪ್ರಭಾವವೋ?
ದುಷ್ಯಂತ: ನದಿಯ ವೇಗ.
ವಿದೂಷಕ: ನನ್ನ ಪರಿಸ್ಥಿತಿಯೂ ಹಾಗೇ!
ದುಷ್ಯಂತ: ಹೇಗೆ?!
ವಿದೂಷಕ: ರಾಜಕಾರ್ಯಗಳನ್ನು ಬಿಟ್ಟು ನೀನು ಈ ಕಾಡಿನಲ್ಲಿ ಎಲ್ಲಿಬೇಕಾದರೆ ಅಲ್ಲಿ ಅಲೆಯುತ್ತೀಯ. ನಿನ್ನ ಜೊತೆ ನಾನೂ ಆ ಕುದುರೆ ಮೇಲೆ ಹತ್ತಿ ಅಲೆಯೆಬೇಕು. ನಿನ್ನ ಪ್ರಭಾವದಿಂದ ಈಗ ನನ್ನ ಕಾಲುಗಳು ನೋಯುತ್ತಿವೆ. ಇವತ್ತು ನನ್ನನ್ನು ಬಿಟ್ಟುಬಿಡು. ನಾನು ಇಲ್ಲೇ ವಿಶ್ರಾಂತಿ ಪಡೆಯುತ್ತೇನೆ.
ದುಷ್ಯಂತ: (ಸ್ವಗತ) ಇವನೂ ಹೀಗೆ ಹೇಳುತ್ತಿದ್ದಾನೆ. ನನಗೂ ಕಾಶ್ಯಪಸುತೆಯನ್ನು ನೋಡಿದಾಗಿನಿಂದ ಬೇಟೆಯ ಮೇಲೆ ಮನಸೇ ಇಲ್ಲ. ಆ ಜಿಂಕೆಕಣ್ಣಿನ ಸುಂದರಿಯನ್ನು ನೋಡಿದ ಮೇಲೆ ನನಗೆ ಜಿಂಕೆಗಳನ್ನು ಹೊಡೆಯಲು ಬಿಲ್ಲೆತ್ತಿದರೂ ಅದನ್ನು ಬಗ್ಗಿಸಿ ಬಾಣ ಬಿಡಲು ಆಗುತ್ತಿಲ್ಲ. ಅವಳು ಈ ಪ್ರಾಣಿಗಳಿಗೆ ಹಿಂಸೆ ಮಾಡಬೇಡ ಎಂದು ಉಪದೇಶ ಮಾಡಿದಂತಿದೆ.
ವಿದೂಷಕ: (ರಾಜನ ಮುಖ ನೋಡುತ್ತಾ)
ಈಗ ನಿನ್ನ ಮನಸ್ಸು ಯಾರನ್ನು ಕುರಿತು ಯೋಚಿಸುತ್ತಿದೆ? ನನ್ನದು ಅರಣ್ಯ ರೋದನದಂತಿದೆ.
ದುಷ್ಯಂತ: (ನಗುತ್ತಾ) ನನ್ನ ಸ್ನೇಹಿತ ಮಾತಾಡುವಾಗ ಅಡ್ಡಿಮಾಡಬಾರದೆಂದು ಸುಮ್ಮನಿದ್ದೆ.
ವಿದೂಷಕ: ನೂರು ಕಾಲ ಬಾಳು (ಹೋಗಲು ಅಣಿವಾಗುತ್ತಾನೆ).
ದುಷ್ಯಂತ: ಅಯ್ಯೋ ನಿಲ್ಲು, ನನ್ನ ಮಾತು ಮುಗಿದಿಲ್ಲ.
ವಿದೂಷಕ: ಅಪ್ಪಣೆಯಾಗಲಿ.
ದುಷ್ಯಂತ: ನಿನ್ನ ವಿಶ್ರಾಂತಿಯಾದಮೇಲೆ ನನ್ನದೊಂದು ಅನಾಯಾಸವಾದ ಚಿಕ್ಕ ಕೆಲಸವಿದೆ. ಅದಕ್ಕೆ ನೀನು ಸಹಾಯ ಮಾಡಬೇಕು.
ವಿದೂಷಕ: ಏನದು? ಊಟಕ್ಕೆ ಸಂಬಂಧಿಸಿದೆ? ಹಾಗಾದರೆ ತುಂಬಾ ಸಂತೋಷ.
ದುಷ್ಯಂತ: ಹೇಳುವರೆಗೂ ಇರು. ಯಾರು? ಯಾರಲ್ಲಿ?
(ದೌವಾರಿಕನ ಪ್ರವೇಶ)
ದೌವಾರಿಕ: ಮಹಾರಾಜ ಅಪ್ಪಣೆಯಾಗಲಿ.
ದುಷ್ಯಂತ: ರೈವತಕ, ಸೇನಾಪತಿಯನ್ನು ಕರೆ.
ದೌವಾರಿಕ: ಅಪ್ಪಣೆ.
(ಹೋಗಿ ಸೇನಾಪತಿಯನ್ನು ಕರೆತರುತ್ತಾನೆ)
(ಸೇನಾಪತಿಗೆ)
ಸ್ವಾಮಿ, ರಾಜರು ಏನೋ ಅಪ್ಪಣೆ ಕೊಡುವಂತೆ ಈ ಕಡೆಗೇ ನೋಡುತ್ತಿದ್ದಾರೆ. ದಯವಿಟ್ಟು ಒಳಗೆ ಹೋಗಿ.
ಸೇನಾಪತಿ: (ಒಳಗೆ ಬಂದು ರಾಜನನ್ನು ನೋಡುತ್ತಾ)
ನೋಡಲು ದೋಷದಂತೆ ಕಂಡರೂ ರಾಜರಿಗೆ ಬೇಟೆ ಒಂದು ಗುಣವೇ.. ಮಹಾರಾಜರಿಗೆ ಜಯವಾಗಲಿ. ಬೇಟೆಗೆ ಸಿದ್ಧವಾಗಿದೆ. ಇನ್ನು ತಡವೇಕೆ?
ದುಷ್ಯಂತ: ಮಾಧವ್ಯನ ಮಾತಿನಿಂದ ನನಗೆ ಬೇಟೆಯಲ್ಲಿ ಉತ್ಸಾಹವೇ ಇಲ್ಲ.
ಸೇನಾಪತಿ: (ಸ್ವಗತ) ಸ್ನೇಹಿತನೇ ಸ್ಥಿರವಾಗಿರು! ಈಗ ನಾನು ರಾಜರ ಚಿತ್ತವೃತ್ತಿಯನ್ನು ಮಾತ್ರ ಅನುಸರಿಸುತ್ತೇನೆ.
(ಪ್ರಕಾಶ)
ಮೂರ್ಖರು ಏನಾದರೂ ಹೇಳಲಿ. ನಮಗೆ ನೀವೇ ನಿದರ್ಶನ. ಬೇಟೆಯಿಂದ ಉದರ ಲಘುವಾಗಿ ಪುಷ್ಟವಾಗುತ್ತದೆ. ಪ್ರಾಣಿಗಳ ಚಲನವಲನಗಳ ಬಗ್ಗೆ ನಮಗೆ ತಿಳಿಯುತ್ತದೆ. ಬಿಲ್ಲುಗಾರನಿಗೆ ಚಲಲಕ್ಷ್ಯಗಳ ಮೇಲೆ ಗುರಿಯಿಡುವ ಅಭ್ಯಾಸವಾಗುತ್ತದೆ. ಬೇಟೆಯನ್ನು ವ್ಯಸನವೆನ್ನುವುದು ಸುಳ್ಳು. ಇದಕ್ಕಿಂತ ಹೆಚ್ಚು ವಿನೋದವೆಲ್ಲಿದೆ?
ವಿದುಷಕ: ಇವನೊಬ್ಬ ಬಂದ. ಏ ಉತ್ಸಾಹಿಯೇ, ರಾಜರೇನೋ ವಾಪಸ್ಸು ಬರುತ್ತಾರೆ. ಆದರೆ ನೀನು ಕಾಡಿನಿಂದ ಕಾಡಿಗೆ ಅಲೆಯುತ್ತಾ ಮನುಷ್ಯರ ವಾಸನೆ ಹಿಡಿದ ಯಾವುದೋ ಒಂದು ಕಾಡುಪ್ರಾಣಿಯ ಬಾಯಿಗೆ ಬೀಳುತ್ತೀಯ.
ದುಷ್ಯಂತ: ಸೇನಾಪತಿ ನಾವು ಆಶ್ರಮದ ಹತ್ತಿರವಿದ್ದೇವೆ. ಆದ್ದರಿಂದ ನಿನ್ನ ಮಾತಿಗೆ ನಾನು ಗಮನ ಕೊಡುವುದಿಲ್ಲ. ಎಮ್ಮೆಗಳು ಹಾಯಾಗಿ ನೀರಿನಲ್ಲಿ ತಮ್ಮ ಕೊಂಬುಗಳಿಂದ ಕೆಸರನ್ನು ಎರಚಿಕೊಳ್ಳಲಿ. ಜಿಂಕೆಗಳು ಆರಾಮವಾಗಿ ಮರಗಳ ನೆರಳಿನಲ್ಲಿ ಹುಲ್ಲು ತಿನ್ನುತ್ತಾ ಮೆಲಕು ಹಾಕಿಕೊಳ್ಳಲಿ. ಈಗ ನಿನ್ನ ಮಾತಿಗೆ ನನ್ನ ಸಮ್ಮತವಿಲ್ಲ. ವರಾಹಗಳಿಗೆ ಯಾವುದೇ ತೊಂದರೆ ಬೇಡ. ನಮ್ಮ ಧನಸ್ಸುಗಳಿಗೆ ಸ್ವಲ್ಪ ವಿಶ್ರಾಂತಿ ದೊರೆಯಲಿ.
ಸೇನಾಪತಿ: ಮಹಾರಾಜರ ಚಿತ್ತ.
ದುಷ್ಯಂತ: ಈಗಾಗಲೇ ಬೇಟೆಗೆ ಹೋಗಿರುವವರನ್ನು ಹಿಂದಕ್ಕೆ ಕರೆದು ತಾ. ತಪೋವನಕ್ಕೆ ತೊಂದರೆ ಮಾಡುತ್ತಿರುವ ಸೈನಿಕರನ್ನು ತಡೆ. ಶ್ರಮಪ್ರಧಾನರಾದ ತಪಸ್ವಿಗಳ ಕೋಪ ಗೂಢವಾಗಿರುತ್ತದೆ. ಅದು ಸುಡುವ ಮೊದಲು ಹಿಂದಕ್ಕೆ ಬಂದು ಬಿಡಿ.
ಸೇನಾಪತಿ: ಅಪ್ಪಣೆ ಸ್ವಾಮಿ.
ವಿದೂಷಕ: ನಿನ್ನ ಉತ್ಸಾಹವೆಲ್ಲ ಬತ್ತಿತು. ಇನ್ನು ಹೋಗು.
(ಸೇನಾಪತಿಯ ನಿರ್ಗಮನ)
ದುಷ್ಯಂತ: (ತನ್ನ ಜೊತೆಗೆ ಬಂದವರಿಗೆ)
ನೀವೆಲ್ಲ ಬೇಟೆಯ ವಸ್ತ್ರ ಬದಲಿಸಿ ಹೋಗಿ. ರೈವತಕ ನೀನೂ ನಿನ್ನ ಕೆಲಸ ನೋಡಿಕೋ.
ಎಲ್ಲರೂ: ಅಪ್ಪಣೆ.
(ಎಲ್ಲರೂ ನಿರ್ಗಮಿಸುತ್ತಾರೆ)
ವಿದೂಷಕ: ಒಂದು ನೊಣವೂ ಇಲ್ಲದಂತೆ ಎಲ್ಲರನ್ನೂ ಕಳಿಸಿಬಿಟ್ಟೆ! ಈಗ ಈ ಮರದ ನೆರಳಿನಲ್ಲಿ ಈ ಕಲ್ಲಿನ ಮೇಲೆ ಕುಳಿತು ಮಾತಾಡೋಣ.
ದುಷ್ಯಂತ: ಸರಿ ನಡಿ ಹೋಗೋಣ.
ವಿದೂಷಕ: ಸರಿ ಸರಿ.
(ಇಬ್ಬರೂ ಕುಳಿತುಕೊಳ್ಳುತ್ತಾರೆ)
ದುಷ್ಯಂತ: ಮಾಧವ್ಯ ನಿನ್ನ ಕಣ್ಣುಗಳು ನೋಡುವುದು ಇನ್ನೂ ಎಷ್ಟೋ ಇವೆ. ನೀನು ನೋಡಬೇಕಾಗಿರುವವನ್ನು ನೋಡಿಯೇ ಇಲ್ಲ.
ವಿದೂಷಕ: ಇದರಲ್ಲಿ ನೀನೇ ನನಗಿಂತ ಮುಂದೆ.
ದುಷ್ಯಂತ: ನಾನು ಈಗ ಆ ಆಶ್ರಮದ ಲಲನೆಯಾದ ಶಕುಂತಲೆಯನ್ನು ಕುರಿತು ಹೇಳುತ್ತಿದ್ದೀನಿ.
ವಿದೂಷಕ: (ಸ್ವಾಗತ) ಇರಲಿ. ಇವನಿಗೆ ಜಾಸ್ತಿ ಮಾತಾಡುವುದಕ್ಕೆ ಬಿಡಬಾರದು.
(ಪ್ರಕಾಶ)
ರಾಜ, ನಿನಗೆ ಆ ತಾಪಸ ಕನ್ಯೆ ಹೊಂದುತ್ತಾಳಾ?
ದುಷ್ಯಂತ: ಮಾಧವ್ಯ, ಇಷ್ಟಪಡಬಾರದ ವಸ್ತುಗಳ ಮೇಲೆ ಪೌರವರ ಮನಸ್ಸು ಎಂದೂ ಹಾಯುವುದಿಲ್ಲ. ಇವಳು ಅಪ್ಸರೆಯ ಮಗಳು. ಅರ್ಕ ಮರದ ಮೇಲೆ ಸಿಕ್ಕ ನವಮಾಲಿಕಾ ಕುಸುಮದಂತೆ ಕಣ್ವರಿಗೆ ಇವಳು ಸಿಕ್ಕಿದವಳು.
ವಿದೂಷಕ: (ನಗುತ್ತಾ) ಒಳ್ಳೆ ಖರ್ಜೂರ ತಿಂದು ಬೇಜಾರಾಗಿ ಹುಣಸೆ ಹಣ್ಣು ಬಯಸಿದಂತೆ, ನಿನ್ನ ಅಂತಃಪುರದ ಸ್ತ್ರೀಯರನ್ನು ಬಿಟ್ಟು ಇವಳನ್ನು ಬಯಸುತ್ತಿರುವೆಯಲ್ಲ!
ದುಷ್ಯಂತ: ನೀನು ಅವಳನ್ನು ನೋಡಿಲ್ಲ, ಆದ್ದರಿಂದ ಹೀಗೆ ಹೇಳುತ್ತಿದ್ದೀಯ.
ವಿದೂಷಕ: ನಿನ್ನನ್ನೂ ವಿಸ್ಮಯಗೊಳಿಸುತ್ತಿದೆಯೆಂದರೆ ಅವಳು ರಮಣೀಯವಾಗಿಯೇ ಇರಬೇಕು.
ದುಷ್ಯಂತ: ಯಾಕೆ ಕೇಳುತ್ತೀಯೆ? ಬ್ರಹ್ಮ ಚೆನ್ನಾಗಿ ಯೋಚನೆ ಮಾಡಿ ಮೊದಲು ಇವಳನ್ನು ಮೊದಲು ಮನಸ್ಸಿನಲ್ಲಿ ಕಲ್ಪಿಸಿಕೊಂಡು, ಅದನ್ನು ಒಂದು ಚಿತ್ರವನ್ನಾಗಿ ಬರೆದು, ನಂತರ ಈ ಸ್ತ್ರೀರತ್ನವನ್ನು ಸೃಷ್ಟಿಸಿದಂತಿದೆ.
ವಿದೂಷಕ: ಹಾಗಾದರೆ ನಮ್ಮ ರೂಪವತಿಯರೆಲ್ಲರಿಗಿಂತಲೂ ಇವಳೇ ಹೆಚ್ಚಳದಂತೆ ಆಯಿತು.
ದುಷ್ಯಂತ: ನನ್ನ ಮನಸ್ಸು ಹಾಗೇ ಹೇಳುತ್ತಿದೆ. ಅವಳು ಅಘ್ರಾಣಿಸದ ಪುಷ್ಪ, ಉಗುರು ತಾಗದ ಚಿಗುರು, ರಂಧ್ರ ಮಾಡದ ರತ್ನ, ಅನಾಸ್ವಾದಿತವಾದ ಮಧು. ಅಖಂಡ ಪುಣ್ಯಕ್ಕೂ ಇವಳೇ ಫಲ ಎಂದೇ ನನ್ನ ಮತ. ವಿಧಿ ಈ ಸಂಪತ್ತನ್ನು ಯಾರ ಹಣೆಯಲ್ಲಿ ಬರೆದಿದ್ದಾನೋ ನನಗೆ ಗೊತ್ತಿಲ್ಲ.
ವಿದೂಷಕ: ಅಯ್ಯೋ, ಹಾಗಾದರೆ ಅವಳನ್ನು ಬೇಗ ಹಿಡಿದುಬಿಡು ಹೋಗು! ಇಲ್ಲದಿದ್ದರೆ ಅವಳನ್ನು ಯಾವುದೊ ತಲೆಗೆ ಇಂಗುದೀ ತೈಲ ಹಚ್ಚಿಕೊಳ್ಳುವ ತಪಸ್ವಿಯ ಕೈಯಲ್ಲಿ ಇಟ್ಟುಬಿಟ್ಟಾರು!
ದುಷ್ಯಂತ: ಅವಳು ಬೇರೆಯವರ ಆಶ್ರಯದಲ್ಲಿ ಇರುವವಳು. ಅವಳನ್ನು ನೋಡಿಕೊಳ್ಳುತ್ತಿರುವವರು ಸದ್ಯಕ್ಕೆ ಹತ್ತಿರವಿಲ್ಲ.
ವಿದೂಷಕ: ನಿನ್ನ ಮೇಲೆ ಅವಳ ದೃಷ್ಟಿ, ಅನುರಾಗಗಳು ಹೇಗೆ?
ದುಷ್ಯಂತ: ತಪಸ್ವಿಕನ್ಯೆಯಯರು ಅವರಾಗಿಯೇ ಮುಂದೆ ಬರುವುದಿಲ್ಲ. ಅವರ ಸ್ವಭಾವವೇ ಹಾಗೆ. ಆದರೂ ನಾನು ಅವಳ ಕಡೆ ನೋಡಿದರೆ, ಅವಳು ಮುಖದಲ್ಲಿ ಮಂದಹಾಸವಿರುತ್ತಾ ಬೇರೆ ಕಡೆ ನೋಡುತ್ತಿದ್ದಳು. ಅವಳ ವಿನಯದಿಂದ ಅವಳ ಭಾವ ನನಗೆ ಗೋಚರಿಸಿದಂತೆಯೂ ಇಲ್ಲ, ಗೋಚರಿಸದಂತೆಯೂ ಇಲ್ಲ.
ವಿದೂಷಕ: ಅವಳು ಈಗ ನಿನ್ನನ್ನು ನೋಡಿದ ತಕ್ಷಣ ಅಪ್ಪುಕೊಳ್ಳುವಳು ಎಂದು ನಿನಗೆ ಅನಿಸುತ್ತದೆಯೇ?
ದುಷ್ಯಂತ: ನಾವು ಬೇರೆಯಾಗುವಾಗ ಅವಳು ನಾಚಿಕೆಯಿಂದ ಅವಳ ಭಾವವನ್ನು ತೋರಿಸಿದಳು. ಸುಮ್ಮ ಸುಮ್ಮನೆ ಕಾಲಿಗೆ ಮುಳ್ಳು ಚುಚ್ಚುಕೊಂಡಿಯೆಂದು ಸ್ವಲ್ಪ ಹೊತ್ತು ಅಲ್ಲೇ ನಿಂತಿದ್ದಳು, ಆಮೇಲೆ ತನ್ನ ನಾರು ಬಟ್ಟೆ ಮರಕ್ಕೆ ಸಿಕ್ಕಿಕೊಂಡಿದೆಯೆಂದು ನೆಪ ಮಾಡಿ ಹಿಂದೆ ತಿರುಗಿ ನನ್ನನ್ನೇ ನೋಡುತ್ತಿದ್ದಳು.
ವಿದೂಷಕ: ನಿನ್ನ ಮಾತನ್ನು ಗಮನಿಸಿದರೆ ನೀನು ತಪೋವನವನ್ನು ಉದ್ಯಾನವನವನ್ನಾಗಿ ಪರಿವರ್ತಿಸಿದಂತಿದೆ.
ದುಷ್ಯಂತ: ಆಶ್ರಮದ ಕೆಲವು ತಪಸ್ವಿಗಳು ನನಗೆ ಗೊತ್ತು. ಮತ್ತೆ ಆಶ್ರಮಕ್ಕೆ ಯಾವ ಕಾರಣದಿಂದಲಾದರೂ ಹೋಗಬಹುದೋ? ಯೋಚಿಸು.
ವಿದೂಷಕ: ನೀನು ರಾಜ, ನಿನಗೆ ಯಾವ ನೆಪ ಬೇಕು. ಆ ಋಷಿಗಳಿಗೆ ತಮ್ಮ ಬೆಳೆಯ ಆರನೇ ಒಂದು ಭಾಗವನ್ನು ರಾಜನ ತೆರಿಗೆಯಾಗಿ ತರಲು ಹೇಳು.
ದುಷ್ಯಂತ: ಮೂರ್ಖ, ಬೇರೆಯವರು ಕೊಡುವ ತೆರಿಗೆ ನಶಿಸುತ್ತದೆ. ಇವರು ಕೊಡುವ ತೆರಿಗೆ ಅವರ ತಪಸ್ಸಿನ ಆರನೇ ಒಂದು ಭಾಗ. ಅದು ರತ್ನರಾಶಿಗಳಿಂತಲೂ ಮಿಗಿಲಾದುದು.
(ನೇಪಥ್ಯದಲ್ಲಿ)
ನಾವು ಕೃತಾರ್ಥರಾದೆವು.
ದುಷ್ಯಂತ: (ಆ ಕಡೆ ಕಿವಿ ಕೊಡುತ್ತಾ) ಇದು ಧೀರಪ್ರಶಾಂತವಾದ ಸ್ವರ. ಯಾರೋ ತಪಸ್ವಿಗಳಿರಬಹುದು.
(ದೌವಾರಿಕನ ಪ್ರವೇಶ)
ದೌವಾರಿಕ: ಮಹಾರಾಜರಿಗೆ ಜಯವಾಗಲಿ. ಇಬ್ಬರು ಋಷಿಕುಮಾರರು ಹೊರಗೆ ನಿಂತಿದ್ದಾರೆ.
ದುಷ್ಯಂತ: ತಡಮಾಡದೆ ಅವರನ್ನು ಒಳಗೆ ಕಳುಹಿಸು.
ದೌವಾರಿಕ: ಅಪ್ಪಣೆ ಮಹಾರಾಜ.
(ಹೋಗಿ ಇಬ್ಬರು ಋಷಿಕುಮಾರರ ಜೊತೆ ಬರುತ್ತಾನೆ)
(ಋಷಿ ಕುಮಾರರು ಸ್ವಲ್ಪ ದೂದದಲ್ಲಿ ರಾಜನನ್ನು ನೋಡುತ್ತಾ)
ಮೊದಲನೆಯವ: ಅಹೋ! ರಾಜನ ತೇಜಸ್ಸು ಅವನ ವಿಶ್ವಾಸವನ್ನು ತೋರಿಸುತ್ತಿದೆ. ರಾಜ ಋಷಿಗಳಿಗಿಂತ ಹೆಚ್ಚು ಭಿನ್ನನೇನೂ ಅಲ್ಲ. ಎಲ್ಲರೂ ಭೋಗಿಸಲ್ಪಡುವ ಈ ರಾಜ್ಯವೇ ಅವನ ಆಶ್ರಮ. ಅವನೂ ಎಲ್ಲ ಪ್ರಜೆಗಳನ್ನು ರಕ್ಷಿಸಬೇಕೆಂಬ ತಪಸ್ಸಿನಲ್ಲಿ ನಿರತನಾಗಿದ್ದಾನೆ. ಅವನು ಸ್ವರ್ಗವನ್ನು ಸೇರಿದ ಮೇಲೆ ಋಷಿಗಳಂತೆಯೇ ಚಾರಣರಿಂದ ಸೇವಿಸಲ್ಪಡುತ್ತಾನೆ. ಅವನೂ ಋಷಿಯೇ, ಆದರೆ ರಾಜ ಹಿಂದೆ 'ರಾಜ' ಎಂಬ ಪದವಿರುವುದೊಂದೇ ವ್ಯತ್ಯಾಸ.
ಎರಡನೆಯವ: ಗೌತಮ ಇವನು ಇಂದ್ರಸಖ ದುಷ್ಯಂತನೇ?
ಮೊದಲನೆಯವ: ಹೌದು ಏಕೆ?
ಎರಡನೆಯವ: ರಾಜದ್ವಾರದಂತಹ ತೋಳುಗಳಿಂದ ಇವನು ಆಸಮುದ್ರ ಪರ್ಯಂತ ಈ ಭೂಮಿಯನ್ನು ಕಾಪಾಡುತ್ತಿದ್ದಾನೆ. ದೇವತಾ ಸ್ತ್ರೀಯರು ಕೂಡ ದೈತ್ಯರ ಭಯಬಂದಾಗ ಇಂದ್ರನ ವಜ್ರಾಯುಧದಲ್ಲಿ ಮತ್ತು ಇವನಲ್ಲಿ ಮಾತ್ರ ವಿಶ್ವಾಸವಿಡುತ್ತಾರೆ.
(ಇಬ್ಬರೂ ಹತ್ತಿರ ಬಂದು)
ಇಬ್ಬರೂ: ಮಹಾರಾಜನಿಗೆ ಜಯವಾಗಲಿ.
ದುಷ್ಯಂತ: (ಮೇಲೆ ನಿಂತು) ಋಷಿಕುಮಾರರಿಗೆ ನಮಸ್ಕಾರಗಳು.
ಇಬ್ಬರರೂ: ಸ್ವಸ್ತಿಯಾಗಲಿ (ಹಣ್ಣುಗಳನ್ನು ಕೊಡುತ್ತಾರೆ).
ದುಷ್ಯಂತ: (ಸ್ವೀಕರಿಸಿ) ಮಹಾಶೀರ್ವಾದ. ಅಪ್ಪಣೆಯಾಗಲಿ.
ಇಬ್ಬರೂ: ನೀವು ನಮ್ಮ ಆಶ್ರಮದ ಬಳಿಯೇ ಇರುವಿರೆಂಬುದನ್ನು ತಿಳಿದು ನಮ್ಮ ಪ್ರಾರ್ಥನೆ..
ದುಷ್ಯಂತ: ನಿಮ್ಮ ಅಪ್ಪಣೆಯೇನು?
ಇಬ್ಬರೂ: ಆಶ್ರಮದಲ್ಲಿ ಕಣ್ವಮಹರ್ಷಿಗಳು ಇಲ್ಲದಿರುವ ಕಾರಣ ನಮ ಯಜ್ಞಕ್ಕೆ ರಾಕ್ಷಸರಿಂದ ವಿಘ್ನವಾಗಿದೆ. ನೀವು ದಯವಿಟ್ಟು ನಿಮ್ಮ ಸಾರಥಿಯ ಜೊತೆ ಬಂದು ನಮಗೆ ರಕ್ಷಣೆ ಕೊಡಬೇಕು.
ದುಷ್ಯಂತ: ಅನುಗ್ರಹೀತನಾದೆ.
ವಿದೂಷಕ: (ಪಕ್ಕದಲ್ಲಿ) ಇವರ ಪ್ರಾರ್ಥನೆ ನಿನಗೆ ಅನುಕೂಲವಾಗಿಯೇ ಇದೆ.
ದುಷ್ಯಂತ: (ಸ್ಮಿತವಾದನನಾಗಿ) (ದೌವಾರಿಕನಿಗೆ) ದೌವಾರಿಕ ನನ್ನ ಸಾರಥಿಯನ್ನು ಎಚ್ಚರಿಸು. ಆಯುಧಗಳನ್ನು ರಥದಲ್ಲಿಡಲು ಹೇಳು.
ದೌವಾರಿಕ: ಅಪ್ಪಣೆ ಮಹಾರಾಜ.
(ನಿರ್ಗಮಿಸುತ್ತಾನೆ)
ಋಷಿಕುಮಾರರು: (ಹರ್ಷಿತರಾಗಿ) ಮಹಾರಾಜ ನಿನ್ನ ನಡತೆ ನಿನ್ನ ಪೂರ್ವಿಕರಂತೆಯೇ ಇದೆ. ಪೌರವರು ಆರ್ತರಿಗೆ ಯಾವಾಗಲೂ ರಕ್ಷಣೆಯನ್ನು ಕೊಡುತ್ತಾರೆ.
ದುಷ್ಯಂತ: (ನಮಸ್ಕಾರ ಮಾಡಿ) ನೀವು ಮುಂದೆ ನೆಡೆಯಿರಿ. ನಾನು ನಿಮ್ಮ ಹಿಂದೆ ಬರುತ್ತೇನೆ.
ಇಬ್ಬರೂ: ವಿಜಯಿಯಾಗಿರು.
(ನಿರ್ಗಮಿಸುತ್ತಾರೆ)
ದುಷ್ಯಂತ: ಮಾಧವ್ಯ, ನಿನಗೆ ಶಕುಂತಲೆಯನ್ನು ನೋಡುವ ಕುತೂಹಲವಿದೆಯೇ?
ವಿದೂಷಕ: ಮೊದಲು ಪ್ರವಾದಷ್ಟಿತ್ತು. ಈಗ ರಾಕ್ಷಸರ ಹೆಸರು ಕೇಳಿದ ಮೇಲೆ ಒಂದು ಹನಿಯಷ್ಟೂ ಇಲ್ಲ.
ದುಷ್ಯಂತ: ಹೆದರಬೇಡ. ನಾನು ಹತ್ತಿರ ಇರುತ್ತೇನಲ್ಲ.
ವಿದೂಷಕ: ಹಾಗಿದ್ದರೆ ಸರಿ.
(ದೌವಾರಿಕ ಒಳಗೆ ಬರುತ್ತಾನೆ)
ದೌವಾರಿಕ: ಮಹಾರಾಜರ ವಿಜಯಪ್ರಸ್ಥಾನಕ್ಕೆ ರಥ ಸಜ್ಜಾಗಿದೆ. ಇನ್ನೊಂದು ವಾರ್ತೆ, ರಾಜಮಾತೆಯವರ ಸಂದೇಶ ತಂದು ನಗರದಿಂದ ಕರಭಕ ಬಂದಿದ್ದಾನೆ.
ದುಷ್ಯಂತ: (ಆದರದಿಂದ) ಏನು ತಾಯಿಯಿಂದ ಸಂದೇಶವೇ?
ದೌವಾರಿಕ: ಹೌದು ಮಹಾರಾಜ.
ದುಷ್ಯಂತ: ಅವನನ್ನು ಒಳಗೆ ಕಳುಹಿಸು.
ದೌವಾರಿಕ: ಅಪ್ಪಣೆ.
(ಹೊರಗೆ ಹೋಗಿ ಕರಭಕನ ಜೊತೆ ಬರುತ್ತಾನೆ)
ದೌವಾರಿಕ: ಮಹಾರಾಜರು ಇಲ್ಲಿದ್ದಾರೆ.
ಕರಭಕ: ಮಹಾರಾಜರಿಗೆ ಜಯವಾಗಲಿ. ರಾಜಮಾತೆ ಕಳುಹಿಸಿದ್ದಾರೆ. ಬರುವ ನಾಲ್ಕನೇ ದಿನಕ್ಕೆ ಮಾತೆಯವರ ಉಪವಾಸ ವ್ರತ ಮುಗಿಯುತ್ತದೆ. ಅಷ್ಟರಲ್ಲಿ ನೀವು ಅಲ್ಲಿರಬೇಕಂತೆ.
ದುಷ್ಯಂತ: ಒಂದು ಕಡೆ ತಪಸ್ವಿಗಳ ಕೆಲಸ. ಇನ್ನೊಂದು ಕಡೆ ತಾಯಿಯವರ ಆಜ್ಞೆ. ಎರಡನ್ನೂ ಮೀರುವ ಹಾಗಿಲ್ಲ. ಈಗ ಏನು ಮಾಡೋಣ?
ವಿದೂಷಕ: ತ್ರಿಶಂಕುವಿನಂತೆ ಮಧ್ಯದಲ್ಲಿ ನಿಲ್ಲು.
ದುಷ್ಯಂತ: ಕಷ್ಟಕ್ಕೆ ಬಂದಿತಲ್ಲ. ಒಂದೇ ಸಮಯದಲ್ಲಿ ಎರಡೂ ಕಡೆ ಇರಬೇಕು. ಹರಿಯುತ್ತಿರುವ ನದಿಗೆ ಒಂದು ಬೆಟ್ಟ ಅಡ್ಡವಾಗಿ ಅದು ಎರಡಾಗಿ ಹೋಗುವಂತೆ ನನ್ನ ಮನಸ್ಸೂ ಎರಡಾಗಿದೆ.
(ಯೋಚಿಸಿ)
ಗೆಳೆಯ, ನೀನೂ ನನ್ನ ತಾಯಿಗೆ ಮಗನಂತೆಯೇ. ಆದ್ದರಿಂದ ನೀನು ಹೋಗಿ ಅವರಿಗೆ ನನ್ನ ಇಲ್ಲಿನ ಪರಿಸ್ಥಿತಿಯನ್ನು ವಿವರಿಸಿ, ಮಗ ಮಾಡುವ ಕೆಲಸಗಳನ್ನು ನೀನೇ ಮಾಡು.
ವಿದೂಷಕ: ಏನು ನೀನು ನನ್ನನ್ನು ರಾಕ್ಷಸರಿಗೆ ಹೆದುರುತ್ತೇನೆಂದುಕೊಂಡೆಯಾ?
ದುಷ್ಯಂತ: (ಮುಗುಳ್ನಗೆಯಿಂದ) ಅಯ್ಯೋ ಹಾಗೆ ತಿಳಿಯಲು ಸಾಧ್ಯವೇ?
ವಿದೂಷಕ: ರಾಜನ ಅನುಜನಂತೆ ಹೋಗುತ್ತೇನೆ.
ದುಷ್ಯಂತ: ಈ ತಪೋವನಕ್ಕೆ ತೊಂದರೆಯಾಗಬಾರದಂತೆ ಈ ಪರಿವಾರವನ್ನೆಲ್ಲ ನಿನ್ನ ಜೊತೆಯೇ ಕಳುಹಿಸುತ್ತೇನೆ.
ವಿದೂಷಕ: (ಸ್ವಲ್ಪ ಗರ್ವದಿಂದ) ಹಾಗಾದರೆ ನಾನು ಯುವರಾಜನಾದಂತೆಯೇ.
ದುಷ್ಯಂತ: (ಸ್ವಗತ) ಇವನು ಜಾಸ್ತಿ ಮಾತಾಡುತ್ತಾನೆ. ಇಲ್ಲಿನ ನಮ್ಮ ಮಾತುಗಳನ್ನೆಲ್ಲ ಅಲ್ಲಿ ಅಂತಃಪುರದಲ್ಲಿ ಹೇಳಿಬಿಡಬಹುದು. ಇರಲಿ. ಇದನ್ನು ಹೇಳೋಣ.
(ಪ್ರಕಾಶ)
(ವಿದೂಷಕನ ಕೈ ಹಿಡಿದು)
ಮಾಧವ್ಯ, ಋಷಿಗಳ ಮೇಲಿನ ಗೌರವದಿಂದ ಆಶ್ರಮಕ್ಕೆ ಹೋಗುತ್ತಿದ್ದೇನೆ. ಆ ತಪಸ್ವಿಕನ್ಯೆಯ ಮೇಲಿನ ನನ್ನ ಅಭಿಲಾಷೆ ಸುಳ್ಳು. ನಾವೆಲ್ಲಿ, ಮನ್ಮಥನ ಬಗ್ಗೆಯೇ ಗೊತ್ತಿರದ ಜಿಂಕೆಗಳ ಜೊತೆ ಬೆಳೆದ ಜಿಂಕೆಯಂತಹ ಈ ಜನವೆಲ್ಲಿ? ನಾನು ಈ ಮಾತುಗಳನ್ನು ಸುಮ್ಮನೆ ತಮಾಷೆಗಾಗಿ ಹೇಳಿದೆ. ಗಂಭೀರವಾಗಿ ತೆಗೆದುಕೊಳ್ಳಬೇಡ.
ವಿದೂಷಕ: ಸರಿಯೇ.
(ಎಲ್ಲರೂ ನಿರ್ಗಮಿಸುತ್ತಾರೆ)
(ಎರಡನೇ ದೃಶ್ಯವು ಸಮಾಪ್ತವಾದುದು)

No comments:
Post a Comment